ಆಮೆ
ಚಿಪ್ಪಿನ ಆಕಾರ ಹೊಂದಿರುವ ಆಮೆಗಳು ಸರೀಸೃಪ ಜಾತಿಗೆ ಸೇರಿದವು. (ಇವುಗಳಲ್ಲಿ ಮೇಲು ವರ್ಗದ ದೊಡ್ಡ ಗಾತ್ರದ ಗುಂಪಿಗೆ ಸೇರಿದ್ದು ಚಿಪ್ಪಿರುವ ಪ್ರಾಣಿ -ಕೆಲೋನಿಯಾ-) ವಿಶೇಷ ಎಲುಬು ಅಥವಾ ಮೃದುವಾದ ಎಲುಬಿನ ಚಿಪ್ಪು ಅವುಗಳ ಪಕ್ಕೆಲಬುಗಳಿಂದ ಬೆಳವಣಿಗೆ ಹೊಂದಿ ಅವು ಕವಚದ ಆಕಾರದಲ್ಲಿ ಕಾರ್ಯನಿರ್ವಹಿಸುತ್ತವೆ. "ಆಮೆ"ಗಳನ್ನು ಇಡಿಯಾಗಿ ಚಿಪ್ಪಿರುವ ಪ್ರಾಣಿವರ್ಗಕ್ಕೆ ಸೇರಿಸಬಹುದು ಅಥವಾ ಒಂದೇ ಸ್ವಭಾವ ಇರುವ ಚಿಪ್ಪಿರುವ ಪ್ರಾಣಿಗಳ ವರ್ಗಕ್ಕೂ ಸೇರಿಸಬಹುದು - ಸಮುದ್ರ ಆಮೆ, ಸಿಹಿ ನೀರಿನ ಆಮೆ, ಕೂರ್ಮ ಮತ್ತು ಕೆಳಗಿನ ಚರ್ಚೆಯನ್ನೂ ನೋಡಿ. ಚಿಪ್ಪಿರುವ ಪ್ರಾಣಿ ವರ್ಗದಲ್ಲಿ ಈಗಲೂ ಇರುವ (ಜೀವಿಸಿರುವ) ಮತ್ತು ನಶಿಸಿ ಹೋಗಿರುವ ತಳಿಗಳಿವೆ. ಆಮೆಗಳ ಅತಿ ಪ್ರಾಚೀನ ಅಸ್ತಿತ್ವ ಕಂಡು ಬಂದದ್ದು ೨೧೫ ದಶಲಕ್ಷ ವರ್ಷಗಳ ಹಿಂದೆ.[2] ಇದು ಆಮೆಗಳನ್ನು ಅತಿ ಹಳೆಯ ಸರೀಸೃಪ ವರ್ಗಕ್ಕೆ ಸೇರಿಸಿದೆ ಮತ್ತು ಹಲ್ಲಿಗಳು ಹಾಗೂ ಹಾವುಗಳಿಗಿಂತಲೂ ಇವು ಪ್ರಾಚೀನವಾಗಿವೆ. ಇಂದು ಜೀವಂತವಿರುವ ಅನೇಕತಳಿಗಳಲ್ಲಿ ಕೆಲವು ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿವೆ.[3] ಇತರ ಸರೀಸೃಪಗಳಂತೆ ಆಮೆಗಳು ಶೀತರಕ್ತದ (ectotherm) ಪ್ರಾಣಿಗಳು. ತಾವು ವಾಸಿಸುವ ಪರಿಸರದ ತಮ್ಮ ಆಂತರಿಕ ತಾಪವನ್ನು ಹೊಂದಿಸಿಕೊಳ್ಳುವ ಸಾಮರ್ಥ್ಯವಿರುವ ಪ್ರಾಣಿಗಳು, ಇವನ್ನು ಶೀತರಕ್ತದ ಪ್ರಾಣಿ ಎನ್ನುವರು. ಆದರೆ ಚರ್ಮದ ಬೆನ್ನಿನ ಸಮುದ್ರ ಆಮೆಗಳು ತನ್ನ ಸುತ್ತಲಿನ ನೀರಿಗಿಂತಲೂ ಗಮನಾರ್ಹವಾಗಿ ಹೆಚ್ಚಿನ ಶರೀರ ತಾಪಮಾನವನ್ನು ಹೊಂದಿರುತ್ತವೆ. ಇದಕ್ಕೆ ಕಾರಣ ಅವುಗಳ ಅತ್ಯಧಿಕ ಉಪಾಪಚಯಿ (ಮೆಟಾಬೊಲಿಕ್) ಪ್ರಮಾಣ. ಇತರ ನೀರಿನಿಂದ ಹೊರಗೆ ಮೊಟ್ಟೆಯಿಡುವ ಪ್ರಾಣಿ (ಸರೀಸೃಪಗಳು, ಡೈನಾಸೋರ್, ಹಕ್ಕಿಗಳು ಮತ್ತು ಸಸ್ತನಿ)ಗಳಂತೆ ಅವು ಗಾಳಿಯನ್ನು ಉಸಿರಾಡುತ್ತವೆ ಮತ್ತು ಅನೇಕ ತಳಿಗಳು ನೀರಿನಲ್ಲಿ ಅಥವಾ ಸುತ್ತಲೂ ವಾಸಿಸುತ್ತಿದ್ದರೂ ನೀರಿನಲ್ಲಿ ಮೊಟ್ಟೆಗಳನ್ನು ಇಡುವುದಿಲ್ಲ. ಅತಿದೊಡ್ಡ ಆಮೆಗಳು ನೀರಿನಲ್ಲಿ ವಾಸಿಸುವವು.
