ಗಿರಿ
ಶಿಕ್ಷಣ ಮತ್ತು ಸಾಧನೆ
ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಮನೋವಿಜ್ಞಾನದಲ್ಲಿ ಎಂ.ಎ ಪದವಿ ಪಡೆದ ಇವರು, ನಂತರ ಬೆಂಗಳೂರು ವಿಶ್ವವಿದ್ಯಾಲಯದ ಡಿ.ಎಂ. ಎಸ್.ಪಿ ಮಾಡಿ (ಈಗಿನ ನಿಮ್ಹಾನ್ಸ್ ನಲ್ಲಿ), ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಲ್ಲಿ ಮನೋವಿಜ್ಞಾನದ ಕೆಲ ಕಾಲ ಅಧ್ಯಾಪಕರಾಗಿದ್ದರು. ನಂತರ ೧೯೭೦ರಲ್ಲಿ ಅಮೇರಿಕಾಕ್ಕೆ ತೆರಳಿ ಸದರ್ನ್ ಇಲನಾಯ್ ವಿಶ್ವವಿದ್ಯಾಲಯದಲ್ಲಿ ವಾಕ್ ಶ್ರವಣ ವಿಜ್ಞಾನದಲ್ಲಿ ಪಿ.ಎಚ್.ಡಿ. ಪದವಿ ಪಡೆದು ಆ ದೇಶದಲ್ಲೇ ನೆಲೆಸಿದರು.
ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿ ಮೂವತ್ತು ವರ್ಷ ಸೇವೆ ಸಲ್ಲಿಸಿ, Outstanding Professor ಎಂಬ ಮನ್ನಣೆಗೆ ಪಾತ್ರರಾಗಿ, ಸದ್ಯಕ್ಕೆ ನಿವೃತ್ತಿಯಾಗಿದ್ದಾರೆ. ಡಾ.ಗಿರಿ ಹೆಗ್ಡೆ ವಿಮರ್ಶಕರ ಮೆಚ್ಚಿಗೆಗೆ ಪಾತ್ರವಾದ, ಪ್ರಪಂಚದಾದ್ಯಂತ ಬಳಸಲ್ಪಡುತ್ತಿರುವ, ೨೫ ಕ್ಕೂ ಹೆಚ್ಚು ಇಂಗ್ಲೀಷ್ ಭಾಷೆಯಲ್ಲಿ ಬರೆದ ವೈಜ್ಞಾನಿಕ ಮತ್ತು ತಾಂತ್ರಿಕ ಪುಸ್ತಕಗಳ ಲೇಖಕರು. ಅಷ್ಟೇ ಸಂಖ್ಯೆಯ, ಬೇರೆ ಬೇರೆ ತಜ್ಞರು ಬರೆದ ಪುಸ್ತಕಗಳ ಸಂಪಾದಕರು.
ಅನೇಕ ಅಂತರರಾಷ್ಟ್ರೀಯ ವೈಜ್ಞಾನಿಕ ನಿಯತಕಾಲಿಕೆಗಳ ಮತ್ತು ಪುಸ್ತಕ ಪ್ರಕಾಶಕರ ಸಂಪಾದಕೀಯ ಮಂಡಳಿಗಳ ಸದಸ್ಯರು ಕೂಡ. ತಮ್ಮ ಕ್ಷೇತ್ರದಲ್ಲಿ ಸಂಶೋಧನೆ, ಪರಿಣತಿ ಮತ್ತು ಪ್ರಕಟಣೆಗಳಿಂದ ಅಂತರರಾಷ್ಟ್ರೀಯ ಖ್ಯಾತಿ ಮತ್ತು ಅನೇಕ ಬಗೆಯ ಮನ್ನಣೆ ಪಡೆದವರು. ಗಿರಿಯವರು ಪ್ರಪಂಚದಾದ್ಯಂತ ಅನೇಕ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸ ನೀಡಿದ್ದಾರೆ ಮತ್ತು ಈಗಲೂ ನೀಡುತ್ತಿದ್ದಾರೆ.
ಸಾಹಿತ್ಯ
ಕನ್ನಡ ಸಾರಸ್ವತ ಲೋಕದಲ್ಲಿ ಗಿರಿಯವರನ್ನು, "ಗತಿ ಸ್ಥಿತಿ"ಯ ಗಿರಿ ಎಂದೇ ಇನ್ನೂ ಗುರುತಿಸುತ್ತಾರೆ ಹಾಗು ಪರಿಚಯಿಸುತ್ತಾರೆ. ಗಿರಿಯವರು ಕನ್ನಡದಲ್ಲಿ "ವರ್ತನ ಚಿಕಿತ್ಸೆ" ಎಂಬ ಪುಸ್ತಕ ಬರೆದಿದಲ್ಲದೇ, "ಅಪ ಸಾಮಾನ್ಯ ಮನೋವಿಜ್ಞಾನ" ಎಂಬ ಪುಸ್ತಕದ ಕನ್ನಡ ಭಾಷಾಂತರಕಾರರು. ಈ ಎರಡೂ ಪುಸ್ತಕಗಳನ್ನು ಮೈಸೂರು ವಿಶ್ವವಿದ್ಯಾಲಯ ಪ್ರಕಟಿಸಿತ್ತು.
ಕೃತಿಗಳು
ಕಾದಂಬರಿಗಳು
- ಗತಿ ಸ್ಥಿತಿ
- ಕಂಡದ್ದು ಕಾಣದ್ದು
- ಕಾಫ್ಕಾನ ರೂಪಾಂತರ
ಕಥೆಗಳು
- ಡೊಂಕು
- ನನಗೂ ಮದುವೆ
- ಕಪ್ಪುಮಣ್ಣು ಬಿಳಿಹೂವು
- ಈಸು ಬಿದ್ದವರು
- ಬಿಚ್ಚದ ಗಂಟು
- ಅರೆಕೂರು ೨೦೪೦
- ಚಾವ್ಡ ನನ್ನ ಚಪಾತಿ ದೇವರು
- ಚಂಪ ಮತ್ತು ಚಂದ್ರ
- ಮಗಳಿಂದ ಕಲಿತವರು
ಇತರೆ ಕೃತಿಗಳು
- ವರ್ತನ ಚಿಕಿತ್ಸೆ
- ಅಪಸಾಮಾನ್ಯ ಮನೋವಿಜ್ಞಾನ