ಚಿನ್ನದ ಬೆಲೆ

ಚಿನ್ನದ ಆಭರಣ

ಮಾನವ ಇತಿಹಾಸದಲ್ಲಿ ಖನಿಜಗಳಿಗೆ ಸಂಬಂಧ ಪಟ್ಟಂತೆ ನಾಲ್ಕು ಸಾಮಾಜಿಕ ಯುಗಗಳು ಬಳಕೆಯಲ್ಲಿವೆ. ಅವುಗಳೆಂದರೆ- ೧.ಚಿನ್ನದ ಯುಗ, ೨.ಬೆಳ್ಳಿ ಯುಗ, ೩.ಹಿತ್ತಾಳೆ ಯುಗ, ೪.ಕಬ್ಬಿಣದ ಯುಗ. ಇವುಗಳೊಳಗೆ ಪವನ, ತಾಮ್ರ, ಕಂಚು, ಸತುಗಳು ಸೇರ್ಪಡೆಗೊಂಡಿವೆ. ಇವೆಲ್ಲ ಲೋಹಗಳು ಮನುಷ್ಯನೊಂದಿಗೆ, ಅವನ ಮನಸ್ಸಿನೊಂದಿಗೆ ನಿಕಟ ಸಂಬಂಧವನ್ನು ಹೊಂದಿವೆ. ಈ ಲೋಹಗಳಲ್ಲಿ ಚಿನ್ನ, ಬೆಳ್ಳಿಗಳೆರಡು ಆರ್ಥಿಕವಾಗಿ ತುಂಬಾ ಬೆಲೆಯುಳ್ಳ ಲೋಹಗಳಾಗಿವೆ. ಆಭರಣಗಳು ವ್ಯಕ್ತಿಯ ಜೀವನದಲ್ಲಿ ಸೌಂದರ್ಯವರ್ಧಕವಾಗಿ, ಸೌಂದರ್ಯರಕ್ಷಕವಾಗಿ, ಔಪಯೋಗಿಕವಾಗಿ, ಆರೋಗ್ಯವರ್ಧಕವಾಗಿ, ಆಪದ್ಧನವಾಗಿ, ಅನ್ಯಾಕರ್ಷಕವಾಗಿ ಪ್ರದರ್ಶನಗೊಳುತ್ತಿವೆ. ಪವನ ಚಿನ್ನವು ಅಪರಂಜಿ ಚಿನ್ನಕ್ಕಿಂತ ತುಸು ಕೆಂಪೊತ್ತಿನ ಹಳದಿ ವರ್ಣವನ್ನು ಹೊಂದಿರುತ್ತದೆ. ಈ ಮಿಶ್ರಲೋಹವನ್ನು ೨೨ಕ್ಯಾರೆಟ್ ಎನ್ನುತ್ತಾರೆ. ಇದರಲ್ಲಿ ೨ಪಾಲು ತಾಮ್ರ,೨೨ಪಾಲು ಚಿನ್ನ ಸೇರಿಕೊಂಡಿರುತ್ತದೆ. 'ಕ್ಯಾರೆಟ್' ಎಂಬುದು ಚಿನ್ನದ ಪರಿಶುದ್ದತೆಯನ್ನು ಓರೆಗಚ್ಚುವ ಪ್ರಮಾಣ ಸೂಚಕ. ೨೪ಕ್ಯಾರೆಟ್ ಚಿನ್ನ ಶುದ್ದ ಬಂಗಾರದ್ದಾದರೂ, ಅದಕ್ಕೂ ತುಸು ತಾಮ್ರ, ಸ್ವಲ್ಪ ಬೆಳ್ಳಿ ಬೆರೆಸಿದಾಗಲೇ ಅದಕ್ಕೊಂದು ಸ್ಪಷ್ಟ ರೂಪ ಕೊಡಲು ಸಾಧ್ಯ. ಬರೀ ಚಿನ್ನದಲ್ಲಿ ಯಾವುದೇ ರೂಪ ಮೂಡಿಸಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಅಕ್ಕಸಾಲಿಗರು. ಚಿನ್ನದ ಒಡವೆ ತಯಾರಿಕೆಗಾಗಿ ಮೇಣದಿಂದ ಮಾದರಿಗಳನ್ನು ರಚಿಸಿ, ಅವಕ್ಕೆ ಜೇಡಿಮಣ್ಣು ಮತ್ತು ಸೆಗಣಿಯ ತೇಪೆಹಾಕಿ ಬಿಸಿಲಲ್ಲಿ ಚೆನ್ನಾಗಿ ಒಣಗಿಸಿಡುತ್ತಾರೆ, ನಂತರ ಚಿನ್ನವನ್ನು ೧೦೬೩೦ಸೆಂಟಿಗ್ರೇಡ್ ಉಷ್ಣತೆಯಲ್ಲಿ ಕರಗಿಸಿ, ಆ ದ್ರವರೂಪದ ಮಿಶ್ರಣವನ್ನು ಮಾದರಿಯಲ್ಲಿ ಹಾಕಿ ಆರಲು ಬಿಡುತ್ತಾರೆ. ನಂತರ ಅದು ಆ ನಮೂನೆಯ ಆಕಾರಕ್ಕೆ ರೂಪುಗೊಳ್ಳುತ್ತದೆ.