Turtles ಕಾಲಮಾನ ವ್ಯಾಪ್ತಿ: 215–0Ma PreЄ
Є
O
S
D
C
P
T
J
K
Pg
N
| |
---|---|
![]() | |
Florida Box Turtle Terrapene carolina | |
ವೈಜ್ಞಾನಿಕ ವರ್ಗೀಕರಣ | |
ಸಾಮ್ರಾಜ್ಯ: | Animalia |
ವಂಶ: | Chordata |
ಉಪವಂಶ: | Vertebrata |
ವರ್ಗ: | Reptilia |
ಗಣ: | Testudines Linnaeus, ೧೭೫೮ [1] |
Suborders | |
Cryptodira | |
Diversity | |
೧೪ extant families with ca. ೩೦೦ species | |
blue: sea turtles, black: land turtles |
ದೇಹರಚನೆ ಮತ್ತು ರೂಪವಿಜ್ಞಾನ

ಅತಿದೊಡ್ಡ ಚಿಪ್ಪಿರುವ ಪ್ರಾಣಿ ಚರ್ಮದ ಬೆನ್ನಿನ ಸಮುದ್ರ ಆಮೆ (ಡೆರ್ಮೋಚೆಲಿಸ್ ಕಾರಿಯೇಸಿಯಾ ) ಚಿಪ್ಪಿನ ಉದ್ದಕ್ಕೂ ಬೆಳೆದು200 centimetres (6.6 ft) ಭಾರೀ ತೂಕವನ್ನೂ ಹೊಂದಿರುತ್ತದೆ.900 kilograms (2,000 lb) ಸಿಹಿ ನೀರಿನ ಆಮೆ ಸಾಮಾನ್ಯವಾಗಿ ಚಿಕ್ಕದಿರುತ್ತವೆ. ಆದರೆ ಈ ಜಾತಿಯಲ್ಲಿಯೇ ದೊಡ್ಡ ಪ್ರಮಾಣದಲ್ಲಿರುವುದು ಏಶಿಯದ ಮೃದು ಚಿಪ್ಪಿನ ಆಮೆ ಪೆಲೋಚೆಲಿಸ್ ಕ್ಯಾಂಟೋರಿ , ಕೆಲವು ವ್ಯಕ್ತಿಗಳು ಮಾತ್ರ ಇದರ ಬಗ್ಗೆ ಹೇಳಿದ್ದಾರೆ.200 centimetres (6.6 ft) ಇವು ಕುಬ್ಜವಾಗಿದ್ದು ಎಲ್ಲಿಗೇಟರ್ ಸ್ನ್ಯಾಪ್ಪಿಂಗ್ ಟರ್ಟಲ್ ಎಂದೇ ಇವು ಹೆಸರಾಗಿವೆ. ಉತ್ತರ ಅಮೇರಿಕದಲ್ಲಿಯ ಅತಿ ದೊಡ್ಡ ಕೆಲೋನಿಯನ್ ದೊಡ್ಡ ಚಿಪ್ಪನ್ನು80 centimetres (2.6 ft)೨೦೦ ಸೆಂಟಿಮೀಟರ್ ಸುಮಾರು (೬.