ತೆಹ್ರಿಕ್‌ ಎ ತಾಲಿಬಾನ್‌ ಪಾಕಿಸ್ತಾನ (ಟಿಟಿಪಿ)

ಪಾಕಿಸ್ತಾನದ ತಾಲಿಬಾನ್‌ ಸಂಘಟನೆ ಇತಿಹಾಸ

ಪಾಕಿಸ್ತಾನಿ ತಾಲಿಬಾನ್-ಇದು, ಪಾಕಿಸ್ತಾನದ ಅಫಘಾನ್ ಗಡಿಯಲ್ಲಿ ವಾಯುವ್ಯದಲ್ಲಿರುವ ಫೆಡರಲ್ ಆಡಳಿತದ ಬುಡಕಟ್ಟು ಪ್ರದೇಶಗಳಲ್ಲಿ, ವಿವಿಧ ಇಸ್ಲಾಮಿಕ್ ಉಗ್ರಗಾಮಿ ಗುಂಪುಗಳ ಒಂದು ಆಶ್ರಯಸ್ಥಾನ;(ಕೆಂಪು ಬಣ್ಣ)[೫]

ತೆಹ್ರಿಕ್‌ ಎ ತಾಲಿಬಾನ್‌ ಪಾಕಿಸ್ತಾನ (ಟಿಟಿಪಿ) ಎಂದು ಕರೆಯಿಸಿಕೊಳ್ಳುವ ಈ ಸಂಘಟನೆಯಲ್ಲಿಯೂ ಎಲ್ಲವೂ ಸರಿ ಇಲ್ಲ. ಹಿಂದೊಮ್ಮೆ ಇದು 30 ಉಗ್ರಗಾಮಿ ಗುಂಪುಗಳ ಸಂಘಟನೆ­­ಯಾಗಿತ್ತು. ಜಿಹಾದಿ ಕಮಾಂಡರ್‌ ಬೈತ್‌ ಉಲ್ಲಾ ಮೆಹ್ಸೂದ್ 2007ರಲ್ಲಿ ಇದನ್ನು ಅಧಿಕೃತವಾಗಿ ಸ್ಥಾಪಿಸಿದ್ದ. ಅಮೆರಿಕದ ನಡೆಸಿದ ದಾಳಿಯಲ್ಲಿ ಈತ 2009ರಲ್ಲಿ ಹತನಾದ. ಆರಂಭದ ಅನೇಕ ವರ್ಷಗಳವರೆಗೆ ಇದು ಅಲ್‌ ಕೈದಾ ಸಂಘಟನೆ ಜತೆಗೂಡಿ ವಾಯವ್ಯ ಪಾಕಿಸ್ತಾನದ ಪಶ್ತೂನ್‌ ಆದಿವಾಸಿ ಪ್ರದೇಶಗಳಾದ ಉತ್ತರ ಮತ್ತು ದಕ್ಷಿಣ ವಜಿರಿಸ್ತಾನನಲ್ಲಿ ಸಕ್ರಿಯವಾಗಿತ್ತು.
ಸಂಘಟನೆಯ ಅನೇಕ ಮುಖಂಡರು ಆಫ್ಘಾನಿ­ಸ್ತಾನದ ತಾಲಿಬಾನಿಗರ ಪರ ಹೋರಾಟದಲ್ಲಿಯೂ ಪಾಲ್ಗೊಂಡಿ­ದ್ದರು. 2001ರಲ್ಲಿ ಅಮೆರಿಕವು ಕಾಬೂಲ್‌­ನಲ್ಲಿನ ತಾಲಿ­ಬಾನ್‌ ಸರ್ಕಾರ­ವನ್ನು ಪದ­ಚ್ಯುತ­ಗೊಳಿಸಿದ ನಂತರ ಅನೇಕರು ಪಾಕಿಸ್ತಾನದ ಗಡಿಗೆ ಓಡಿ ಬಂದು ಆಶ್ರಯ ಪಡೆದಿದ್ದರು. ಅಮೆರಿಕದ ಒತ್ತಡ ಹೆಚ್ಚುತ್ತಿದ್ದಂತೆ ಪಾಕಿ­ಸ್ತಾನವು 2003 ಮತ್ತು 2004ರಲ್ಲಿ ಈ ತಾಲಿಬಾನ್‌ ಉಗ್ರರ ಉಪಟಳ ಸದೆಬಡೆಯಲು ಮುಂದಾ­ದರೂ, ಅದು ಸಾದ್ಯವಾಗಲಿಲ್ಲ.