  • ಆಭರಣಗಳಲ್ಲಿ ಅತಿ ಹೆಚ್ಚಾಗಿ ಬಳಸುವ ಚಿನ್ನದ ಮಿಶ್ರಧಾತು ೨೨ ಕ್ಯಾರಟ್ ನದು. ಇದರಲ್ಲಿ ೨೨ ಭಾಗ ಚಿನ್ನ ಮತ್ತು ೨ ಭಾಗ ತಾಮ್ರಗಳು ಇರುವುವು. ತಾಮ್ರದ ಮಿಶ್ರಣದಿಂದ ಚಿನ್ನದ ಬಣ್ಣವು ಕೊಂಚ ಕೆಂಪಾಗುತ್ತದೆ. ಬಿಳಿಯತ್ತ ತಿರುಗಿರುವ ಚಿನ್ನದ ಮಿಶ್ರಲೋಹಗಳಲ್ಲಿ ಬೆಳ್ಳಿ, ಪಲಾಡಿಯಮ್ ಅಥವಾ ನಿಕೆಲ್ ಗಳನ್ನು ಬಳಸುವರು.

ಬಂಗಾರ

'ಚಿನ್ನ-ಬಂಗಾರ - ಹಳದಿ ಲೋಹ - ಸುವರ್ಣ-ಹೇಮ-ಕನಕ-ಸ್ವರ್ಣ ಯಾವುದೇ ವಸ್ತುವಿಗೆ ಹೆಚ್ಚಿನ ಬೆಲೆ ಬಂದಾಗ , ಅದಕ್ಕೆ ಚಿನ್ನದ ಬೆಲೆ ಬಂದಿದೆ ಅನ್ನುವುದು ವಾಡಿಕೆ. ಹಿಂದೆ ಚಿನ್ನವೇ ಅತ್ಯಂತ ಬೆಲೆ ಬಾಳುವ ಲೋಹವಾಗಿತ್ತು. ಅದು ಭೂಮಿಯಲ್ಲಿ ಕಡಿಮೆ ಪ್ರಮಾಣದಲ್ಲಿ ಸಿಗುವುದರಿಂದಲೂ , ಅದು ಬೇರೆ ಲೋಹ , ಅನಿಲ, ಗಾಳಿ, ಮಳೆ, ಮಣ್ಣು ಗಳಿಗೆ ಸ್ಪಂದಿಸಿ ಬದಲಾವಣೆ ಹೊಂದದೆ ಇರುವುದರಿಂದಲೂ ಅದಕ್ಕೆ ಪುರಾತನ ಕಾಲದಿಂದಲೂ ಎಲ್ಲ ಲೋಹಕ್ಕಿಂತ ಹೆಚ್ಚಿನ ಬೆಲೆ ಇದೆ. ಆದರೆ ಈಗ ವಿಜ್ಞಾನ ಬೆಳೆದ ಮೇಲೆ ಪ್ಲಾಟಿನಂ ಮೊದಲಾದ ಇತರ ಲೋಹಗಳು ಚಿನ್ನದ ಬೆಲೆಯನ್ನು ಮೀರಿಸಿವೆ. ಅದು ವಸ್ತು ವಿನಿಮಯದ ಬದಲಿಗೆ ಮೊದಲು ಉಪಯೋಗಿಸಲ್ಪಟ್ಟ ಲೋಹವಿರಬೇಕು. ಅದರ ಆಕರ್ಷಕ ಬಣ್ಣ - ಮೃದುತ್ವ -ಆಭರಣಗಳನ್ನು ಮಾಡಲು ಅನುಕೂಲ ಮತ್ತು ಪ್ರೇರಣೆ.; ಅದಕ್ಕಾಗಿ ಅದನ್ನು ಆರ್ಯರು ಸುವರ್ಣ (ಸು=ಉತ್ತಮ + ವರ್ಣ=ಬಣ್ಣ) ಎಂದು ಕರೆದರು. ಹೆಚ್ಚಿನ ವಿವರಕ್ಕೆ ಚಿನ್ನ ತಾಣಕ್ಕೆ ಹೋಗಿ.