೬ಅಡಿ) ಹೊಂದಿವೆ. ಮತ್ತು ಸುಮಾರು ೯೦೦ ಕಿಲೋ ಗ್ರಾಂ (೨೦೦೦ಪೌಂಡ್)ತೂಕವನ್ನೂ ಹೊಂದಿವೆ60 kilograms (130 lb). ಭಾರೀ ಗಾತ್ರದ ಜಿಯೋಕೆಲೋನ್ , ಮಿಯೋಲಾನಿಯಾ ಮತ್ತಿತರ ಆಮೆಗಳ ತಳಿಗಳು ಇತಿಹಾಸ ಪೂರ್ವ ಕಾಲದಲ್ಲಿಯೇ ಜಗತ್ತಿನ ಎಲ್ಲೆಡೆ ಪಸರಿಸಿದ್ದವು, ಮತ್ತು ಉತ್ತರ ಮತ್ತು ದಕ್ಷಿಣ ಅಮೆರಿಕ, ಆಸ್ಟ್ರೇಲಿಯಾ ಮತ್ತು ಆಫ್ರಿಕಗಳಲ್ಲಿ ಇವು ಅಸ್ತಿತ್ವದಲ್ಲಿದ್ದ ಬಗ್ಗೆ ತಿಳಿದಿದೆ. ಮಾನವ ಅಸ್ತಿತ್ವಕ್ಕೆ ಬರುವ ಸಮಯದಲ್ಲಿ ಇವು ತಮ್ಮ ಅಸ್ತಿತ್ವವನ್ನು ಕಳೆದುಕೊಂಡವು. ಮಾನವನು ಇವುಗಳನ್ನು ತನ್ನ ಆಹಾರಕ್ಕಾಗಿ ಬೇಟೆಯಾಡಿದ ಎಂದು ಊಹಿಸಲಾಗಿದೆ. ಬದುಕುಳಿದಿರುವ ದೈತ್ಯ ಗಾತ್ರದ ಆಮೆಗಳು ಸಿಚೆಲ್ಲೆಸ್ ಮತ್ತು ಗಾಲಾಪಾಗೋಸ್ ದ್ವೀಪಗಳಲ್ಲಿ ಇವೆ. ಮತ್ತು ಇವು ೮೦ ಸೆಂಟಿಮೀಟರ್ (೨.೬ ಅಡಿ) ಉದ್ದ130 centimetres (51 in) ಮತ್ತು ೬೦ ಕಿಲೋಗ್ರಾಂ (೧೩೦ ಪೌಂಡ್್ ತೂಕದವು300 kilograms (660 lb).[4] ಅತ್ಯಂತ ದೊಡ್ಡ ಕೆಲೋನಿಯನ್ ಆರ್ಚೆಲೋನ್ ಇಸ್ಚಿರೋಸ್ ,ಮಧ್ಯಜೀವಿಕಲ್ಪದ ಉತ್ತರಾರ್ಧ(Late Cretaceous)ದಲ್ಲಿ ಇತ್ತು. ಇದು ೪.೬ ಮೀಟರ್ (೧೫ಅಡಿ) ಉದ್ದ4.6 metres (15 ft) ಇತ್ತು ಎಂದು ತಿಳಿಯಲಾಗಿದೆ.[5] ಅತಿ ಸಣ್ಣ ಆಮೆ ದಕ್ಷಿಣ ಆಫ್ರಿಕದ ಮಚ್ಚೆಗಳಿರುವ ಮೃದು ಪಾದದ ಆಮೆಗಳು. ಇದು ೮ ಸೆ.ಮೀ.(೩.೧)ಅಂಗುಲ)ಕ್ಕಿಂತ ಉದ್ದ8 centimetres (3.1 in)ವಿಲ್ಲ ಮತ್ತು ತೂಕ ಸುಮಾರು ೧೪೦ ಗ್ರಾಂ. (೪.೯ ಔನ್ಸ್)140 grams (4.9 oz) ನಷ್ಟಿದೆ. ಇತರ ಎರಡು ಚಿಕ್ಕ ಆಮೆಗಳ ತಳಿಗಳು ಅಮೆರಿಕದ ಮಡ್ ಟರ್ಟಲ್ ಗಳು ಮತ್ತು ಮಸ್ಕ್ ಟರ್ಟಲ್ ಗಳು . ಇವು ಕೆನಡಾದಿಂದದಕ್ಷಿಣ ಅಮೆರಿಕದ ವರೆಗೆ ವಾಸಿಸುತ್ತಿವೆ. ಈ ಗುಂಪಿನ ಅನೇಕ ತಳಿಗಳಲ್ಲಿ ಚಿಪ್ಪಿನ ಉದ್ದ 13 centimetres (5.1 in)೧೩ ಸೆ.ಮೀ.(೫.೧ ಅಂಗುಲ) ಕ್ಕಿಂತ ಕಡಿಮೆ ಇವೆ.