ಉದ್ದೇಶ ಮತ್ತು ಕಾರ್ಯನೀತಿ

ಪಾಕಿಸ್ತಾನದಲ್ಲಿ ತಮ್ಮದೇ ಆಡಳಿತ ನಡೆಸಬೇಕು ಎಂಬ ಉಮೇದಿನಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಸೇನೆ ಮತ್ತು ಭದ್ರತಾ ಪಡೆಗಳ ಮೇಲೆ ತಾಲಿಬಾನ್‌ ಉಗ್ರರು ನಿಯಮಿತವಾಗಿ ದಾಳಿ ನಡೆಸ­ತೊಡಗಿದರು.
ಪಾಕಿಸ್ತಾನದ ತಾಲಿಬಾನ್‌ ಸಂಘಟನೆಯ ಸದ್ಯದ ನಾಯಕ ಮೌಲಾನಾ ಫಜಲುಲ್ಲಾಹ

ಆಫ್ಘಾನಿಸ್ತಾನದಲ್ಲಿನ ಬಂಡಾಯ­ದಲ್ಲಿ ಭಾಗಿಯಾದ ಈ ಸಂಘಟನೆಯು ಅಲ್ಲಿನ ಉಗ್ರರಿಗೂ ನಿರಂತರವಾಗಿ ಅಗತ್ಯ ನೆರವು ನೀಡುತ್ತಿದೆ. ಪಾಕಿಸ್ತಾನದ ಬುಡಕಟ್ಟು ಪ್ರದೇಶಗಳಿಂದ ನೂರಾರು ಆತ್ಮಹತ್ಯಾ ಬಾಂಬರ್‌ಗಳಿಗೆ ತರಬೇತಿ ನೀಡಿ ಆಫ್ಘಾನಿಸ್ತಾನಕ್ಕೆ ಕಳಿಸಿಕೊಟ್ಟಿದೆ. ಆಫ್ಘಾನಿಸ್ತಾನ ತಾಲಿಬಾನ್‌ ಸಂಘ­ಟನೆಯ ಹಕ್ಕಾನಿ ಜಾಲದ ಜತೆಗೂ ನೇರ ಸಂಬಂಧ ಹೊಂದಿದೆ. ಅಲ್‌ಕೈದಾ ಸಂಘಟನೆಗೂ ನೆರವಾಗುತ್ತಿದೆ.

ನಾಯಕತ್ವ

2013ರಲ್ಲಿ ಅಮೆರಿಕ ನಡೆಸಿದ ದಾಳಿಯಲ್ಲಿ ಹಕಿಮುಲ್ಲಾ ಮೆಹ್ಸೂದ್‌ ಹತನಾದ ನಂತರ, ಪಾಕಿಸ್ತಾನ ತಾಲಿಬಾನ್‌ ಸಂಘಟನೆಯನ್ನು ಸದ್ಯಕ್ಕೆ ಮೌಲಾನಾ ಫಜಲುಲ್ಲಾಹ ಮುನ್ನ­ಡೆಸುತ್ತಿದ್ದಾನೆ.

ಪ್ರಮುಖ ದಾಳಿಗಳು

ಪಾಕ್‌ ತಾಲಿಬಾನ್‌ ಉಗ್ರರು ಪಾಕಿಸ್ತಾನದ ಸೇನಾ ನೆಲೆಗಳು, ಬೇಹುಗಾರಿಕೆ ಪಡೆಗಳ ಮೇಲೆ ನಿರಂತರ­ವಾಗಿ ದಾಳಿ ನಡೆಸುತ್ತಲೇ ಬಂದಿದ್ದಾರೆ. ಅವುಗಳ ಪೈಕಿ ಪ್ರಮುಖ­ವಾದವುಗಳು ಹೀಗಿವೆ.

