ಎಚ್. ಆರ್. ಶ್ರೀಪಾದ್
ಡಾ.ಎಚ್. ಆರ್. ಶ್ರೀಪಾದ್ ಮೊದಲು, ಕೋಣನೂರಿನ 'ಬಿ.ಎಂ.ಶೆಟ್ಟಿ ಸರ್ಕಾರಿ ಕಾಲೇಜ್ ನಲ್ಲಿ, ತಮ್ಮ ವೃತ್ತಿಜೀವನವನ್ನು ಆರಂಭಿಸಿ, ನಂತರ 'ಹೊಳೆನರಸೀಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ'ನಲ್ಲಿ ಸ್ವಲ್ಪ ಕಾಲ, ಸೇವೆಸಲ್ಲಿಸಿ, ಪ್ರಸ್ತುತ ಮಂಡ್ಯ[1] ನಗರದ 'ಸ್ವಾಯತ್ತ ಸರ್ಕಾರಿ ಮಹಾವಿದ್ಯಾಲಯದಲ್ಲಿ ಸಹ-ಭೌತಶಾಸ್ತ್ರ ಪ್ರಾಧ್ಯಾಪಕ'ರಾಗಿ ಕೆಲಸಮಾಡುತ್ತಿದ್ದಾರೆ. ಅಧ್ಯಾತ್ಮದಲ್ಲಿ ಆಸಕ್ತರಾಗಿರುವ ಪ್ರೊ. ಶ್ರೀಪಾದರ ಆದರ್ಶ ಗುರುಗಳು,ಪರಮ ಪೂಜ್ಯ ಶ್ರೀ.ಶ್ರೀ. ವಿರಜಾನಂದ ಸರಸ್ವತಿಸ್ವಾಮೀಜಿಯವರು. ಈಗ ಅವರು ಶ್ರೀಗಳ ಪರಮ ಭಕ್ತರಾಗಿದ್ದಾರೆ.
ಡಾ. ಎಚ್. ಆರ್. ಶ್ರೀಪಾದ್ | |
---|---|
![]() ಡಾ. ಎಚ್. ಆರ್. ಶ್ರೀಪಾದ್ | |
ಜನನ | ಶ್ರೀಪಾದ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ |
ರಾಷ್ಟ್ರೀಯತೆ | ಭಾರತೀಯ |
ವಿದ್ಯಾಭ್ಯಾಸ | ವಿಶ್ವವಿದ್ಯಾಲಯ ಪಿ.ಎಚ್.ಡಿ |
ವೃತ್ತಿ | ಮಂಡ್ಯನಗರದ ಸ್ವಾಯತ್ತ ಸರಕಾರಿ ಮಹಾವಿದ್ಯಾಲಯದ ಸಹ ಭೌತಶಾಸ್ತ್ರ ಪ್ರಾಧ್ಯಾಪಕ, |
Known for | ಎಮ್. ಫಿಲ್. ಮತ್ತು ಪಿ.ಎಚ್.ಡಿ. ಓದಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಶ್ರೀ ವಿರಾಜನಂದ ಸರಸ್ವತಿ ಸ್ವಾಮಿಗಳ ಪರಮ ಶಿಷ್ಯ. |
ಜಾಲತಾಣ | sites |
ಜನನ,ಬಾಲ್ಯ,ವಿದ್ಯಾಭ್ಯಾಸ ಹಾಗೂ ವೃತ್ತಿಜೀವನ
'ಶ್ರೀಪಾದ್', [2]ಶ್ರೀಯುತ ಎಚ್.ಎಸ್.ರಾಮಚಂದ್ರ ರಾವ್ ಹಾಗೂ ಶ್ರೀಮತಿ ರಾಜೇಶ್ವರಿ ದಂಪತಿಗಳ ಪ್ರೀತಿಯ ಮಗನಾಗಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ[3] ಗ್ರಾಮದಲ್ಲಿ ಜನಿಸಿದರು. ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲ ಶಿಕ್ಷಣಗಳನ್ನು ಹುಟ್ಟೂರಾದ 'ಹೊಳಲ್ಕೆರೆ'ಯಲ್ಲೇ ಮಾಡಿಮುಗಿಸಿದರು. ನಂತರ ಪದವಿ ಪೂರ್ವ ವ್ಯಾಸಂಗವನ್ನು ಮಲ್ಲಾಡಿಹಳ್ಳಿ ಯಲ್ಲಿಯೂ, ಪದವಿ ವ್ಯಾಸಂಗವನ್ನು ಚಿತ್ರದುರ್ಗದಲ್ಲಿ ಮಾಡಿದರು. ಮೈಸೂರಿನ 'ಮಾನಸ ಗಂಗೋತ್ರಿ'ಯಲ್ಲಿ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ವಿದ್ಯಾಭ್ಯಾಸವನ್ನು ಮಾಡಿ,ಪ್ರಥಮ ರ್^ಯಾಂಕ್ ನೊಂದಿಗೆ 'ಐದು ಚಿನ್ನದ ಪದಕ'ಗಳನ್ನು ಗಳಿಸಿದರು. ಮುಂದೆ ಅದೇ ವಿಶ್ವವಿದ್ಯಾಲಯದಲ್ಲಿ ಡಾ. ಎಸ್. ಗೋಪಾಲ್ ರವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಸನ್.