ಕುತ್ತಿಗೆ ಮಡಚುವುದು
ತಮ್ಮ ಚಿಪ್ಪಿನೊಳಗೆ ಕುತ್ತಿಗೆಯನ್ನು ಹಿಂದಕ್ಕೆ ಎಳೆದುಕೊಳ್ಳುವ ಸಮಸ್ಯೆಯನ್ನು ಹೇಗೆ ನಿವಾರಿಸಿಕೊಂಡವು ಎನ್ನುವುದರ ಮೇಲೆ ಆಮೆಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಲಾಗಿದೆ.( ಕೆಲವು ವಂಶದಿಂದ ಬಂದ ಪ್ರೊಗಾನೋಚೆಲಿಸ್ ಹೀಗೆ ಮಾಡಲಾರವು) ಕ್ರಿಪ್ಟೋಡಿರಾ ತನ್ನ ಬೆನ್ನು ಮೂಳೆಯ ಕೆಳಗೆ ಕುಗ್ಗಿಸಿಕೊಂಡು ತಮ್ಮ ಕುತ್ತಿಗೆಯನ್ನು ಒಳಗೆ ಎಳೆದುಕೊಳ್ಳುತ್ತವೆ. ಪ್ಲ್ಯುರೋಡಿರಾ ಪಕ್ಕಕ್ಕೆ ತನ್ನ ಕತ್ತನ್ನು ಕುಗ್ಗಿಸಿಕೊಳ್ಳುತ್ತದೆ.
ತಲೆ
ಭೂಮಿಯ ಮೇಲೆಯೆ ತಮ್ಮ ಬದುಕಿನ ಹೆಚ್ಚಿನ ಕಾಲ ಕಳೆಯುವ ಬಹುತೇಕ ಆಮೆಗಳು ತಮ್ಮ ಮುಂದಿರುವ ವಸ್ತುವಿನ ಮೇಲೆ ದೃಷ್ಟಿಯನ್ನು ಕೇಂದ್ರೀಕರಿಸಿರುತ್ತವೆ. ನೀರಿನಲ್ಲಿರುವ ಕೆಲವು ಕಡಿಯುವಂಥ ಆಮೆಗಳು ಮತ್ತು ಮೃದು-ಚಿಪ್ಪಿನ ಆಮೆಗಳು ತಲೆಯ ತುದಿಭಾಗದ ಹತ್ತಿರದಲ್ಲಿ ಕಣ್ಣುಗಳನ್ನು ಹೊಂದಿರುತ್ತವೆ. ಈ ತಳಿಯ ಆಮೆಗಳು ತುಂಬಿದ ನೀರಿನಲ್ಲಿ ತಮ್ಮನ್ನು ತಿನ್ನುವುದಕ್ಕೆ ದಾಳಿ ಮಾಡುವವರಿಂದ ಬಚಾವಾಗಲು ಕಣ್ಣುಗಳನ್ನು ಮತ್ತು ಮೂಗಿನ ಹೊರಳೆಗಳನ್ನು ಮಾತ್ರ ನೀರಿನ ಹೊರಗಿಟ್ಟು ಇಡೀ ಶರೀರವನ್ನು ನೀರಿನಲ್ಲಿ ಮುಳುಗಿಸಿಟ್ಟುಕೊಳ್ಳುತ್ತವೆ. ಸಮುದ್ರದ ಆಮೆಗಳು ಕಣ್ಣುಗಳ ಬಳಿ ಗ್ರಂಥಿಗಳನ್ನು ಹೊಂದಿದ್ದು ಇವು ಉಪ್ಪಿನಂಶ ಇರುವ ಕಣ್ಣೀರನ್ನು ಉತ್ಪಾದಿಸುತ್ತವೆ. ತಾವು ಕುಡಿದ ನೀರಿನಲ್ಲಿಯ ಹೆಚ್ಚುವರಿ ಉಪ್ಪಿನಂಶವನ್ನು ಶರೀರದಿಂದ ಈ ರೀತಿ ಹೊರ ಹಾಕುತ್ತವೆ. ಆಮೆಗಳಿಗೆ ಅಪರೂಪದ ರಾತ್ರಿ ದೃಷ್ಟಿ ಇದೆ ಎಂದು ತಿಳಿಯಲಾಗಿದೆ. ಇದಕ್ಕೆ ಕಾರಣ ಅವುಗಳ ಅಕ್ಷಿಪಟದಲ್ಲಿರುವ ಅಸ್ವಾಭಾವಿಕ ಭಾರೀ ಪ್ರಮಾಣದ ರಾಡ್ ಸೆಲ್ (ಕಡ್ಡಿಯಂಥ ಕೋಶ)ಗಳು. ಆಮೆಗಳು ಶಂಕು ಉಪಾಕೃತಿಯ ಸಂಪುಷ್ಟ ಬಣ್ಣದ ದೃಷ್ಟಿ ಹೊಂದಿವೆ. ಇದರ ಸಂವೇದನ ಶ್ರೇಣಿ ಅಲ್ಟ್ರಾವೈಯೋಲೆಟ್ ನಿಂದ ಕೆಂಪಿನ ವರೆಗೆ ಇದೆ. ಭೂಮಿಯ ಮೇಲಿರುವ ಕೆಲವು ಆಮೆಗಳಲ್ಲಿ ಬೆಂಬತ್ತುವ ಚಲನ ಸಾಮರ್ಥ್ಯ ಇಲ್ಲ. ಸಾಮಾನ್ಯವಾಗಿ ಇವು ತೀವ್ರಗತಿಯಲ್ಲಿ ಚಲಿಸುವ ಬಲಿಪಶುವನ್ನು ಭಕ್ಷಣೆ ಮಾಡುವ ಇತರ ಜೀವಿಗಳನ್ನು ಅವಲಂಬಿಸಿವೆ. ಆದರೆ ಮಾಂಸಾಹಾರಿ ಆಮೆಗಳು ಆಹಾರವನ್ನು ಹಿಡಿಯಲು ಕತ್ತನ್ನು ಗಭಕ್ಕನೆ ಚಲಿಸುವ ಸಾಮರ್ಥ್ಯ ಹೊಂದಿವೆ. ಆಮೆಗಳು ಒರಟಾದ ಬಾಗಿದ ನೀಳ್ಮೂತಿಯನ್ನು ಹೊಂದಿವೆ. ಆಮೆಗಳು ತಮ್ಮ ದವಡೆಯನ್ನು ಆಹಾರವನ್ನು ತುಂಡರಿಸಲು ಮತ್ತು ಅಗಿಯಲು ಬಳಸುತ್ತವೆ. ಆಮೆಗಳಲ್ಲಿ ಹಲ್ಲುಗಳಿಗೆ ಬದಲಾಗಿ ಮೇಲಿನ ಮತ್ತು ಕೆಳಗಿನ ದವಡೆಗಳು ಮೊನಚಾದ ಅಂಚುಗಳಿಂದ ಕೂಡಿವೆ. ಮಾಂಸಾಹಾರಿ ಆಮೆಗಳು ಸಾಮಾನ್ಯವಾಗಿ ತಮ್ಮ ಬಲಿಯನ್ನು ಹೋಳುಗಳನ್ನಾಗಿ ಮಾಡುವುದಕ್ಕೆ ಅನುಕೂಲ ಮಾಡುವ ಚಾಕುವಿನಂತೆ ಹರಿತವಾದ ಅಂಚುಗಳನ್ನು ಹೊಂದಿವೆ. ಸಸ್ಯಾಹಾರಿ ಆಮೆಗಳು ಬಾಚಿಯಂಥ ಅಂಚುಗಳನ್ನು ಹೊಂದಿವೆ. ಇವು ಗಟ್ಟಿಯಾದ ಸಸ್ಯಗಳನ್ನೂ ಕತ್ತರಿಸಬಲ್ಲವು. ಆಮೆಗಳು ತಮ್ಮ ಆಹಾರವನ್ನು ನುಂಗುವುದಕ್ಕೆ ನಾಲಿಗೆಯನ್ನು ಬಳಸುತ್ತವೆ. ಆದರೆ ಅವು ಬಹುತೇಕ ಸರೀಸೃಪಗಳಂತೆ ಆಹಾರವನ್ನು ಹಿಡಿಯುವುದಕ್ಕಾಗಿ ತಮ್ಮ ನಾಲಿಗೆಯನ್ನು ಹೊರಗೆ ಚಾಚಲಾರವು.
