ಕಲಹರಿ ಮರುಭೂಮಿ
ಕಲಹರಿ ಮರುಭೂಮಿ ಆಫ್ರಿಕ ಖಂಡದಲ್ಲಿ ಸುಮಾರು ೯ಲಕ್ಷ ಚದರ ಕಿ.ಮೀ.ವಿಸ್ತ್ರೀರ್ಣದಲ್ಲಿ ಹರಡಿಕೊಂಡಿರುವ ಮರುಭೂಮಿ.ಬೋಟ್ಸ್ವಾನದ ಹೆಚ್ಚಿನ ಪ್ರದೇಶ,ನಮೀಬಿಯ,ದಕ್ಷ್ಣಿಣ ಆಫ್ರಿಕದ ಕೆಲವು ಪ್ರದೇಶಗಳಲ್ಲಿ ವ್ಯಾಪಿಸಿರುವ ಈ ಮರುಭೂಮಿ ಇದು ಹುಲ್ಲುಗಾವಲುಗಳನ್ನು ಹೊಂದಿದ್ದು,ಹಲವಾರು ಪ್ರಾಣಿ ಪಕ್ಷಿಗಳಿಗೆ ಆವಾಸಸ್ಥಾನವಾಗಿದೆ. ದಕ್ಷಿಣ ಅಕ್ಷಾಂಶ ೨೦ಲಿ - ೨೮ಲಿ ಯ ವರೆಗೂ ಪೂರ್ವರೇಖಾಂಶ ೧೯ಲಿ ಯಿಂದ ೨೪ಲಿ ಯವರೆಗೂ ಹಬ್ಬಿದೆ. ಇದರ ವಿಸ್ತೀರ್ಣ ೯,೩೦,೦೦೦ ಚ.ಕಿಮೀಗೂ ಹೆಚ್ಚು. ಮುಖ್ಯವಾಗಿ ಬೆಚುವಾನ ರಕ್ಷಿತ ಪ್ರದೇಶದ ಪಶ್ಚಿಮ ಭಾಗವನ್ನು ಈ ಹೆಸರಿನಿಂದ ಕರೆದರೂ ಪಶ್ಚಿಮ ಆಫ್ರಿಕದ ದಕ್ಷಿಣ ಭಾಗವೂ ದಕ್ಷಿಣ ಆಫ್ರಿಕ ಗಣರಾಜ್ಯದ ಗುಡ್ಹೋಪ್ ಭೂಶಿರದ ಭಾಗಗಳೂ ಇದರಲ್ಲಿ ಸೇರಿವೆ. ಅಕ್ಷರಶಃ ಮರುಭೂಮಿ ಎನಿಸಿಕೊಳ್ಳುವ ಪ್ರದೇಶ ಕಡಿಮೆಯೇ. ಮಳೆಯೂ ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗುತ್ತದೆ : ಈಶಾನ್ಯದಲ್ಲಿ ವರ್ಷಕ್ಕೆ ಸರಾಸರಿ ೫೦ ಸೆಂ.ಮೀ. ಮಳೆಯಿದ್ದರೆ ನೈಋತ್ಯದಲ್ಲಿ ಕೇವಲ ೧೩ ಸೆಂಮೀ ಅನಾವೃಷ್ಟಿ ಪ್ರದೇಶದಲ್ಲಿ ಮರಳುಗುಡ್ಡಗಳನ್ನು ಕಾಣಬಹುದು. ಕಲಹರಿಯ ಎತ್ತರ ಎಲ್ಲ ಕಡೆಯೂ ಸುಮಾರು ೯೦೯ ಮೀ. ಉತ್ತರಭಾಗದಲ್ಲಿ ಓಕವಾಂಗೊ ನದಿಯ ಹೆಚ್ಚಳ ಪ್ರವಾಹದಿಂದ ತುಂಬುವ ಉಪ್ಪಿನ ವಿಶಾಲವಾದ ಮಕರಿಕಾರಿ ಪ್ರದೇಶವೇ ಅತ್ಯಂತ ತಗ್ಗು. ಅಡಿಯ ಪುರಾತನ ಬಂಡೆಗಳ ಮೇಲೆ ಹೊದ್ದುಕೊಂಡಿರುವ ಕೆಮ್ಮರಳು ನೆಲವೇ ಸಾಮಾನ್ಯವಾಗಿ ಕಂಡುಬರುತ್ತದೆ. ಬಿದ್ದ ಮಳೆನೀರನ್ನು ಬೇಗ ಹೀರುವ ಗುಣ ಇದಕ್ಕಿರುವುದರಿಂದ ಒಂದೆರಡು ದಿನಕ್ಕಿಂತ ಹೆಚ್ಚು ಆಯುಸ್ಸಿರುವ ತೊರೆಗಳೇ ಇಲ್ಲಿ ಇಲ್ಲವೆನ್ನಬಹುದು. ಬೀಳುವ ಮಳೆಗೆ ಅನುಗುಣವಾಗಿ ಇಲ್ಲಿ ಸಸ್ಯವಿತರಣೆಯಾಗಿದೆ: ಕಾಡುಗಳಿಂದ ಸಣ್ಣ ಕುರುಚಲು ಗಿಡಗಳ ವರೆಗೆ ವ್ಯತ್ಯಾಸವಾಗುತ್ತದೆ. ಮಳೆಗಾಲದಲ್ಲಿ ಎಲ್ಲ ಕಡೆಯೂ ಹುಲ್ಲು ಬೆಳೆಯುತ್ತದೆ. ಆನೆಯೇ ಮುಂತಾದ ಸಸ್ಯಹಾರಿ ಪ್ರಾಣಿಗಳಿಗೆ ಒಳ್ಳೆಯ ಮೇವುಂಟು. ಮಳೆಗಾಲದಲ್ಲಿ ಬೇಟೆಗಾರರಿಗೆ ಈ ಪ್ರದೇಶವೊಂದು ಆಕರ್ಷಣೆ. ನೈಋತ್ಯದಲ್ಲಿರುವ ಕಲಹರಿ ಜೇಮ್ಸ್ ಬಾಕ್ ರಾಷ್ಟ್ರೀಯ ಉದ್ಯಾನದ ವಿಸ್ತೀರ್ಣ ಸುಮಾರು ೮,೮೦೦ ಚ.ಕಿಮೀ. ಬಾಂಟು ಬುಡಕಟ್ಟಿನ ಜನ ಕಲಹರಿಯ ಅಂಚಿನಲ್ಲಿ ವಾಸಿಸುತ್ತಾರೆ. ಮರುಭೂಮಿಯ ಮಧ್ಯಪ್ರದೇಶದಲ್ಲಿರುವ ಪೊದೆ ಜನರೇ (ಬುಷ್ಮೆನ್) ಇಲ್ಲಿಯ ನಿಜವಾದ ಮೂಲವಾಸಿಗಳು. ಇವರ ಸಂಖ್ಯೆ ಸುಮಾರು ೨,೦೦೦. ಅನೇಕ ವರ್ಷಗಳ ಹಿಂದೆ ಬಾಂಟು ಜನ ಇವರನ್ನು ಮಧ್ಯಕಲಹರಿ ಪ್ರದೇಶಕ್ಕೆ ಓಡಿಸಿದರು. ಈ ಜನ ಕುಬ್ಜರು, ಮಂಗೋಲಾಯ್ಡ್ ಲಕ್ಷಣವುಳ್ಳವರು, ಪೀತವರ್ಣೀಯರು. ಬಾಂಟು ಜನರಿಂದ ವಿಶಿಷ್ಟವಾದ ಲಕ್ಷಣ ಇವರದು. ಇವರು ಅಲೆಮಾರಿಗಳು. ಚತುರ ಬೇಟೆಗಾರರೂ ಮೂಲಿಕಾಜ್ಞಾನವುಳ್ಳವರೂ ಆದ್ದರಿಂದ ಇವರು ಬದುಕು ಸಾಗಿಸುತ್ತಿದ್ದಾರೆ ; ಆ ಕಠಿಣ ಪರಿಸರದ ಮೇಲೆ ಸಂಪೂರ್ಣ ಒಡೆತನ ಸ್ಥಾಪಿಸಿದ್ದಾರೆ.
ಕಲಹರಿ | |
Desert | |
![]() ಕಲಹರಿ ಮರುಭೂಮಿಯ ಉಪಗ್ರಹ ಚಿತ್ರ NASA World Wind ಕಲಹರಿ ಮರುಭೂಮಿಯ ಉಪಗ್ರಹ ಚಿತ್ರ NASA World Wind | |
ದೇಶಗಳು | ಬೊಟ್ಸ್ವಾನ, ನಮೀಬಿಯ, ದಕ್ಷಿಣ ಆಫ್ರಿಕ |
---|---|
Landmarks | Botswana's Gemsbok National Park, Central Kalahari Game Reserve, Chobe National Park, Kalahari Basin, Kalahari Gemsbok National Park, Kgalagadi Transfrontier Park, Makgadikgadi Pans |
River | ಆರೆಂಜ್ ನದಿ |
ಅತ್ಯುನ್ನತ ಸ್ಥಳ | Brandberg Mountain 8,550 ft (2,610 m) |
- ಅಕ್ಷಾಂಶ-ರೇಖಾಂಶ | 21°07′S 14°33′E |
ಉದ್ದ | ೪,೦೦೦ km (೨,೪೮೫ mi), E/W |
ವಿಸ್ತೀರ್ಣ | ೯,೩೦,೦೦೦ km² (೩,೫೯,೦೭೫ sq mi) |
Biome | ಮರುಭೂಮಿ |
The Kalahari Desert (shown in maroon) & Kalahari Basin (orange) The Kalahari Desert (shown in maroon) & Kalahari Basin (orange)
|
ಡೇವಿಡ್ ಲಿವಿಂಗ್ಸ್ಟನ್ ಮತ್ತು ವಿಲಿಯಂ ಸಿ. ಆಸ್ಟೆಲ್-ಇವರೇ ಕಲಹರಿಯನ್ನು ದಾಟಿ ಗಾಮಿ ಸರೋವರವನ್ನು ಪತ್ತೆಹಚ್ಚಿದ ಮೊಟ್ಟಮೊದಲಿನ ಬಿಳಿಯರು. (೧೮೭೮-೭೯)ರಲ್ಲಿ ಬೋಯರ್ಗಳ ದೊಡ್ಡ ಗುಂಪೊಂದು ಕಲಹರಿ ದಾಟಿತಾದರೂ ಅವರಲ್ಲಿ ಸುಮಾರು ೨೫೦ ಮಂದಿಯೂ ೯,೦೦೦ ಜಾನುವಾರುಗಳೂ ನಾಶವಾದವು. ಈಗ ಮೋಟಾರ್ ವಾಹನ ಸೌಕರ್ಯವಿರುವುದರಿಂದ ಸಂಚಾರ ಸುಲಭವಾಗಿದೆ. ಗಾನ್ಜಿ಼ ಜಿಲ್ಲೆಯಲ್ಲಿರುವ ಜಮೀನುಗಳಿಂದ ಕೇಪ್ಟೌನಿಗೆ ಹಾಲಿನ ಕೆನೆ ರವಾನೆಯಾಗುತ್ತದೆ.