ಕವಿರತ್ನ ಕಾಳಿದಾಸ

ಕವಿರತ್ನ ಕಾಳಿದಾಸ
ಕವಿರತ್ನ ಕಾಳಿದಾಸ
ನಿರ್ದೇಶನರೇಣುಕಾಶರ್ಮ
ನಿರ್ಮಾಪಕಸರಸ್ವತಿ ಶ್ರೀನಿವಾಸ್, ವಿ.ಎಸ್.ಮುರಳಿ, ವಿ.ಎಸ್.ಗೋವಿಂದು
ಚಿತ್ರಕಥೆಚಿ.ಉದಯಶಂಕರ್
ಸಂಭಾಷಣೆಚಿ.ಉದಯಶಂಕರ್
ಪಾತ್ರವರ್ಗಡಾ.ರಾಜ್‍ಕುಮಾರ್ ಜಯಪ್ರದ ಕೆ.ವಿಜಯ, ನಳಿನಿ, ಟಿ.ಎನ್.ಬಾಲಕೃಷ್ಣ, ಶ್ರೀನಿವಾಸ ಮೂರ್ತಿ,ಭಟ್ಟಿ ಮಹಾದೇವಪ್ಪ,ಮುಸುರಿ ಕೃಷ್ಣಮೂರ್ತಿ,ಶೋಭ, ಸುಧಾ ಸಿಂಧೂರ್, ಪಾಪಮ್ಮ, ವಾದಿರಾಜ್,ಹನುಮಂತಾಚಾರ್,ಅಶ್ವಥ ನಾರಾಯಣ,ಅಗ್ರೋ ಚಿಕ್ಕಣ್ಣ ,ತೂಗುದೀಪ ಶ್ರೀನಿವಾಸ್ - ಅತಿಥಿ ನಟ ,
ಸಂಗೀತಎಂ.ರಂಗರಾವ್
ಛಾಯಾಗ್ರಹಣವಿ.ಕೆ.ಕಣ್ಣನ್
ಸಂಕಲನಪಿ.ಜಿ.ಮೋಹನ್
ಬಿಡುಗಡೆಯಾಗಿದ್ದು೧೯೮೩
ನೃತ್ಯಡಿ.ವೇಣುಗೋಪಾಲ್
ಸಾಹಸಎಂ.ಜಿ.ಸುಬ್ಬರಾವ್
ಚಿತ್ರ ನಿರ್ಮಾಣ ಸಂಸ್ಥೆಆನಂದ ಲಕ್ಷ್ಮೀ ಎಂಟರ್ಪ್ರೈಸಸ್
ಸಾಹಿತ್ಯಕಾಳಿದಾಸ, ಚಿ.ಉದಯಶಂಕರ್
ಹಿನ್ನೆಲೆ ಗಾಯನಡಾ.ರಾಜ್‍ಕುಮಾರ್,ಪಿ.ಬಿ.ಶ್ರೀನಿವಾಸ್, ವಾಣಿ ಜಯರಾಂ, ಪೂರ್ಣಚಂದ್ರರಾವ್

ಚಿತ್ರದ ಸಾರಾಂಶ:

ಮಂತ್ರಿ ಗುಣಸಾಗರನ(ಬಾಲಕೃಷ್ಣ) ಕುತಂತ್ರದಿಂದ ಸುಬಾಹು ರಾಜನ ಭಟ್ಟಿ ಮಹಾದೇವಪ್ಪ ಮಗಳಾದ ವಿದ್ಯಾಧರೆ (ಜಯಪ್ರದ) ಮತಿಹೀನನಾದ ಕುರುಬ ಲಕ್ಕ(ಡಾ.ರಾಜ್ ಕುಮಾರ್)ನನ್ನು ಮದುವೆಯಾಗಬೇಕಾಗುತ್ತದೆ. ಮತಿಹೀನನಾದ ತನ್ನ ಪತಿಗೆ ಕಾಳಿಮಾತೆಯ ಅನುಗ್ರಹವಾಗುವಂತೆ ಮಾಡುವಲ್ಲಿ ವಿದ್ಯಾಧರೆಯು ಸಫಲಳಾಗುತ್ತಾಳೆ. ಇತ್ತ ಕಾಳಿಮಾತೆಯಿಂದ ವರ ಪಡೆದ ಕಾಳಿದಾಸನು ತನ್ನ ಪೂರ್ವವನ್ನು ಮರೆತು ಕಾವ್ಯರಚನೆಯಲ್ಲಿ ಮಗ್ನನಾಗಿ ಧಾರಾನಗರಿಯ ಭೋಜರಾಜ(ಶ್ರೀನಿವಾಸಮೂರ್ತಿ)ನ ಆಶ್ರಯ ಪಡೆಯುತ್ತಾನೆ. ಪತಿಯನ್ನು ಹುಡುಕುತ್ತಾ ದೇಶಸಂಚಾರ ಮಾಡುವ ವಿದ್ಯಾಧರೆಯು ಧಾರಾನಗರಿಗೆ ಬಂದಾಗ ವೇಶ್ಯೆ ರತ್ನಕಲೆ(ಕೆ.ವಿಜಯ)ಯ ಆಶ್ರಯ ಪಡೆಯುತ್ತಾಳೆ. ಆಕಸ್ಮಿಕವಾಗಿ ಪತಿ-ಪತ್ನಿಯರ ಭೇಟಿಯಾಗುತ್ತದೆ. ಆದರೆ ಕಾಳಿದಾಸನಿಗೆ ತನ್ನ ಮದುವೆಯ ವಿಚಾರ ಸ್ಮೃತಿಪಟಲದಿಂದ ಅಳಿಸಿ ಹೋಗಿರುತ್ತದೆ. ಅವನು ವಿದ್ಯಾಧರೆಯನ್ನು ತನ್ನ ಪ್ರೇಯಸಿಯಾಗಿ ಸ್ವೀಕರಿಸುತ್ತಾನೆ. ಇದೇ ಸ್ಫೂರ್ತಿಯಲ್ಲಿ ಅಭಿಜಾಇನ ಶಾಕುಂತಲ ಕಾವ್ಯ ರಚನೆ ಮಾಡುತ್ತಾನೆ. ಇದೇ ಸಮಯದಲ್ಲಿ ಮತ್ತೊಬ್ಬ ಆಸ್ಥಾನ ಕವಿ ಕವಿರಾಕ್ಷಸ(ಮುಸುರಿ ಕೃಷ್ಣಮೂರ್ತಿ)ನ ಕುತಂತ್ರದಿಂದ ಕಾಳಿದಾಸ ಮತ್ತು ಭೋಜರಾಜರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗುತ್ತದೆ. ನಂತರ ಕಾಳಿದಾಸ-ವಿದ್ಯ್ಯಾಧರೆಯ ಪುನರ್ಮಿಲನದೊಂದಿಗೆ ಕಥೆ ಸುಖಾಂತ್ಯವಾಗುತ್ತದೆ.

ಪಾತ್ರವರ್ಗ

  • ರಾಜಕುಮಾರ್ ಕಾಳಿದಾಸನಾಗಿ
  • ಜಯಪ್ರಧಾ ಅವರು ವಿದ್ಯಾಧರೆಯಾಗಿ (ಬಿ. ಜಯಶ್ರೀ ಅವರ ಧ್ವನಿ)
  • ರಾಜಾ ಭೋಜನಾಗಿ ಶ್ರೀನಿವಾಸ ಮೂರ್ತಿ
  • ಬಾಲಕೃಷ್ಣ
  • ಕಾಳಿ ದೇವಿಯಾಗಿ ನಳಿನಿ
  • ದಿನೇಶ್
  • ಮುಸುರಿ ಕೃಷ್ಣಮೂರ್ತಿ
  • ವಾಡಿರಾಜ್
  • ಶನಿ ಮಹಾದೇವಪ್ಪ
  • ಕಲಾಧಾರೆ

ಧ್ವನಿಸುರುಳಿ

ಕವಿರತ್ನ ಕಾಳಿದಾಸ
ಎಂ.ರಂಗರಾವ್ ಅವರ ಧ್ವನಿಸುರುಳಿ
ಬಿಡುಗಡೆ1983
ಶೈಲಿಚಲನಚಿತ್ರ ಸಂಗೀತ

ಎಂ.ರಂಗರಾವ್ ಚಿತ್ರಕ್ಕಾಗಿ ಸ್ಕೋರ್ ಮತ್ತು ಹಾಡುಗಳನ್ನು ಸಂಯೋಜಿಸಿದ್ದಾರೆ. ಚಿ. ಉದಯ್ ಶಂಕರ್ ರವರು ಗೀತೆಗಳ ರಚನೆಯನ್ನು ಮಾಡಿದ್ದಾರೆ.

ಹಾಡುಗಳು
ಸಂ.ಹಾಡುಸಾಹಿತ್ಯಗಾಯಕ(ರು)ಸಮಯ
1."ಮಾಣಿಕ್ಯವೀಣಂ"ಶ್ಯಾಮಲ ದಂಡಕರಾಜಕುಮಾರ್ 
2."ಬೆಳ್ಳಿ ಮೂಡಿತೋ"ಚಿ. ಉದಯ್ ಶಂಕರ್ರಾಜಕುಮಾರ್ 
3."ಅಳ್ಬ್ಯಾಡ್ ಕಣೆ ಸುಮ್ಕಿರೇ"ಚಿ. ಉದಯ್ ಶಂಕರ್ರಾಜಕುಮಾರ್ 
4."ಸದಾ ಕಣ್ಣಲೇ"ಚಿ. ಉದಯ್ ಶಂಕರ್ರಾಜಕುಮಾರ್, ವಾಣಿ ಜಯರಾಮ್ 
5."ಓ ಪ್ರಿಯತಮ"ಚಿ. ಉದಯ್ ಶಂಕರ್ರಾಜಕುಮಾರ್, ವಾಣಿ ಜಯರಾಮ್ 
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.