ತತ್ತ್ವಶಾಸ್ತ್ರ

ತರ್ಕ ಮತ್ತು ವಿವೇಚನೆಗಳ ಸಹಾಯದಿಂದ ಪ್ರಪಂಚ, ಜೀವನ, ಅಸ್ತಿತ್ವ, ದೈವತ್ವ, ನೈಜತೆ, ಮುಂತಾದ ಆಳವಾದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಮಾನವನ ಯತ್ನವನ್ನು ತತ್ತ್ವಶಾಸ್ತ್ರ ಎಂದು ಪರಿಗಣಿಸಬಹುದು. ಪ್ರಪಂಚವನ್ನು ಪರಿಶೀಲಿಸುವ ಇತರ ಮಾನವ ಯತ್ನಗಳು ವಿಜ್ಞಾನ ಮತ್ತು ಧಾರ್ಮಿಕತೆ. ಆದರೆ ತತ್ತ್ವಶಾಸ್ತ್ರದಲ್ಲಿ ವಾದಗಳನ್ನು ವಿಜ್ಞಾನದಂತೆ ಪ್ರಯೋಗ ಅಥವಾ ಅನುಭವದಿಂದ ಧೃಡಪಡಿಸಲಾಗುವುದಿಲ್ಲ ಮತ್ತು ಧಾರ್ಮಿಕತೆಯಲ್ಲಿರುವಂತೆ ನಂಬಿಕೆ ಅಥವಾ ದೈವಪ್ರೇರಣೆಯನ್ನು ಅವಲಂಬಿಸುವುದಿಲ್ಲ. ಆದರೆ ಈ ಮೂರು ತತ್ತ್ವಗಳು ಒಂದನ್ನೊಂದು ಪ್ರಭಾವಗೊಳಿಸುವುದರಿಂದ ಇವುಗಳ ಕಟ್ಟು ನಿಟ್ಟಾದ ವಿಂಗಡಣೆ ಕಷ್ಟಸಾಧ್ಯ.

ಪ್ರಮುಖ ತತ್ತ್ವಶಾಸ್ತ್ರ ತಜ್ಞರು

  1. ಸಾಕ್ರಟೀಸ್
  2. ಪ್ಲೇಟೊ
  3. ಅರಿಸ್ಟಾಟಲ್
  4. ಲಿಯೊ ಟಾಲ್‍ಸ್ಟಾಯ್
  5. ಜಿಡ್ಡು ಕೃಷ್ಣಮೂರ್ತಿ
  6. ಸ್ವಾಮಿ ವಿವೇಕಾನಂದ
  7. ಶ್ರೀ ಅರಬಿಂದೋ
  8. ಜಾನ್ ರಸ್ಕಿನ್
  9. ಸರ್ವೆಪಲ್ಲಿ ರಾಧಾಕೃಷ್ಣನ್

ಪಾಶ್ಚಿಮಾತ್ಯ ತತ್ತ್ವಶಾಸ್ತ್ರ

ವಿಭಾಗಗಳು

ಇತಿಹಾಸ ಮತ್ತು ಬೆಳವಣೆಗೆ

ಅಲ್ಲಮನ ತತ್ತ್ವ ದೃಷ್ಠಿ

    ಅಲ್ಲಮ ಪ್ರಭು ತನ್ನ ಬೆಡಗಿನ ವಚನದಲ್ಲಿ ತತ್ತ್ವಜ್ಞಾನದ ಒಳಗುಟ್ಟನ್ನು ಹೀಗೆ ಹೇಳಿದ್ದಾನೆ:
    ಊರದ ಚೇಳಿನ ಏರದ ಬೇನೆಯಲ್ಲಿ, ಮೂರುಲೋಕವೆಲ್ಲಾ ನರಳಿತ್ತು!
    ಹುಟ್ಟದ ಗಿಡುವಿನ ಬಿಟ್ಟ ಎಲೆಯ ತಂದು ಮುಟ್ಟದೆ ಹೂಸಲು;
    ಮಾಬುದು ಗುಹೇಶ್ವರಾ.
    ಅರ್ಥ
    ಕಚ್ಚದಿರುವ ಚೇಳಿನ ಆಗದೇ ಇರುವ ನೋವಿನಿಂದ (ಇಲ್ಲದ ನೋವಿನಿಂದ) ಮೂರು ಲೋಕವೂ ನರಳಿತು! ಹುಟ್ಟದೇ ಇರುವ ಗಿಡದ ಎಲೆಯನ್ನು ತಂದು, ಅದನ್ನು ಮುಟ್ಟದೆ ಹಚ್ಚಲು ಗಾಯ/ನೋವು ಮಾಯಿತು(ವಾಸಿಯಾಯಿತು). ಅಂದರೆ, ಚೇಳೇ ಇರಲಿಲ್ಲ, ಆದರೆ ಕಚ್ಚಿತೆಂಬ ಬ್ರಮೆ.ಭ್ರಮೆಯಿಂದ ನೋವಿಲ್ಲದಿದ್ದರೂ ಭ್ರಮೆಯಿಂದ ನೋವು; ಈ ನೋವಿಗೆ 'ಇಲ್ಲ ಇಲ್ಲ' ಎಂಬುದೇ ಮದ್ದು! (ಅದ್ವೈತ ಸಿದ್ಧಾಂತದ ಸಂಕ್ಷಿಪ್ತ ನಿರೂಪಣೆ)[1]

    ನೋಡಿ

    1. [https://www.prajavani.net/community/religion/what-are-benifits-philosophy-674568.html ತತ್ವಶಾಸ್ತ್ರದಿಂದ ಏನು ಪ್ರಯೋಜನ? ರಘು ಕೆ. ಸಿ.d: 19 ಅಕ್ಟೋಬರ್ 2019]
    This article is issued from Wikipedia. The text is licensed under Creative Commons - Attribution - Sharealike. Additional terms may apply for the media files.