ಕನೆಕ್ಟಿಕಟ್
ಕನೆಕ್ಟಿಕಟ್ (ಆಂಗ್ಲ:Connecticut) ಅಮೆರಿಕ ಸಂಯುಕ್ತ ಸಂಸ್ಥಾನದ ನ್ಯೂ ಇಂಗ್ಲಂಡ್ ಪ್ರದೇಶದಲ್ಲಿರುವ ರಾಜ್ಯ. ಉತ್ತರ ದಿಕ್ಕಿನಲ್ಲಿ ಮ್ಯಾಸಚುಸೆಟ್ಟ್ಸ್, ಪೂರ್ವಕ್ಕೆ ರೋಡ್ ಐಲಂಡ್, ಪಶ್ಚಿಮಕ್ಕೆ ನ್ಯೂ ಯಾರ್ಕ್ ರಾಜ್ಯಗಳು ಸ್ತಿಥವಾಗಿವೆ. ರಾಜ್ಯದ ರಾಜಧಾನಿ ಹಾರ್ಟ್ಫ಼ರ್ಡ್. ವಿಸ್ತೀರ್ಣದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ 48ನೆಯ ರಾಜ್ಯ. ರೋಡ್ ಐಲೆಂಡ್ ಮತ್ತು ಡೆಲವೇರ್ ರಾಜ್ಯಗಳು ಮಾತ್ರ ಇದಕ್ಕಿಂತ ಚಿಕ್ಕವು. ವಿಸ್ತೀರ್ಣ 12973.2599 ಚಕಿಮೀ ಜನಸಂಖ್ಯೆ 35,96,080 (2013).

ಸ್ಟೇಟ್ ಆಫ಼್ ಕನೆಕ್ಟಿಕಟ್ | |||||||||||
| |||||||||||
ಅಧಿಕೃತ ಭಾಷೆ(ಗಳು) | None | ||||||||||
Demonym | Connecticuter,[1] Nutmegger[2] | ||||||||||
ರಾಜಧಾನಿ | ಹಾರ್ಟ್ಫ಼ರ್ಡ್ | ||||||||||
ಅತಿ ದೊಡ್ಡ ನಗರ | ಬ್ರಿಡ್ಜ್ ಪೋರ್ಟ್[3] | ||||||||||
ಅತಿ ದೊಡ್ಡ ನಗರ ಪ್ರದೇಶ | ಗ್ರೇಟರ್ ಹಾರ್ಟ್ಫ಼ರ್ಡ್[4] | ||||||||||
ವಿಸ್ತಾರ | Ranked ೪೮ in the US | ||||||||||
- ಒಟ್ಟು | ೫೫೪೩ sq mi (೧೪೩೫೭ km²) | ||||||||||
- ಅಗಲ | 70 miles (113 km) | ||||||||||
- ಉದ್ದ | 110 miles (177 km) | ||||||||||
- % ನೀರು | ೧೨.೬ | ||||||||||
- Latitude | 40°58′ N to 42°03′ N | ||||||||||
- Longitude | 71°47′ W to 73°44′ W | ||||||||||
ಜನಸಂಖ್ಯೆ | ೨೯ನೆಯ ಅತಿ ಹೆಚ್ಚು | ||||||||||
- ಒಟ್ಟು | ೩೫೧೮೨೮೮ (2009 est.)[5] 3,405,565 (2000) | ||||||||||
- ಜನಸಂಖ್ಯಾ ಸಾಂದ್ರತೆ | ೭೦೨.೯/sq mi (೨೭೧.೪೦/km²) ೪ನೆಯ ಸ್ಥಾನ | ||||||||||
- Median income | $೬೮.೫೯೫ (೩) | ||||||||||
ಎತ್ತರ | |||||||||||
- ಅತಿ ಎತ್ತರದ ಭಾಗ | South slope of Mount Frissell[6] Note: The summit of Mount Frissell is in Massachusetts 2,380 ft (726 m) | ||||||||||
- ಸರಾಸರಿ | 500 ft (152 m) | ||||||||||
- ಅತಿ ಕೆಳಗಿನ ಭಾಗ | Long Island Sound[6] 0 ft (0 m) | ||||||||||
ಸಂಸ್ಥಾನವನ್ನು ಸೇರಿದ್ದು | January 9, 1788 (5th) | ||||||||||