  • ಅದು -ಶುದ್ಧ ಚಿನ್ನ ವು ೨೪ ಕ್ಯಾರೆಟ್ ಇರುವುದು; ಅದು ಬಹಳ ಮೃದುವಾ ದ್ದರಿಂದ ಆಭರಣ ಬಾಳಿಕೆ / ತಾಳಿಕೆ ಬರುವುದಿಲ್ಲ . ಆದ್ದರಿಂದ ೨೨ ಕ್ಯಾರೆಟ್ ಚಿನ್ನದ ವಡವೆ ಮಾಡುತ್ತಾರೆ. ಅದು ಅತಿ ಹೆಚ್ಚಿನ ಶುದ್ಧ ಆಭರಣ ಚಿನ್ನ. ಅದು ೯೯.೯೯ ಶುದ್ಧ ಚಿನ್ನಕ್ಕೆ ಅಥವಾ ೯೯.೫ ಗ್ರಾಮಿಗೆ ೭% ಎಂದರೆ - ೯೨.೫ ಗ್ರಾಂ ಗೆ ೭ಗ್ರಾಮ್ ಶುದ್ಧ ತಾಮ್ರ ಸೇರಿಸಲಾಗುತ್ತದೆ. ಇದಕ್ಕೂ ಕಡಿಮೆ ಶುದ್ಧ ಇರುವ ಒಡವೆಗಳೂ ಇರುತ್ತವೆ /ಮಾಡುತ್ತಾರೆ -ಆದರೆ ೨೨ ಕ್ಯಾರೆಟ್ ಚಿನ್ನದ ಮೆರಗು ಇರುವುದಿಲ್ಲ / ಕಾಲ ಸಂದಂತೆ ಕಂದಿ-ಬಣ್ಣ ಕೆಡುತ್ತದೆ.

ಚಿನ್ನದ ಬೆಲೆ

  • 1930 ರಿಂದ ಚಿನ್ನದ ಬೆಲೆ ರೂಪಾಯಿಯಲ್ಲಿ - ಒಂದು ಪಕ್ಷಿನೋಟ :
  • International avoirdupois ounce=28.349523125grams=437.5 grains
  • ಇಸವಿ --ಬೆಲೆ, ರೂ.
  • 1930–18ರೂ. -1ತೊಲಕ್ಕೆ -11.423 ಗ್ರಾಂ - (ounce=28.349 gms =2.423ತೊಲ ;1ತೊಲ =11.7ಗ್ರಾಂ. gms )
  • 1940–36 ರೂ. --ತೊಲಕ್ಕೆ
  • 1950–99ರೂ. ---ತೊಲ
  • 1960–111 ರೂ. --ತೊಲ
  • 1970–184ರೂ. --(10ಗ್ರಾಂ)
  • 1980–1330 ರೂ.-- ,,
  • 1990–3200 ರೂ ,,
  • 2000 - 4250 ರೂ. ,,
  • 2005–4520
  • 2006–8142
  • 2007–9005
  • 2008–12000