  • 2007ರಲ್ಲಿ ನಡೆದ ಮಾಜಿ ಪ್ರಧಾನಿ ಬೆನಜೀರ್‌ ಭುಟ್ಟೊ ಅವರ ಹತ್ಯೆ ಘಟನೆಯಲ್ಲಿಯೂ ಬೈತ್‌ ಉಲ್ಲಾ ಮೆಹ್ಸೂದ್‌ನ ಕೈವಾಡ ಇದೆ ಎನ್ನುವ ಅನುಮಾನಗಳಿವೆ.
  • 2008ರಲ್ಲಿ ಇಸ್ಲಾಮಾಬಾದ್‌ನ ಪಂಚತಾರಾ ಹೋಟೆಲ್‌, 2009ರಲ್ಲಿ ಪೆಶಾವರದ ಪರ್ಲ್‌ ಕಾಂಟಿನೆಂಟಲ್‌ ಹೋಟೆಲ್‌ ಮೇಲೆಯೂ ಬಾಂಬ್‌ ದಾಳಿ ನಡೆಸಲಾಗಿತ್ತು.
  • ಹೆಣ್ಣು ಮಕ್ಕಳ ಶಿಕ್ಷಣ ಹಕ್ಕನ್ನು ಪ್ರತಿಪಾದಿಸುತ್ತಿದ್ದ ಶಾಲಾ ಬಾಲಕಿ ಮಲಾಲಾ ಯೂಸುಫ್‌ಝೈ ಮೇಲೆ 2012ರಲ್ಲಿ ಗುಂಡಿನ ದಾಳಿ ನಡೆಸಲಾಗಿತ್ತು.
  • ಮುಸ್ಲಿಮರು ಮತ್ತು ಕ್ರೈಸ್ತರ ಬಾಂಧವ್ಯದ ಸಂಕೇತ­ವಾಗಿರುವ ಪೆಶಾವರದ ಆಲ್‌ ಸೇಂಟ್ಸ್‌ ಚರ್ಚ್‌ ಮೇಲೆಯೂ ಆತ್ಮಹತ್ಯಾ ದಾಳಿ ನಡೆಸಲಾ­ಗಿತ್ತು. ಘಟನೆಯಲ್ಲಿ 120 ಜನರು ಹತರಾ­ಗಿದ್ದರು.
  • ಈ ವರ್ಷದ ಜೂನ್‌ನಲ್ಲಿ ಕರಾಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಯಲ್ಲಿ ಉಗ್ರರು ಅನೇಕ ಗಂಟೆಗಳ ಕಾಲ ಸೈನಿಕರ ಜತೆ ಹೋರಾಟ ನಡೆಸಿ 13 ಜನರನ್ನು ಕೊಂದಿದ್ದರು.[೧]

16 ಡಿಸೆಂಬರ್ 2014 ದಾಳಿ

  • ದಿ. ಮಂಗಳವಾರ 16 ಡಿಸೆಂಬರ್ 2014/-ಸೈನಿಕರ ವಿರುದ್ಧ ಪ್ರತೀಕಾರ ಕೈಗೊಳ್ಳುವ ಏಕೈಕ ಉದ್ದೇಶದಿಂದ ಪೆಶಾವರದ ಸೇನಾ ಶಾಲೆಗೆ ನುಗ್ಗಿ ನೂರಕ್ಕೂ ಹೆಚ್ಚು ಅಮಾಯಕ ವಿದ್ಯಾರ್ಥಿ­ಗಳನ್ನು ನಿರ್ದಯ­ವಾಗಿ ಕೊಂದು ಹಾಕಿದೆ. ಶಿಕ್ಷೆಗೆ ಗುರಿಯಾಗಿರುವ ಉಗ್ರರಿಗೆ ಗಲ್ಲಿಗೆ ಏರಿಸುವುದನ್ನು ನಿಲ್ಲಿಸದಿದ್ದರೆ ರಾಜಕಾರಣಿಗಳ ಮಕ್ಕಳನ್ನು ಕೊಲ್ಲು­ವುದು ತನ್ನ ಮುಂದಿನ ಗುರಿಯಾಗಿದೆ ಎಂದೂ ಉಗ್ರರು ಬೆದರಿಕೆ ಹಾಕಿದ್ದಾರೆ.
  • ಪೆಶಾವರದ ಆರ್ಮಿ ಪಬ್ಲಿಕ್ ಸ್ಕೂಲ್ ಮತ್ತು ಪದವಿ ಕಾಲೇಜ್ ನಲ್ಲಿ ಗಂಟೆಗಳ ಕಾಲ ಭಯೋತ್ಪಾದಕರ ಮುತ್ತಿಗೆ ಆರಂಭಿಸಿ, ಮಂಗಳವಾರ ಸಂಜೆ ಅಂತ್ಯಗೊಂಡಾಗ, ಕನಿಷ್ಠ 145 ಜನರು - 132 ಮಕ್ಕಳು, 10 ಶಾಲಾ ಸಿಬ್ಬಂದಿ ಮತ್ತು ಮೂರು ಸೈನಿಕರು - ಸತಿರುವುದಾಗಿ , ಮಿಲಿಟರಿ ವಕ್ತಾರ ಜನರಲ್ ಅಸಿಮ್ ಬಾಜ್ವಾ ಹೇಳಿದ್ದಾರೆ. 100ಕ್ಕೂ ಹೆಚ್ಚು, ಗಾಯಗೊಂಡರು.[೨]