೧೯೯೨ ರಲ್ಲಿ ಪಿ.ಎಚ್.ಡಿ. ಪದವಿಯನ್ನು ಗಳಿಸಿದರು. ಅದೇ ವರ್ಷದಲ್ಲಿ ಕರ್ನಾಟಕ ಸರಕಾರದ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಭೌತಶಾಸ್ತ್ರದ ಉಪನ್ಯಾಸಕರಾಗಿ ಆಯ್ಕೆಯಾದರು. ಸ್ನಾತಕೋತ್ತರ ತರಗತಿಗಳಿಗೆ ಬೋಧಿಸುತ್ತಿದ್ದಾರೆ. ರಾಷ್ಟ್ರೀಯ, 'ಅಂತಾರಾಷ್ಟ್ರೀಯ ವೈಜ್ಞಾನಿಕ ನಿಯತಕಾಲಿಕೆ'ಗಳಲ್ಲಿ ಹಾಗೂ 'ವಿಚಾರಸಂಕಿರಣ'ಗಳಲ್ಲಿ ತಮ್ಮ ಸಂಶೋಧನಾ ಲೇಖನಗಳನ್ನು ಮಂಡಿಸಿದ್ದಾರೆ. ಎಂ. ಫಿಲ್, ಹಾಗೂ ಪಿ.ಎಚ್.ಡಿ. ಪದವಿಗಳಿಗೆ ಮಾರ್ಗದರ್ಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. 'ಆಕಾಶವಾಣಿ'ಯಲ್ಲೂ ಹಲವಾರು ಕಾರ್ಯಕ್ರಮಗಳನ್ನು ನೀಡುತ್ತಿರುವ 'ಶ್ರೀಪಾದ'ರು, ಹಲವಾರು ಕವನಗಳನ್ನೂ ಪ್ರಕಟಿಸಿರುತ್ತಾರೆ. ವೃತ್ತಿಜೀವನದಲ್ಲಿ 'ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ'ಯಾಗಿ, 'ಎನ್.ಸಿ.ಸಿ. ಅಧಿಕಾರಿ'ಯಾಗಿ, 'ವಿದ್ಯಾರ್ಥಿಗಳ ಆಪ್ತ ಸಲಹಾಕಾರ'ರಾಗಿಯೂ ಸೇವೆಸಲ್ಲಿಸಿದ್ದಾರೆ. ಭೌತಶಾಸ್ತ್ರದ ೩ ಹೊತ್ತಿಗೆಗಳಿಗೆ ಬರಹಗಾರರಾಗಿ ಕೊಡುಗೆ ನೀಡಿದ್ದಾರೆ.
'ಸತ್ಸಂಗಿ'
ಪರಮಪೂಜ್ಯ ಶ್ರೀ.ಶ್ರೀ. ವಿರಜಾನಂದ ಸರಸ್ವತಿಸ್ವಾಮೀಜಿಯವರ [4] ದಿವ್ಯ ಕೃಪೆಯಿಂದಾಗಿ ಅಧ್ಯಾತ್ಮವಿಷಯಗಳ ಬರವಣಿಗೆಗೆ ತಿರುಗಿ ಪೂಜ್ಯ ಸ್ವಾಮೀಜಿಯವರು ನೀಡಿದ ಅನೇಕ ಪ್ರವಚನಗಳನ್ನು ಲೇಖನ ರೂಪಕ್ಕೆತಂದು'ಸತ್ಸಂಗಿ' ಎಂಬ 'ಕಾವ್ಯನಾಮ'ದಿಂದ ಸುಮಾರು ೮೦ ಲೇಖನಗಳನ್ನು ಹೊರತಂದಿದ್ದಾರೆ. ಅವುಗಳಲ್ಲಿ ಪ್ರಮುಖವಾದ ಕೃತಿಗಳು :
- ಆನಂದ ಯಾತ್ರೆ
- ನವರತ್ನ ಮಾಲೆ
- ಭಕ್ತಾಷ್ಟಕ
- ಉದಯ ರವಿ[5]
- ಬೆಲಗೂರಿನ ಅವಧೂತವರೇಣ್ಯ ಶ್ರೀ ಶ್ರೀ ಬಿಂದುಮಾಧವ ಶರ್ಮಾ ಸ್ವಾಮೀಜಿಯವರು-ಒಂದು ಒಳ ನೋಟ.
ಪ್ರಶಸ್ತಿ ಪುರಸ್ಕಾರಗಳು
- 'ಹಾಸನದ ಹೊಯ್ಸಳ ಕರ್ನಾಟಕ ಸಂಘ'ದಿಂದ ಪುರಸ್ಕಾರ,
- 'ಅರಕಲಗೂಡಿನ ಗೀತಾ ಜ್ಞಾನಯಜ್ಞ ಸಮಿತಿ'ಯ ಪುರಸ್ಕಾರ,
- ನವೆಂಬರ್, ೨೦೦೮ ರಂದು, 'ತಾಲ್ಲೂಕು ರಾಜ್ಯೋತ್ಸವ ಸಮಿತಿ ಪುರಸ್ಕಾರ',
- ೨೦೦೯ ರಲ್ಲಿ, 'ಮೈಸೂರಿನ ಸೇಂಟ್ ಫಿಲೋಮಿನ ಕಾಲೇಜ್' ನಲ್ಲಿ ಪ್ರಸ್ತುತ ಪಡಿಸಿದ 'ಸಂಶೋಧನಾ ಕೃತಿಯ ಪ್ರಸ್ತುತಿ' ಅತ್ಯುತ್ತಮವೆಂಬ ಹೆಗ್ಗಳಿಗೆ ಪಾತ್ರವಾಯಿತು.
- 'ಸಂಶೋಧನ ಕೃತಿ ಪ್ರಸ್ತುತಿ'ಯನ್ನು ಮೆಚ್ಚಿ ಗಳಿಸಲಾದ ಪ್ರಶಸ್ತಿ.[6]