Governor | ಡಾನ್ ಮಲ್ಲಾಯ್ (ಡೆ) | ||||||||||
Lieutenant Governor | ನಾಂಸಿ ವೈಮನ್ (ಡೆ) | ||||||||||
U.S. Senators | ಜೋ ಲೀಬ್ಮನ್ (ID) ರಿಚರ್ಡ್ ಬ್ಲುಮೆಂಥಲ್ (ಡೆ) | ||||||||||
Congressional Delegation | 5 Democrats (list) | ||||||||||
Time zone | Eastern: UTC-5/-4 | ||||||||||
Abbreviations | CT Conn. US-CT | ||||||||||
Website | www.ct.gov | ||||||||||
ಭೂಗೋಳ
Bear Mountain, highest peak in Connecticut ![]() Lake Mcdonough reservoir as seen from the Tunxis Trail Overlook Spur trail, Barkhamsted ![]() New Haven ![]() New London Hartford ![]() Stamford |
ಕನೆಕ್ಟಿಕಟ್ ದಕ್ಷಿಣಕ್ಕೆ ಲಾಂಗ್ ಐಲಂಡ್, ಪಶ್ಚಿಮಕ್ಕೆ ನ್ಯೂ ಯಾರ್ಕ್, ಉತ್ತರಕ್ಕೆ ಮ್ಯಾಸಚೂಸೆಟ್ಟ್ಸ್ ಹಾಗೂ ಪೂರ್ವಕ್ಕೆ ರೋಡ್ ಐಲಂಡ್ ಸ್ತಿಥವಾಗಿವೆ. ಇದರ ರಾಜಧಾನಿ ಹಾರ್ಟ್ಫ಼ರ್ಡ್. ಬ್ರಿಡ್ಜ್ ಪೋರ್ಟ್, ನ್ಯೂ ಹಾವೆನ್, ಬ್ರಿಸ್ಟಲ್, ಸ್ಟಾಂಫ಼ರ್ಡ್ ಕೆಲವು ದೊಡ್ಡ ನಗರಗಳು. ರಾಜ್ಯದಲ್ಲಿ ಸುಮಾರು ೧೭೦ ಪಟ್ಟಣಗಳಿವೆ.
ರಾಜ್ಯದ ಅತೀ ಎತ್ತರವಾದ ಪರ್ವತವೆಂದರೆ ಬೇರ್ ಪರ್ವತ. ಇದು ರಾಜ್ಯದ ವಾಯುವ್ಯ ದಿಕ್ಕಿನಲ್ಲಿ ಸಾಲಿಸ್ಬರಿ ನಗರದ ಬಳಿ ಸ್ತಿಥವಾಗಿದೆ. ಕನೆಕ್ಟಿಕಟ್ ನದಿ ದಾಜ್ಯದ ಮಧ್ಯದಲ್ಲಿ ಹರಿಯುತ್ತದೆ. ಈ ರಾಜ್ಯದ ಪಶ್ಚಿಮ ಭಾಗ ಪುರ್ವಕ್ಕಿಂತ ಎತ್ತರವಾಗಿದ್ದು, ಮಧ್ಯದಲ್ಲಿರುವ ಕನೆಕ್ಟಿಕಟ್ ನದೀಕಣಿವೆಯ ಕಡೆಗೆ ಇಳಿಜಾರಾಗಿದೆ. ತೀರ ಡೊಂಕಾಗಿರುವುದರಿಂದ ಬಂದರುಗಳಿಗೆ ಅನುಕೂಲಕಾರಿ. ರಾಜ್ಯದ ಚಳಿಗಾಲದ ಸರಾಸರಿ ಉಷ್ಣತೆ 25º ಫ್ಯಾ. ಮತ್ತು 30º ಫ್ಯಾ. ನಡುವೆಯೂ ಬೇಸಗೆಕಾಲದ ಸರಾಸರಿ ಉಷ್ಣತೆ 65º ಫ್ಯಾ. ಮತ್ತು 70º ಫ್ಯಾ. ನಡುವೆಯೂ ಇರುತ್ತವೆ. ವಾರ್ಷಿಕ ಸರಾಸರಿ ಅವಪಾತದ್ರವ (ಪ್ರೆಸಿಪಿಟೇಷನ್) 45ಳಿ. ಇದು ವರ್ಷವೀಡೀ ಸಮನಾಗಿ ಹಂಚಿಕೆಯಾಗಿದೆ. ಇದರಲ್ಲಿ ಬಹುಭಾಗ ಹಿಮ. , ಚೆಸ್ನಟ್, ಚೆಸ್ನಟ್ ಓಕ್ ಮತ್ತು ಪೀತ ಪಾಪ್ಲರ್‍ಗಳ ಕಾಡೇ ಕನೆಕ್ಟಿಕಟಿನ ಸ್ವಾಭಾವಿಕ ಸಸ್ಯ. ಈಶಾನ್ಯದಲ್ಲಿ ಈ ಮರಗಳ ಜೊತೆಗೆ ಮೇಪಲ್, ಹೆಮ್ಲಾಕ್, ಬೀಚ್ ಮತ್ತು ಬರ್ಚ್ಗಳೂ ಇದ್ದುವು. ಈಗ ಕಾಡುಗಳು ಬಲು ಕಡಿಮೆ.