೨೦೦೯

  • 2009—ಜನವರಿ 2009 , -16,ಫೆಬ್ರವರಿ 13400 -14985(10 ಗ್ರಾಂ)
  • 1-03-2010 -1725 1 ಗ್ರಾಂ.ಗೆ ಶುದ್ಡತೆ (1 gಡಿ 99.5)
  • 22-5-2010–18180; ರೂ. ---99.5 10ಗ್ರಾಂಗೆ
  • 21-7-2011–22500;ರೂ. --- 99.5 10ಗ್ರಾಂಗೆ
  • 9-8-2011 ---26100:/25360- 99.5/10ಗ್ರಾಂಗೆ
  • 17-8-2011 ---26248 ರೂ.:-- -99.5 /10ಗ್ರಾಂ
  • 6-03-2012 ---28650:/99.5 /10ಗ್ರಾಂ
  • 20-5-2013 26500:/99.5 /10ಗ್ರಾಂ
  • 28-8-2013 10ಗ್ರಾ 34500/-99.99 ಶುದ್ಡತೆ (ಹಿಂದಿನ ಎಲ್ಲಾ ದಾಖಲೆಗಳನ್ನು ಮೀರಿ ಚಿನ್ನ ರೂ.34500/- ನ್ನು ತಲುಪಿದೆ.
  • 24-2-2014 ಮುಂಬಯಿ/ಮುಂಬಯಿ: 30,559 / 30559 10gಡಿಚಿms
  • 30-6-2016: ಚಿನ್ನ (ಎಂಸಿಎಕ್ಸ್) (10 ಗ್ರಾಮ್):31,253. ↓-62.00(29-6-2016:31,315)

೧೯೨೫ ರಿಂದ ಚಿನ್ನದ ಧಾರಣೆ

1960 ರ ವರೆಗೆ 1 ತೋಲಕ್ಕೆ ಧಾರಣೆ --ನಂತರ 10 ಗ್ರಾಂಗಳಿಗೆ ದರ ; ಒಂದು ತೊಲ =11.420 ಗ್ರಾಂ

ವರ್ಷಧಾರಣೆವರ್ಷಧಾರಣೆವರ್ಷಧಾರಣೆವರ್ಷಧಾರಣೆವರ್ಷಧಾರಣೆವರ್ಷಧಾರಣೆವರ್ಷಧಾರಣೆವರ್ಷಧಾರಣೆ
192518.75193629.81194788.62195895.381970184.501981180019924334.20035600.
192618.43193730.18194895.871959102.561971193.001982164519934140.20045850.
192718.37193829.93194994.171960111.871972202.0019831800.19944598.20057000.
192818.37193931.74195099.181961119.351973278.5019841970.19954680.20068400.
192918.43194036.04195198.051962119.751974506.0019852130.19965160.200710800.
193018.05194137.43195276.81196397.001975540.0019862140.19974725.200812500.
193118.18194244.05195373.06196463.251976432.0019872570.19984045.200914500.
193223.06194351.05195477.75196571.751977486.0019883130.19994234.201018500.
193324.05194452.93195579.18196683.751978685.0019893140.20004400.201126400.
193428.81194562.00195690.811967102.501979937.0019903200.20014300.201229000
193530.81194683.87195790.621968162.0019801330.0019913466.20024990.28/8/201334500
24/2/201430559???---1969176.೦೦

