ಗೌಡ ಸಾರಸ್ವತ ಬ್ರಾಹ್ಮಣರು

ಗೌಡಸಾರಸ್ವತ ಬ್ರಾಹ್ಮಣರು ಸಾರಸ್ವತ ಬ್ರಾಹ್ಮಣರ ಒಂದು ಪಂಗಡ. ಸಾರಸ್ವತ ಬ್ರಾಹ್ಮಣರು ವೇದದಲ್ಲಿ ಉಲ್ಲೇಖಿಸಿದ ಅನೇಕ ಬ್ರಾಹ್ಮಣ ಪಂಗಡಗಳಲ್ಲಿ ಒಂದು. ಇವರ ಬಗ್ಗೆ ರಾಮಾಯಣ, ಮಹಾಭಾರತ, ಭಾಗವತ ಹಾಗೂ ಭವಿಷ್ಯೋತ್ತರ ಪುರಾಣಗಳಲ್ಲೂ ಉಲ್ಲೇಖವಿದೆ.ಗೌಡ ಸಾರಸ್ವತ ಬ್ರಾಹ್ಮಣರು ಭಾರತದ ಬ್ರಾಹ್ಮಣ ಸಮುದಾಯದ ವಿಶೇಷ ಪಂಗಡ. ಸಾರಸ್ವತರು ಮೂಲತಃ ಸರಸ್ವತಿ ನದಿ ಹಾಗೂ ದೃಶದ್ವತಿ ನದಿಯ ಮಧ್ಯದ ಪ್ರಾಂತಗಳಲ್ಲಿ ವಾಸಿಸುತ್ತಿದ್ದರು. ಈ ಪ್ರಾಂತದ ಬಗ್ಗೆ ಋಗ್ವೇದಲ್ಲಿ ವಿವರಿಸಲಾಗಿದೆ. ಮನುಸ್ಮೃತಿಯಲ್ಲಿ ಈ ಪ್ರಾಂತವನ್ನು ಬ್ರಹ್ಮಾವರ್ತ ಎಂದು ಉಲ್ಲೇಖಿಸಿದೆ. ಅದೇ ರೀತಿಯಲ್ಲಿ ಸಾರಸ್ವತ ಪ್ರಾಂತದ ಬಗ್ಗೆ ವರಾಹಮಿಹಿರನ (ಕಾಲ ಕ್ರಿ ಶ ೫೦೦ ) ಬೃಹತ್ ಸಂಹಿತೆ, ಮಾರ್ಕಂಡೇಯ ಪುರಾಣದಲ್ಲೂ ವಿವರಣೆಯಿದೆ. ಜನಾಂಗೀಯವಾಗಿ ಉತ್ತರ ಭಾರತದ ಪಂಜಾಬ, ಉತ್ತರಪ್ರದೇಶ, ಗುಜರಾತಿನ ಸಾರಸ್ವತ ಬ್ರಾಹ್ಮಣ ಪಂಗಡಕ್ಕೆ ಸೇರಿದವರು ಇವರು. ಇವರನ್ನು ಸಾಮಾನ್ಯವಾಗಿ ಜಿ ಎಸ್ ಬಿ ಎಂದು ಕರೆಯುತ್ತಾರೆ. ಕರ್ಣಾಟಕದಲ್ಲಿ ಅವರು ಮನೆಯಲ್ಲಿ ಹೆಚ್ಚಾಗಿ ಕೊಂಕಣಿ ಭಾಷೆ ಮಾತನಾಡುತ್ತಾರೆ. ಇವರು ತಮ್ಮನ್ನು ಅಲಹಬಾದಿನ ತ್ರಿವೇಣಿ ಸಂಗಮದಲ್ಲಿ ಒಂದಾದ, ಈಗ ಗುಪ್ತಗಾಮಿನಿಯಾಗಿರುವ, ಉತ್ತರ ಭಾರತದ ಸರಸ್ವತಿ ನದಿ ತೀರದ ಮೂಲದವರೆಂದು ಗುರುತಿಸಿಕೊಳ್ಳುತ್ತಾರೆ. ಸಾರಸ್ವತ ಬ್ರಾಹ್ಮಣ ಹೆಸರು ಸರಸ್ವತಿ ನದಿ ತೀರದ ಮೂಲದವರೆಂದಿದ್ದುದರಿಂದಲೋ ಅಥವಾ ಸಾರಸ್ವತ ಮುನಿಯ ಶಿಷ್ಯರಾಗಿದ್ದುದರಿಂದ ಬಂದಿರಬಹುದು. ಇವರಲ್ಲಿ ಮುಖ್ಯವಾಗಿ ಕಾಮತ್, ಪೈ, ಶೆಣೈ, ಕಿಣಿ, ಮಲ್ಯ, ಕುಡ್ವ, ನಾಯಕ್, ಪ್ರಭು ಮುಂತಾದ ಅಡ್ಡ ಹೆಸರಿನವರಿರುತ್ತಾರೆ.

ಗೌಡ ಸಾರಸ್ವತ ಬ್ರಾಹ್ಮಣರು
ಜನಸಂಖ್ಯಾ ಬಾಹುಳ್ಯದ ಪ್ರದೇಶಗಳು
Primary populations in:
ಭಾಷೆಗಳು

ಕೊಂಕಣಿ, ಮರಾಠಿ

ಧರ್ಮ

ಹಿಂದೂ

  • Divisions based on Veda
    • Rigvedi
  • Divisions based on sect
    • Smartha
    • Madhwa
ಸಂಬಂಧಿಸಿದ ಜನಾಂಗೀಯ ಗುಂಪುಗಳು
  • Rajapur/Bhalavalikar Saraswat Brahmins
  • Chitrapur Saraswat Brahmin
  • Kudaldeshkar Gaud Saraswat Brahman
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.