ದಾಳಿಯ ಹೊಣೆಯನ್ನು ತ್ವರಿತವಾಗಿ ತೆಹ್ರೀಕ್-ಇ-ತಾಲಿಬಾನ್, ಪಾಕಿಸ್ತಾನಿ ತಾಲಿಬಾನ್, ಹೊತ್ತುಕೊಂಡಿದೆ. ಅವರ ಪ್ರಬಲ ನೆಲೆ ಅಫಘಾನ್ ಗಡಿ ಹತ್ತಿರದ ಉತ್ತರ ವಝೀರಿಸ್ತಾನ್,ಮೇಲೆ , ಜೂನ್ 2014 ರಿಂದ ಪಾಕಿಸ್ತಾನಿ ಸೇನೆ ನಿರಂತರ ದಾಳಿ ಅಡಿಯಲ್ಲಿ ಸಿಲುಕಿವೆ. ಆ ಸಮಯದಲ್ಲಿ ಕನಿಷ್ಠ 1,200 ಶಂಕಿತ ಉಗ್ರಗಾಮಿಗಳ ಕೊಲ್ಲಲ್ಪಟ್ಟರು ಎಂದು ಹೇಳಲಾಗುತ್ತದೆ. ಈ ಗುಂಪಿನ ವಕ್ತಾರ ಮುಹಮ್ಮದ್ ಉಮರ್ .ಖೊರೇಸಾನಿ, ಏಕೆಂದರೆ: "ಸರ್ಕಾರ ನಮ್ಮ ಕುಟುಂಬಗಳನ್ನು ಮತ್ತು ಹೆಣ್ಣು ಮಕ್ಕಳನ್ನು ಗುರಿ ಮಾಡಿ ಕೊಂದಿದ್ದಾರೆ. ಅದಕ್ಕೆ ನಾವು ದಾಳಿಗೆ ಸೇನಾ ಶಾಲೆಯ ಆಯ್ಕೆ.ಮಾಡಿದ್ದೇವೆ ಅವುಗಳನಮ್ಮ ನೋವನ್ನು ಅವರು ತಿಳಿಯಲೆಂದು ಬಯಸುತ್ತೇವೆ. ಎಂದು ಹೇಳಿದರು."[೩]

  • ಪೇಷಾವರ್ ಆಸ್ಪತ್ರೆ ಅಧಿಕಾರಿಗಳು ಕನಿಷ್ಠ ಏಳು ಶಾಲಾ ಸಿಬ್ಬಂದಿ,ಮತ್ತು ಸರಿಸುಮಾರು ವಿದ್ಯಾರ್ಥಿ/ನಿಯರು ಎಲ್ಲ 12-16 ವರ್ಷದವರು, ಒಟ್ಟು 148.ಮಂದಿ ಕೊಲ್ಲಲ್ಪಟ್ಟರು ಎಂದಿದ್ದಾರೆ. ಸತ್ತ ಮಕ್ಕಳ ಸಂಖ್ಯೆ ಏರುವ ಸಂಭವವಿದೆ,ಎಂದರು,; ಗಾಯಗೊಂಡವರು 132. ಪಾಕಿಸ್ತಾನದ ಪೇಶಾವರದ ಶಾಲೆಯ ದಾಳಿಯಲ್ಲಿ ಸತ್ತವರ ಸಂಖ್ಯೆ 148 ದಾಟುತ್ತದೆ ಎಂದಿದ್ದಾರೆ.[೪]

