ಚಿತ್ರಕಲೆ

ಚಿತ್ರಕಲೆ ಬಣ್ಣಗಳನ್ನು ಉಪಯೋಗಿಸಿ ಕಲಾತ್ಮಕ ಚಿತ್ರಗಳನ್ನು ರಚಿಸುವುದು. ಈ ರಚನೆಗಳನ್ನೂ ಕೂಡ ಚಿತ್ರಕಲೆಗಳೆಂದು ಕರೆಯಲಾಗುತ್ತಿತ್ತು. ಆದರೆ ಇಪ್ಪತ್ತನೆಯ ಶತಮಾನದಾದ್ಯಂತ ಚಿತ್ರಕಲೆ ಎಂಬ ಪದಕ್ಕೆ ದೃಶ್ಯಕಲೆ ಎಂಬ ಅರ್ಥವನ್ನೂ ಆರೋಪಿಸಲ್ಪಟ್ಟಿದೆ. ಉದಾಹರಣೆಗೆ ’ಚಿತ್ರಕಲೆ’ ಎಂಬುದು ವರ್ಣಗಳನ್ನು ಬಳಸಿ, ಕಾಗದ ಅಥವಾ ಕ್ಯಾನ್ವಾಸಿನ ಮೇಲೆ ಮಾನವಜೀವಿ ಮೂರ್ತ ಅಥವಾ ಅಮೂರ್ತ ದೃಶ್ಯವನ್ನು ’ಅರ್ಥವತ್ತಾಗಿ ಮೂಡಿಸುವುದೇ ಆಗಿದೆ. ಈ ಹಿಂದಿನ ವಾಕ್ಯದಲ್ಲಿ ಸಹಜವೆನಿಸುವ ಅನೇಕ ಐತಿಹಾಸಿಕ ಅರ್ಥಗಳಿವೆ. ಉದಾಹರಣೆಗೆ ಮಾನವನನ್ನು ಹೊರತುಪಡಿಸಿದವರು ಸೃಷ್ಟಿಸುವುದನ್ನು ನಿಸರ್ಗಸೃಷ್ಟಿ ಎನ್ನುತ್ತೇವೆ. ಅಂದರೆ ಮಾನವನನ್ನು ಹೊರತುಪಡಿಸಿದವರು ಚಿತ್ರರಚಿಸಲಾರರು, ಮಾನವರಾದ ಕಲಾವಿಮರ್ಶಕರ ಪ್ರಕಾರ. ಎರಡನೆಯದಾಗಿ, ಮೊದಲೆಲ್ಲ, ಅಂದರೆ ಸುಮಾರು ಹದಿನೈದನೇ ಶತಮಾನದ ಯುರೋಪಿನ ರೆನಾಯಸಾನ್ಸ್ ಕಾಲಕ್ಕೆ ತೈಲವರ್ಣದ ಚಿತ್ರಕಲೆ ಹುಟ್ಟಿಕೊಂಡಾಗ, ಅವುಗಳು ದೈವೀಕ ಭಕ್ತಿಗೆ ’ಪೂರಕವಾಗಿ’ ಮಾತ್ರ ಬಳಕೆಗೊಳ್ಳುತ್ತಿತ್ತು. ತನ್ನದಲ್ಲದ ಉದ್ದೇಶವನ್ನು ಪೂರೈಸಿದ ಅಂತಹ ಚಿತ್ರಕಲೆಯನ್ನು ಇಂದು ’ಪೂರಕಚಿತ್ರ’ ಅಥವಾ ’ಇಲ್ಲಸ್ಟ್ರೇಷನ್’ ಎಂದು ಕರೆಯಲಾಗುತ್ತದೆ. [1]

ಪ್ರಸಿದ್ಧ ಚಿತ್ರಕಲೆ ಮೊನ ಲೀಸ

ಚಿತ್ರಕಲೆ ಚಿತ್ರಕಲೆಯ ಬಗ್ಗೆ ತಿಳಿಯುವ ಪ್ರಯತ್ನ ಮಾಡುತ್ತಿರುವ ತಮಗೆ ಹೃತ್ಪೂರ್ವಕ ವಂದನೆಗಳು. `ಬಲ್ಲವನೇ ಬಲ್ಲ ಬೆಲ್ಲದ ರುಚಿಯ' ಎನ್ನುವ ಹಾಗೆ ಚಿತ್ರಕಲೆಯ ಸವಿಯು ಸವಿದವನಿಗೇ ಗೊತ್ತು. ಚಿತ್ರಕಲೆಯ ಬಗ್ಗೆ ತಿಳಿಯುವ ಮುನ್ನ ನಾವು ಕಲೆಯ ಬಗ್ಗೆ ಅರಿತುಕೊಳ್ಳಲೇಬೇಕು. ಕಲೆ ಎಂದರೇನು? ಎಂಬುದನ್ನು ತಿಳಿಯುವುದರೊಂದಿಗೆ `ಕಲೆ' , `ಚಿತ್ರ' ಹಾಗೂ ಚಿತ್ರಕಲೆ ಬಗ್ಗೆ ಅರಿತುಕೊಳ್ಳಬೇಕಾಗಿದೆ. ಕಲೆ ಎಂದರೇನು? ಈ ಪ್ರಶ್ನೆಗೆ ಉತ್ತರಿಸುವುದು ಸುಲಭ ಅಲ್ಲ. ಸಮುದ್ರದ ದಡದಲ್ಲಿ ನಿಂತು .. ಒಂದು ಬೊಗಸೆ ಸಮುದ್ರದ ನೀರನ್ನು ಎತ್ತಿ ಹಿಡಿದು ` ನೋಡಿ ನನ್ನ ಬೊಗಸೆಯಲ್ಲ್ಲಿರುವುದೇ ಇದೇ ಸಮುದ್ರ ' ಎಂದು ಕೂಗಿಕೊಂಡಂತೆ. ಹೀಗಿದ್ದರೂ ಸಹ ತಮ್ಮ್ಮ ತಮ್ಮ ಪೂರ್ವಾನುಭವಗಳ ಆಧಾರಗಳಿಂದ ಅಥವಾಾ ಕಲೆಯ ಒಂದಂಶವನ್ನು ಸ್ಪರ್ಶಿಸಿ ಇಡೀ ಕಲೆಯ ಚಿಕ್ಕ ಪರಿಚಯ ಅಥವಾಾ ಪ್ರಯತ್ನವನ್ನು ಮಾಡುವ ನಿಟ್ಟಿನಲ್ಲಿ ಚಿಂತಿಸಿ ಹೇಳುವುದಾದರೆ.......ಮಾನವನ ವಿಶಿಷ್ಟ ಚೞುವಟಿಕೆಯೇ ಕಲೆ ಎಂಬ ಅಭಿಪ್ರಾಯ ಸರಳ ರೂಪವಾಗಿ ಕಂಡುಬರುತ್ತ ದೆ.

ಉಲ್ಲೇಖ

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.