ವ್ಯವಸಾಯ
ಕನೆಕ್ಟಿಕಟಿನಲ್ಲಿ ಕೈಗಾರಿಯೇ ಪ್ರಧಾನವಾದರೂ ವ್ಯವಸಾಯವೂ ತಕ್ಕಮಟ್ಟಿಗೆ ನಡೆಯುತ್ತದೆ. ಒಳ್ಳೆಯ ನೆಲಕ್ಕೆ ಮಾತ್ರ ಕೃಷಿಕಾರ್ಯ ಸೀಮಿತ. ಹಸಿಮೇವು, ಒಣಹುಲ್ಲು, ಓಟ್ಸ್, ಮುಸುಕಿನಜೋಳ. ಹಗೇವುಮೇವು. ಅಲೂಗೆಡ್ಡೆ, ಹೈನು ಮುಖ್ಯ ಉತ್ಪನ್ನ. ಕೆಲವು ಸುಂದರ ಹೊಲಗಳು ನಿಸರ್ಗಸೌಂದರ್ಯದ ಬೀಡುಗಳು; ಇವನ್ನು ನೋಡಲು ಬೇಸುಗೆಯ ದಿನಗಳಲ್ಲಿ ವಿಹಾರಾರ್ಥಿಗಳು ತಂಡತಂಡವಾಗಿ ಬರುತ್ತಾರೆ. ಕನೆಕ್ಟಿಕಟ್ ನದಿಯ ಮೇಲಣ ಸೋಪಾನನೆಲದ ಕೃಷಿಕ್ಷೇತ್ರಗಳು ಬಲು ಉತ್ಕೃಷ್ಟ. ಹೊಗೆಸೊಪ್ಪು, ಚುಟ್ಟಾ ಎಲೆ-ಇವು ಇಲ್ಲಿಯ ವಿಶಿಷ್ಟ ಉತ್ಪನ್ನಗಳು.
ಕೈಗಾರಿಕೆ
ಈ ರಾಜ್ಯದಲ್ಲಿ ಕೈಗಾರಿಕೆಗಳು ವಿಶೇಷವಾಗಿ ಬೆಳೆದಿವೆ. ಇವಕ್ಕಾಗಿ ಕಚ್ಚಾ ಸಾಮಾಗ್ರಿ ಹೆಚ್ಚಾಗಿ ಆಮದಾಗುತ್ತದೆ. ಪರಂಪರೆಯಾಗಿ ಬಂದ ತಂತ್ರಕೌಶಲ ಅಗತ್ಯವಾದ ಕೈಗಾರಿಕೆಗಳು ಇಲ್ಲಿ ಬೆಳೆದಿವೆ. ಜವಳಿ, ಕಬ್ಬಿಣದ ಸಾಮಾನು. ಗಡಿಯಾರ, ಒಡವೆ, ಅಗ್ನ್ಯಸ್ತ್ರ-ಇವು ಇಲ್ಲಿಯ ಕೆಲವು ಮುಖ್ಯ ಉತ್ಪನ್ನಗಳು.
References
- United States Government Printing Office Style Manual (2000), §5.23, http://www.gpoaccess.gov/stylemanual/index.html
- SHG Resources, http://www.shgresources.com/resources/symbols/names/residentnames/
- Population Estimates for All Places: 2000 to 2006: Connecticut SUB-EST2006-04-09.xls. United States Census Bureau. Retrieved 2007-10-16.
- State Data from the State and Metropolitan Area Data Book: 2006. United States Census Bureau. Retrieved 2007-10-16.
- "Annual Estimates of the Resident Population for the United States, Regions, States, and Puerto Rico: April 1, 2000 to July 1, 2009". United States Census Bureau. Archived from the original on 2007-07-31. Retrieved 2009-12-23. Cite uses deprecated parameter
|deadurl=
(help) - "Elevations and Distances in the United States". U.S Geological Survey. 29 April 2005. Retrieved 2006-11-03.
ಬಾಹ್ಯ ಸಂಪರ್ಕಗಳು
- Connecticut's Official State Website
- CTVisit.com - Official tourism website
- Connecticut QuickFacts - U.S Census Bureau