ತಮಿಳು

ದ್ರಾವಿಡ ಭಾಷೆಗಳಲ್ಲಿ ಬಹಳ ಪ್ರಾಚೀನ ಮತ್ತು ಶ್ರೀಮಂತ ಭಾಷೆ ತಮಿಳು[1]. ತಮಿಳು[2] ಭಾಷೆಯಲ್ಲಿ ದೊರೆತಿರುವ ಕೃತಿಗಳಲ್ಲಿ ಮೊತ್ತಮೊದಲನೆಯದು ತೊಲ್ಕಾಪ್ಪಿಯಂ. ಇದು ಒಂದು ಪ್ರಾಚೀನ ಲಕ್ಷಣ ಗ್ರಂಥ. ಇದರ ಕಾಲ ಕ್ರಿ.ಪೂ.೩ನೇ ಶತಮಾನ. ಪಂಚದ್ರಾವಿಡ ಭಾಷೆಗಳಾದ ತಮಿಳು, ಮಲಯಾಳಂ, ತೆಲುಗು, ಕನ್ನಡ ಮತ್ತು ತುಳುಗಳಲ್ಲಿ ತಮಿಳು ಭಾಷೆಯ ತೀರ ಹಳೆಯದಾದರೆ ನಂತರ ಉಳಿದ ನಾಲ್ಕು ಭಾಷೆಗಳು ಬರುತ್ತವೆ. ಈ ಎಲ್ಲ ಭಾಷೆಗಳಲ್ಲೂ ಬರವಣಿಗೆ ಎಡದಿಂದ ಬಲಕ್ಕೆ ಸಾಗುತ್ತದೆ. ತಮಿಳಿಗೆ ತನ್ನದೇ ಆದ ಲಿಪಿ ಬಳಕೆಯಲ್ಲಿದೆ. ತಮಿಳು ಪ್ರಮುಖವಾಗಿ ಭಾರತ ಹಾಗು ಶ್ರೀಲಂಕಾದಲ್ಲಿ ಮಾತನಾಡಲ್ಪಡುವ ಒಂದು ದ್ರಾವಿಡ ಭಾಷಾಕುಟುಂಬಕ್ಕೆ ಸೇರಿದ ಭಾಷೆ.

ಇತಿವೃತ್ತ

ತಮಿಳು ಸಿಂಗಾಪುರ ಶ್ರೀಲಂಕಾ ಮಲೇಶಿಯ ದೇಶಗಳಲ್ಲಿ ಹಾಗೂ ಭಾರತದ ತಮಿಳುನಾಡು ರಾಜ್ಯದಲ್ಲಿ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿ ಅಧಿಕೃತ ಭಾಷೆಯ ಸ್ಥಾನಮಾನವನ್ನು ಪಡೆದಿದೆ. ಈ ಭಾಷೆಯು ಭಾರತದ ಕೇಂದ್ರ ಸರ್ಕಾರದಿಂದ ಶಾಸ್ತ್ರೀಯ ಭಾಷೆ ಎಂದು ಮಾನ್ಯತೆ ಪಡೆದಿದೆ. ಪಂಚದ್ರಾವಿಡ ಭಾಷೆಗಳಲ್ಲಿ ತುಳು – ತಮಿಳು ಭಾಷೆಗಳ ನಡುವೆ ನಿಕಟ ಸಂಬಂಧವಿದೆ. ಶತಶತಮಾನಗಳಿಂದ ಬೆಳೆದು ಬಂದ ಸಂಬಂಧವಿದು ಎಂದು ಹೇಳಬಹುದು. ತುಳು – ತಮಿಳು ಭಾಷೆಗಳಲ್ಲಿ ಅನೇಕ ಸಮಾನ ಪದಗಳು (ಪಾಂಬು, ಕಲ್ಲ್, ಮಣ್ಣ್, ಎಲಿ, ನಾಯಿ, ಕೈ, ಜಲ್ಲಿ ಇತ್ಯಾದಿ) ಬಳಕೆಯಲ್ಲಿದ್ದು ಈ ಎರಡು ಭಾಷೆಗಳ ನಡುವೆ ಉತ್ತಮ ಸಂಬಂಧ ಬೆಳೆದುಬರುವಲ್ಲಿ ಸಹಕಾರಿಯಾಗಿವೆ.

zeroonetwothreefourfivesixseveneightninetenhundredthousand
daymonthyeardebitcreditas aboverupeenumeral
ತಮಿಳು ()
ಬಳಕೆ: ಭಾರತ
ಪ್ರದೇಶ: ದಕ್ಷಿಣ ಏಶಿಯಾ
ಬಳಸುವ ಜನಸ೦ಖ್ಯೆ:
Genetic classification:
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ: ಭಾರತ
ಮೇಲ್ವಿಚಾರ ನಡೆಸುವ ಸಂಸ್ಥೆ:
ಭಾಷಾ ಕೋಡ್
ISO 639-1
ISO 639-2
SIL
ಇವನ್ನೂ ನೋಡಿ: ಭಾಷೆಗಳು


ತಮಿಳು (தமிழ்)
ಪ್ರದೇಶ:ತಮಿಳುನಾಡು, ಶ್ರೀಲಂಕಾ , ಸಿಂಗಾಪುರ, ಮಲೇಶಿಯ
ಉಪಯೋಗಿಸುವ ಜನಸಂಖ್ಯೆ: ೬.೩ ಕೋಟಿ
ವರ್ಗೀಕರಣ:

ದ್ರಾವಿಡ ಭಾಷೆಗಳು
 ದಕ್ಷಿಣ ದ್ರಾವಿಡ ಭಾಷೆಗಳು
  ತಮಿಳು-ಕನ್ನಡ-ತೆಲುಗು
     ತಮಿಳು

ಅಧಿಕೃತ ಮಾನ್ಯತೆ
ಅಧಿಕೃತ ಭಾಷೆ:ತಮಿಳುನಾಡು, ಭಾರತ, ಶ್ರೀಲಂಕ, ಸಿಂಗಾಪುರ
Language codes
ISO 639-1:ta
ISO 639-2:tam
SIL:TCV


ಉಲ್ಲೇಖಗಳು

  1. http://bayalu.weebly.com/32363246326332513265-32443277324832623257327732463263.html
  2. http://vijaykarnataka.indiatimes.com/topics/%E0%B2%A4%E0%B2%AE%E0%B2%BF%E0%B2%B3%E0%B3%81-%E0%B2%AD%E0%B2%BE%E0%B2%B7%E0%B3%86
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.