ಡ್ಮಿಟ್ರಿ ಮೆಡ್ವೆಡೇವ್

ಡ್ಮಿಟ್ರಿ ಅನಾಟೊಲ್ಯೆವಿಚ್ ಮೆಡ್ವೆಡೇವ್ ಜನನ: ಸೆಪ್ಟೆಂಬರ್ ೧೪, ೧೯೬೫ ಸೇಂಟ್ ಪೀಟರ್ಸ್ಬರ್ಗ್ನಲ್ಲಿ) ಮುಂದಿನ ರಷ್ಯಾದ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವಾತ. ಈತನ ಅಧಿಕಾರ ಮೇ ೭, ೨೦೦೮ರಂದು ಪ್ರಾರಂಭವಾಗಬೇಕಾಗಿದೆ. ಅವರು ೪೨ರ ವಯಸ್ಸಿನಲ್ಲಿ ಅಧಿಕಾರ ವಹಿಸಿಕೊಂಡಾಗ, ಅವರು ಅಧಿಕಾರ ಸಲ್ಲಿಸಿದ ಮೂರು ರಷ್ಯಾ ರಾಷ್ಟ್ರಪತಿಗಳಲ್ಲಿ ಅತ್ಯಂತ ಕಿರಿಯರೆನಿಸಿಕೊಂಡರು.[1]

ಡ್ಮಿಟ್ರಿ ಅನಾಟೋಲ್ಯೆವಿಚ್ ಮೆಡ್ವೆಡೇವ್
Дмитрий Анатольевич Медведев

Dmitry Medvedev


ರಷ್ಯಾದ ರಾಷ್ಟ್ರಪತಿ (ಮುಂದಿನ)
ಪ್ರಸಕ್ತ
ಅಧಿಕಾರ ಪ್ರಾರಂಭ 
ಮೇ ೭, ೨೦೦೮
ಪೂರ್ವಾಧಿಕಾರಿ ವ್ಲಾಡಿಮೀರ್ ಪುಟಿನ್

ಜನನ ಸೆಪ್ಟೆಂಬರ್ ೧೪, ೧೯೬೫
ಸೇಂಟ್ ಪೀಟರ್ಸ್ಬರ್ಗ್, ಸೋವಿಯೆಟ್ ಒಕ್ಕೂಟ
ರಾಜಕೀಯ ಪಕ್ಷ ಸ್ವತಂತ್ರ
ಜೀವನಸಂಗಾತಿ ಸ್ವೆಟ್ಲಾನ ಮೆಡ್ವೆಡೇವ
ಧರ್ಮ ರಷ್ಯಾದ ಸಾಂಪ್ರದಾಯಿಕ ಚರ್ಚ್

ಶಿಕ್ಷಣದ ಒಂದು ಕುಟುಂಬದಲ್ಲಿ  ಜನಿಸಿದ ಮೆಡ್ವೆಡೆವ್ ಅವರು ಲೆನಿನ್ಗ್ರಾಡ್ ಸ್ಟೇಟ್ ಯೂನಿವರ್ಸಿಟಿ ಲಾ ಡಿಪಾರ್ಟ್ಮೆಂಟ್ನಿಂದ 1987 ರಲ್ಲಿ ಪದವಿ ಪಡೆದರು.ಮೆಡ್ವೆಡೆವ್ ತನ್ನ ಪ್ರೌಢಪ್ರಬಂಧವನ್ನು 1990 ರಲ್ಲಿ ಮಂಡಿಸಿದರು  ಮತ್ತು ಅವರ ಆಲ್ಮಾ ಮೇಟರ್ನಲ್ಲಿ ಡಾಕ್ಟೆಂಟ್ ಆಗಿ ಕಾರ್ಯನಿರ್ವಹಿಸಿದರು, ಇಗ  ಸೇಂಟ್ ಪೀಟರ್ಸ್ಬರ್ಗ್ ಸ್ಟೇಟ್ ಯೂನಿವರ್ಸಿಟಿ , ಅಲ್ಲಿ ಅವರು ಸಿವಿಲ್ ಮತ್ತು ರೋಮನ್ ಕಾನೂನುಗಳನ್ನು 1999 ರವರೆಗೆ ಭೋದನೆ ಮಾಡಿದರು. ಮೆಡ್ವೆಡೆವ್ ಅವರ  ರಾಜಕೀಯ ವೃತ್ತಿಜೀವನವು ಚುನಾವಣಾ ಅಭಿಯಾನದ ನಿರ್ವಾಹಕರಾಗಿ ಪ್ರಾರಂಭವಾಯಿತು ಮತ್ತು ನಂತರ ಸೇಂಟ್ ಪೀಟರ್ಸ್ಬರ್ಗ್ ಮೇಯರ್, ಅನಾಟೊಲಿ ಸೋಬ್ಚಾಕ್ ಅವರ ಸಲಹೆಗಾರನಾಗಿ ಪ್ರಾರಂಭವಾಯಿತು. ಈ ಸಮಯದಲ್ಲಿ, ಮೆಡ್ವೆಡೆವ್ ವ್ಲಾದಿಮಿರ್ ಪುಟಿನ್ ಗೆ ಸ್ನೇಹ ಬೆಳೆಸಿದರು.ನವೆಂಬರ್ 1999 ರಲ್ಲಿ, ಮೆಡ್ವೆಡೆವ್ರನ್ನು ರಷ್ಯಾದ ಅಧ್ಯಕ್ಷೀಯ ಆಡಳಿತದಲ್ಲಿ   ಉಪ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು.2000 ರ ರಷ್ಯಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಮೆಡ್ವೆಡೆವ್ ಪುಟಿನ್ರ ಕ್ಯಾಂಪೇನ್ ಮ್ಯಾನೇಜರ್ ಆಗಿದ್ದರು..[2][3] 

ಉಲ್ಲೇಖಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.