ಚಿನ್ನದ ವಿಶ್ವದ ವಹಿವಾಟು

ಡಬ್ಲ್ಯುಜಿಸಿ ವರದಿ ಮುಖ್ಯಾಂಶ

  • ಚಿನ್ನದ ಒಟ್ಟಾರೆ ಬೇಡಿಕೆಯಲ್ಲಿ ಚಿನ್ನಾಭರಣಗಳ ಪಾತ್ರವೇ ಈಗಲೂ ಪ್ರಮುಖವಾಗಿದೆ. ಎಲ್ಲ ವಿಭಾಗದ ಬೇಡಿಕೆಗಳನ್ನು ಪರಿಶೀಲಿಸಿದಾಗ ಚಿನ್ನಾಭರಣದ ಪಾಲು ಶೇ 50ರಷ್ಟು ದೊಡ್ಡ ದಿದೆ ಅಂದರೆ, ವಿಶ್ವದಲ್ಲಿ ಜುಲೈ ಸೆಪ್ಟೆಂಬರ್‌ ಅವಧಿಯಲ್ಲಿ 534 ಟನ್‌ಗಳಷ್ಟು ಚಿನ್ನವನ್ನು ಆಭರಣ ತಯಾರಿಕೆಗಾಗಿಯೇ ಬಳಸಲಾಗಿದೆ. ಈ ಚಿನ್ನಾಭರಣದ ಬೇಡಿಕೆ ಭಾರತದಲ್ಲಿನ ಮಾರುಕಟ್ಟೆಯನ್ನೇ ಹೆಚ್ಚಾಗಿ ಅವಲಂಬಿಸಿದೆ.
  • ಅಮೆರಿಕ, ಯುನೈಟೆಡ್ ಕಿಂಗ್ಡಂನಲ್ಲಿನ ಚಿನ್ನಾಭರಣ ಬೇಡಿಕೆ ಹೆಚ್ಚುತ್ತಿದೆ. ಚೀನಾದಲ್ಲಿ ಮಾತ್ರ ಶೇ 39ರಷ್ಟು ಅಂದರೆ, 147 ಟನ್‌ಗಳಿಗೆ ಕುಸಿದಿದೆ.
  • ಕೇಂದ್ರ ಬ್ಯಾಂಕುಗಳು 93 ಟನ್‌ಗಳಷ್ಟು ಚಿನ್ನವನ್ನು ಖರೀದಿ ಮಾಡಿವೆ. ವಿವಿಧ ದೇಶಗಳಲ್ಲಿನ ಕೇಂದ್ರ ಬ್ಯಾಂಕ್‌ಗಳು ಚಿನ್ನವನ್ನು ನಿರಂತರವಾಗಿ 15 ತ್ರೈಮಾಸಿಕಗಳಿಂದಲೂ ಖರೀದಿಸುತ್ತಲೇ ಬರುತ್ತಿವೆ.
  • ಒಟ್ಟಾರೆಯಾಗಿ ಚಿನ್ನದ ಗಟ್ಟಿ ಮತ್ತು ನಾಣ್ಯಗಳು ಹಾಗೂ ಹೂಡಿಕೆಗಾಗಿಯೇ ಚಿನ್ನದ ವಿನಿಮಯ ಹೂಡಿಕೆ ನಿಧಿಯಲ್ಲಿ (ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್ಸ್) ಹಣ ತೊಡಗಿಸುವ ಪ್ರಮಾಣದಲ್ಲಿ ಶೇ 6ರಷ್ಟು ಏರಿಕೆಯಾಗಿದೆ. ಆದರೆ, ಬಂಡವಾಳ ಹೂಡಿಕೆ ಉದ್ದೇಶದಿಂದಲೇ ಚಿನ್ನದ ಗಟ್ಟಿ ಮತ್ತು ನಾಣ್ಯ ಖರೀದಿಸುವ ಪ್ರಮಾಣದಲ್ಲಿ ಶೇ 21ರಷ್ಟು ಅಂದರೆ 312 ಟನ್‌ಗಳಿಂದ 246 ಟನ್‌ಗಳಿಗೆ ಇಳಿಕೆಯಾಗಿದೆ.
  • ಚಿನ್ನ ಪೂರೈಕೆ ಪ್ರಮಾಣವೂ ಜುಲೈ, ಆಗಸ್ಟ್‌, ಸೆಪ್ಟೆಂಬರ್‌ ವೇಳೆ ಶೇ 7ರಷ್ಟು ಇಳಿಕೆಯಾಗಿ 1048 ಟನ್‌ಗಳಿಗೆ ತಗ್ಗಿದೆ.

(2014ರ 3ನೇ ತ್ರೈಮಾಸಿಕದ ಚಿನ್ನದ ಬೇಡಿಕೆ ಕುರಿತ ವರದಿ ಜಿಎಫ್‌ ಎಂಎಸ್, ಥಾಮ್ಸನ್ ರಾಯಿಟರ್ಸ್‌ನ ಅಂಕಿ ಅಂಶಗಳನ್ನು ಆಧರಿಸಿದೆ-ವರದಿ-ಪ್ರಜಾವಾಣಿ ೧೦-೧೨-೨೦೧೪)