12/01/2015 ಪುನಃ ಶಾಲೆ ಆರಂಭ

ಚಳಿ­ಗಾಲದ ರಜೆ ನಂತರ ದೇಶದಾದ್ಯಂತ ಸಾವಿರಾರು ಶಿಕ್ಷಣ ಸಂಸ್ಥೆಗಳು ಆರಂಭ ವಾದವು. ಉಗ್ರರ ಬೆದರಿಕೆ ಕಾರಣ ಶಾಲೆಗಳನ್ನು 12 ದಿನಗಳ ಹೆಚ್ಚಿನ ರಜೆ ನಂತರ ಆರಂಭ ಮಾಡಲಾಯಿತು.

ಡಿ.16 ರಂದು ತಾಲಿಬಾನ್ ಉಗ್ರರು ನಡೆಸಿದ ಗುಂಡಿನ ದಾಳಿಗೆ ವಿದ್ಯಾರ್ಥಿ­ಗಳು ಸೇರಿ ಒಟ್ಟು 150 ಜನರು ದಾರುಣವಾಗಿ ಮೃತಪ­ಟ್ಟಿದ್ದರು. ಆನಂತರ ಪಾಕಿಸ್ತಾನದಾ­ದ್ಯಂತ ಶಾಲೆ­ಗಳನ್ನು ಮುಚ್ಚಲಾ­ಗಿತ್ತು. ವಿದ್ಯಾರ್ಥಿಗಳ ಭದ್ರತೆ ಸಂಬಂಧ ಸರ್ಕಾರ ಸೂಚಿಸಿದ ಮಾರ್ಗಸೂಚಿ­ಗಳನ್ನು ಪಾಲಿಸಿದ ಶಿಕ್ಷಣ ಸಂಸ್ಥೆಗಳಿಗೆ ನಿರಾಕ್ಷೇಪಣಾ ಪತ್ರಗಳನ್ನು ನೀಡಲಾ­ಗಿದೆ. ಸಿಸಿಟಿವಿ ಕ್ಯಾಮೆರಾ ಮತ್ತು ಶಾಲೆಗೆ ಎತ್ತರದ ಆವರಣ ಗೋಡೆಗಳನ್ನು ನಿರ್ಮಿಸದ ಶಾಲೆ­ಗಳಿಗೆ ನಿರಾಕ್ಷೇಪಣಾ ಪತ್ರ­ಗಳನ್ನು ನೀಡಲಾಗಿಲ್ಲ.
ಸೇನಾ ಮುಖ್ಯಸ್ಥ ಜ.ರಹೀಲ್‌ ಶರೀಫ್‌ ಪತ್ನಿಯೊಂದಿಗೆ ಶಾಲೆಗೆ ಭೇಟಿ ನೀಡಿದ್ದರು. ಶಾಲೆಯ ಪ್ರವೇಶ­ದ್ವಾರದಲ್ಲೇ ಅವರು ಮಕ್ಕಳನ್ನು ಭೇಟಿ ಮಾಡಿ ಧೈರ್ಯ ತುಂಬಿದರು. ಶಾಲೆಯ ಪ್ರಮುಖ ಪ್ರವೇಶ ದ್ವಾರದಲ್ಲಿ 20 ಯೋಧರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ, ಶಾಲೆಯ ಮುಂಭಾಗದಲ್ಲಿ ವಿಮಾನ ನಿಲ್ದಾಣದ ಮಾದರಿಯ ಗೇಟನ್ನು ಅಳವಡಿಸಲಾಗಿದೆ.
ಉಗ್ರರ ಭಯ ದೂರ ಮಾಡಲು ಶಾಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಆಪ್ತ ಸಮಾ­ಲೋಚನೆ ನಡೆಸಲಾಗುತ್ತದೆ. ಶಾಲೆ ಸೋಮವಾರ ಆರಂಭವಾಗಿದ್ದರೂ ತರಗತಿಗಳು ಇದೇ 19 ರಿಂದ ಅಧಿಕೃತವಾಗಿ ಶುರುವಾಗಲಿವೆ ಎಂದು ಪ್ರಕಟಣೆ ತಿಳಿಸಿದೆ.(13/01/2015-prajavani)
ಪಾಕಿಸ್ತಾನದಲ್ಲಿ ಕಂಡುಬರುವ ಭಯೋತ್ಪಾದಕ ಗುಂಪುಗಳು ಸಕ್ರಿಯವಾಗಿರುವ ಪ್ರದೇಶಗಳು -ಉತ್ತರದ ಗುಡ್ಡಗಾಡು ಪ್ರದೇಶ-ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶ-ದೊಡ್ಡಚಿತ್ರಕ್ಕೆ ಮ್ಯಾಪಿನ ಮೇಲೆ ಕ್ಲಿಕ್ಕಿಸಿ

