ಜರ್ಮನಿಕ್ ಭಾಷೆಗಳು
ಜರ್ಮನಿಕ್ ಭಾಷೆಗಳು ಇಂಡೋ-ಯುರೋಪಿಯನ್ ಭಾಷಾ ಕುಟುಂಬಕ್ಕೆ ಸೇರಿರುವ ಸಂಬಂಧಿತ ಭಾಷೆಗಳ ಕುಟುಂಬ. ಕ್ರಿ.ಪೂ. ೧ನೇ ಸಹಸ್ರಮಾನದ ಮಧ್ಯದಲ್ಲಿ ಈ ಭಾಷೆಗಳ ಪೂರ್ವಜ ಭಾಷೆ ಪ್ರೊಟೊ-ಜರ್ಮನಿಕ್ ಉಕ್ಕಿನ ಯುಗದಲ್ಲಿದ್ದ ಉತ್ತರ ಯುರೋಪ್ನಲ್ಲಿ ಉದ್ಭವವಾಯಿತೆಂದು ನಂಬಲಾಗಿದೆ.
ಜರ್ಮನಿಕ್ ಟ್ಯುಟೊನಿಕ್ | |
---|---|
ಭೌಗೋಳಿಕ ವ್ಯಾಪಕತೆ: |
ಮೂಲತಃ ಉತ್ತರ, ಪಶ್ಚಿಮ ಮತ್ತು ಮಧ್ಯ ಯುರೋಪ್. ಇಂದು ಪ್ರಪಂಚಾದ್ಯಂತ |
ವಂಶವೃಕ್ಷ ಸ್ಥಾನ: | ಇಂಡೊ-ಯುರೋಪಿಯನ್ ಜರ್ಮನಿಕ್ |
ವಿಭಾಗಗಳು: |
|
ಜರ್ಮನಿಕ್ ಭಾಷೆಗಳ ಜಾಗತಿಕ ವಿಸ್ತಾರ. ಕೆಂಪು ಬಣ್ಣದ ದೇಶಗಳು ಪ್ರಮುಖವಾಗಿ ಜರ್ಮನಿಕ್ ಭಾಷೆಗಳನ್ನು ಉಪಯೋಗಿಸುತ್ತವೆ. ಕೆಂಪು ಪಟ್ಟಿಗಳಿರುವ ಪ್ರದೇಶಗಳಲ್ಲಿ ೧೦%ಗಿಂತ ಹೆಚ್ಚು ಜರ್ಮನಿಕ ಭಾಷೆಗಳ ಮಾತುಗಾರರನ್ನು ಹೊಂದಿವೆ.
ಇಂದಿನ ಕಾಲದಲ್ಲಿ ಸುಮಾರು ೩೮೦ ಮಿಲಿಯನ್ ಮಾತುಗಾರರಿರುವ ಆಂಗ್ಲ ಮತ್ತು ೧೨೦ ಮಿಲಿಯನ್ ಮಾತುಗಾರರಿರುವ ಜರ್ಮನ್ ಭಾಷೆಗಳು ಈ ಕುಟುಂಬದ ಅತ್ಯಂತ ದೊಡ್ಡ ಭಾಷೆಗಳಾಗಿವೆ.
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.