ದಿನಾಂಕ 24-2-2014 ಆಧಾರ ವಿಶ್ವ ಚಿನ್ನದ ಮಂಡಳಿ (ಪ್ರಜಾವಾಣಿ)
ದೇಶಗಳ ವಹಿವಾಟು:ಟನ್ ಗಳಲ್ಲಿ:2011-12ರಲ್ಲಿ/ಮತ್ತು:2012-13/ರಲ್ಲಿ ಶೇಕಡ ಹೆಚ್ಚಳ/
  1.  :ಚೀನಾ 806.8/1065.8 ಟನ್+32% /
  2.  :ಭಾರತ 864.2/974.8 +13%
  3.  :ಅಮೇರಿಕಾ 161.8 / 190.3 +18%
  4.  :ಟರ್ಕಿ 109.5 /175.2 +60%
  5.  :ಥಾಯಿಲೆಂಡ್ 81.1/140.1 73%
  6.  :ಇಂಡೋನೇಷ್ಯಾ 52.9 / 68 +28%
  7.  :ಬ್ರಿಟನ್ 21.4 / 23.4 +10%
24-2-2014 ಮೇಲಿನ ಅಂಕಿ ಅಂಶ ರೋಮನ್ ಲಿಪಿ
2011-12 //2012-13/ಶೇಕಡ ಏರಿಕೆ
  1. 806.8/1065.8ಟನ್ ಗಳಲ್ಲಿ+32% /¨
  2. 864.2/974.8 +13%
  3. 161.8 / 190.3 +18%
  4. 109.5 /175.2 +60%
  5. 81.1/140.1 73%
  6. 52.9 / 68 +28%
  7. 21.4 / 23.4 +10%

ವಿಶ್ವದಲ್ಲಿ ಚಿನ್ನದ ಬೇಡಿಕೆ ಮತ್ತು ದಾಸ್ತಾನು

  • ವಿಶ್ವದಲ್ಲಿ ಚಿನ್ನದ ದಾಸ್ತಾನು

ಔನ್ಸ್- ತೂಕದ -ಘಟಕಗಳು

ಔನ್ಸ್- ತೂಕದ -ಘಟಕಗಳು
  • ಭಿನ್ನ ವಿಧ- (ಗ್ರಾಂ)grains -ಗ್ರೈನ್.ಗಳು
  • ಅಂತಾರಾಷ್ಟ್ರೀಯ avoirdupois ಔನ್ಸ್= 28.349523125(ಗ್ರಾಂ)= 437,5ಗ್ರೈನ್.ಗಳು
  • ಒಂದು ಔನ್ಸ್ = 28.349ಗ್ರಾಂ
  • ಒಂದು ತೊಲಾ = 11.7ಗ್ರಾಂ
  • ಇಂಗ್ಲೀಷ್ ಟವರ್ ಔನ್ಸ್ ??=29.16ಗ್ರಾಂ - 450grains/ಗ್ರೈನ್.ಗಳು

2014ರಲ್ಲಿ ಜಗತ್ತಿನ ದೇಶಗಳಲ್ಲಿ ಚಿನ್ನದ ಸಂಗ್ರಹ

ಸೆಪ್ಟೆಂಬರ್ 2014 ಕ್ಕೆ ದೇಶಗಳಲ್ಲಿ ಚಿನ್ನದ ಸಂಗ್ರಹ (ಟಾಪ್ 40 ವರ್ಲ್ಡ್ ಗೋಲ್ಡ್ ಕೌನ್ಸಿಲ್ ಮಾಹಿತಿ ಆಧಾರಿತ===https://en.wikipedia.org/wiki/Gold_reserve)

ದೇಶಸಂಗ್ರಹ ಟನ್ +%ದೇಶಸಂಗ್ರಹ ಟನ್+%ದೇಶಸಂಗ್ರಹ ಟನ್ +%ದೇಶಸಂಗ್ರಹ ಟನ್ +%
1 .ಯುನೈಟೆಡ್ ಸ್ಟೇಟ್ಸ್8,133.5 -72%11 ಭಾರತ557.7- 7%21 ಆಸ್ಟ್ರಿಯಾ280.0 =42%31 ಲಿಬಿಯಾ116.6 -4%
2 .ಜರ್ಮನಿ3,384.2 6-7%12 ಟರ್ಕಿ523.8 -16%22 ಬೆಲ್ಜಿಯಂ227.4 -34%32 ಗ್ರೀಸ್112.4 6-9%
3. ಅಂತರರಾಷ್ಟ್ರೀಯ