ಪಾಕಿಸ್ತಾನದಲ್ಲಿರುವ ಇತರ ಗುಂಪುಗಳು

ಅಮೇರಿಕಾದ ಅಧಿಕಾರಿಗಳು ಪಾಕಿಸ್ತಾನದ ಬುಡಕಟ್ಟು ಪ್ರದೇಶಗಳಲ್ಲಿ ಸಕ್ರಿಯವಾಗಿರುವ, ಪಾಕಿಸ್ತಾನದಲ್ಲಿ ಕಂಡುಬರುವ ವಿವಿಧ ಭಯೋತ್ಪಾದಕ ಗುಂಪುಗಳ ಕಾರ್ಯಾಚರಣೆಯನ್ನು ಪ್ರತ್ಯೇಕಿಸಲು ಹೆಚ್ಚೆಚ್ಚು ಕಷ್ಟವಾಗುತ್ತಿದೆ ಎಂದು, ನ್ಯೂಯಾರ್ಕ್ ಟೈಮ್ಸ್ ಒಪ್ಪಿಕೊಂಡದೆ.. ಟಿಟಿಪಿ ಜೊತೆ ಇದೆ ಮತ್ತು ಅದಕ್ಕೆ ಪ್ರೋತ್ಸಾಹ ನೀಡುವುದು ಎಂದು ಭಾವಿಸಲಾಗಿರುವ ವ್ಯಕ್ತಿಗಳ ಮತ್ತು ಗುಂಪುಗಳ /ಸಂಘಟನೆಗಳು ಈ ರೀತಿ ಇವೆ.
  • ಹರ್ಕತ್-ಉಲ್ ಜಿಹಾದ್ ಇಸ್ಲಾಮಿ (ಊuರಿi), ಅಲ್ ಖೈದಾ-ಸಂಯೋಜಿತ ಭಯೋತ್ಪಾದಕ ಸಂಘಟನೆಯ
  • ಇಲ್ಯಾಸ್ ಕಾಶ್ಮೀರಿ - ಕೊಲ್ಲಲ್ಪಟ್ಟರು
  • ಕ್ವಾರಿ ಸೈಫುಲ್ಲಾ ಅಖ್ತರ್
  • ಜಯಿಶಿ -ಇ-ಮೊಹಮ್ಮದ್
  • ಲಷ್ಕರ್ ಇ ಝಂಗ್ವಿ
  • ಲಷ್ಕರ್-ಇ-ತೊಯ್ಬಾ
  • ಸಿಫಾಹ್-ಇ-ಸಾಹಬಾ ಪಾಕಿಸ್ತಾನ [18]
  • ತೆಹ್ರೀಕ್-ಇ-ನಫೀಜ್-ಇ-ಶರಿಯತ್ ಇ ಮೊಹಮ್ಮದಿ (ಸ್ವಾತ್ ಮೂಲ, ಪಾಕಿಸ್ತಾನ)
  • ಸೂಫಿ ಮುಹಮ್ಮದ್ - ಬಂಧಿಸಲಾಯಿತು

(ಇಂದಾ:Tehreek-e-Taliban Pakistan,

ನೋಡಿ

ಉಲ್ಲೇಖ

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.