ಹಣಕಾಸು ನಿಧಿ

2,814.0 ಎನ್ಎ13.ಯುರೋ/

ಸೆಂಟ್ರಲ್ಬ್ಯಾಂಕ್

503.2 -27%23 . ಫಿಲಿಪ್ಪೀನ್ಸ್194.7- 9%33. ಇಂಟರ್ನ್ಯಾಷನಲ್

ಸೆಟ್ಲ್ಮೆಂಟ್ಸ್ನ ಎನ್ಎ ಬಿಸ್ ಬ್ಯಾಂಕ್

111,0
4. ಇಟಲಿ2,451.8 .66%14. ತೈವಾನ್423.6 4%24. ಕಝಾಕಿಸ್ತಾನ್184.0- 26%34. ದಕ್ಷಿಣ ಕೊರಿಯಾ104.4- 1%
5 .ಫ್ರಾನ್ಸ್2435.4 .65%15. ಪೋರ್ಚುಗಲ್382.5 =79%25. ಆಲ್ಜೀರಿಯಾ173.6-- 3%35. ರೊಮೇನಿಯಾ-103.79%
6 ರಶಿಯಾ1168.0= 10%16. ವೆನೆಜುವೆಲಾ367.6. 69%26. ಥೈಲ್ಯಾಂಡ್152.4 -4%36. ಪೋಲೆಂಡ್102.9 4%
7. ಚೀನಾ1,054.1 1%17. ಸೌದಿ ಅರೇಬಿಯಾ322.9_ 2%27. ಸಿಂಗಪುರ್127.4- 2%37. ಇರಾಕ್89.8- 5%
8 .ಸ್ವಿಜರ್ಲ್ಯಾಂಡ್1,040.0- 7%18. ಯುನೈಟೆಡ್ ಕಿಂಗ್ಡಮ್310.3- 11%28. ಸ್ವೀಡನ್125.78%38 ಆಸ್ಟ್ರೇಲಿಯಾ79.9 6%
9.ಜಪಾನ್765.2 -2%19 ಲೆಬನಾನ್286.8 -22% 29ದಕ್ಷಿಣ ಆಫ್ರಿಕಾ125.2 -10%39 ಕುವೈತ್79.0- 8%
10. ನೆದರ್ಲ್ಯಾಂಡ್ಸ್612.5 54%20.ಸ್ಪೇನ್281.6 -24%30. ಮೆಕ್ಸಿಕೋ123.1- 2%40. ಇಂಡೋನೇಷ್ಯಾ77.1- 3%

ವಿಶ್ವದ ಚಿನ್ನದ ಬೇಡಿಕೆ

ಭಾರತವು ಸೆಪ್ಟಂಬರ್2014 ರಲ್ಲಿಯೇ 95,635 ಕೆ.ಜಿ. ಬಂಗಾರವನ್ನು ಅಮದು ಮಾಡಿಕೊಂಡಿದೆ. ಇದು ಕಳೆದ ಆರು ತಿಂಗಳಲ್ಲಿಯೇ ಗರಿಷ್ಠ ಪ್ರಮಾಣದ ಅಮದು. ಹಿಂದಿನ ಐದುತಿಂಗಳ ಅಮದು 267782 ಕೆ.ಜಿ.

ವಿಶ್ವದ ಚಿನ್ನದ ಬೇಡಿಕೆ -ಟನ್`ಗಳಲ್ಲಿ
3ನೇ ತ್ರೈಮಾಸಿಕ20132014± ಶೇ.
1.ಆಭರಣ556.30534.20-4
2.ತಂತ್ರಜ್ಷಾನ103.1097.90-5
3.ಹೂಡಿಕೆ92.00204.40+6
4.ಇ.ಟಿ.ಎಫ್.(ಮೈನಸ್`)120.2041.30(-)
5.ಕೇಂದ್ರಬ್ಯಾಂಕ್ ಖರೀದಿ101.5092.80-9
ಒಟ್ಟು952.80929.30-2

ನೋಡಿ:

ಆಧಾರ

ಸುದ್ದಿ ಮಾಧ್ಯಮ ಚರ್ಚೆಪುಟ:ಚಿನ್ನದ ಬೆಲೆ

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.