ಚಿಪ್ಪು
ಆಮೆಯ ಮೇಲ್ಭಾಗದ ಚಿಪ್ಪನ್ನು ಕಾರಾಪೇಸ್ ಎಂದು ಕರೆಯುತ್ತಾರೆ. ಹೊಟ್ಟೆಯನ್ನು ಆವರಿಸಿರುವ ಕೆಳ ಚಿಪ್ಪನ್ನು ಪ್ಲಾಸ್ಟ್ರಾನ್ ಎಂದು ಕರೆಯುತ್ತಾರೆ. ಕಾರಾಪೇಸ್ ಮತ್ತು ಪ್ಲಾಸ್ಚ್ರಾನ್ ಎರಡೂ ಬ್ರಿಡ್ಜಸ್ ಎಂದು ಕರೆಯಲಾಗುವ ಎಲುಬಿನ ಆಕಾರದ ಅಂಚಿನಲ್ಲಿ ಕೂಡಿಕೊಂಡಿವೆ. ಆಮೆಯ ಚಿಪ್ಪಿನ ಒಳ ಪದರ ಬೆನ್ನೆಲುಬಿನ ಮತ್ತು ಪಕ್ಕೆಲಬುಗಳ ಭಾಗಗಳೂ ಸೇರಿದಂತೆ ಸುಮಾರು ೬೦ ಎಲುಬುಗಳಿಂದ ಮಾಡಲ್ಪಟ್ಟಿದೆ. ಇದರರ್ಥ ಆಮೆಗಳು ತಮ್ಮ ಚಿಪ್ಪನ್ನು ಬಿಟ್ಟು ಈಚೆ ಚಲಿಸಲಾರವು. ಬಹುತೇಕ ಆಮೆಗಳಲ್ಲಿ ಚಿಪ್ಪಿನ ಹೊರ ಪದರ ಸ್ಕ್ಯೂಟ್ ಎಂದು ಕರೆಯುವ ಮೊನಚಾದ ಪೊರೆಯಿಂದ ಕೂಡಿರುತ್ತವೆ. ಇದು ಹೊರ ಚರ್ಮದ ಭಾಗವಾಗಿರುತ್ತದೆ ಅಥವಾ ಚರ್ಮವೇ ಆಗಿರುತ್ತದೆ. ಸ್ಕ್ಯೂಟ್್ಗಳು ನಾರಿನಂಥ ಕೆರಾಟಿನ್ ಎಂದು ಕರೆಯುವ ಪ್ರೋಟೀನ್್ನಿಂದ ಆಗಿರುವವು. ಇತರ ಸರೀಸೃಪಗಳಲ್ಲೂ ಇದೇ ಹೊರಚರ್ಮದ ಪೊರೆಯನ್ನು ಮಾಡಿರುತ್ತವೆ. ಈ ಸ್ಕ್ಯೂಟ್್ಗಳು ಚಿಪ್ಪು ಎಲುಬಿನ ನಡುವೆ ಪಸರಿಸಿ ಒಂದುಮಾಡುತ್ತವೆ ಮತ್ತು ಚಿಪ್ಪಿಗೆ ಬಲವನ್ನು ತುಂಬುತ್ತವೆ. ಕೆಲವು ಆಮೆಗಳು ಒರಟಾದ ಸ್ಕ್ಯೂಟ್್ಗಳನ್ನು ಹೊಂದಿರುವುದಿಲ್ಲ. ಉದಾಹರಣೆಗೆ ಚರ್ಮದ ಬೆನ್ನಿನ ಸಮುದ್ರದ ಆಮೆ ಮತ್ತು ಮೃದು-ಚಿಪ್ಪಿನ ಆಮೆಗಳು ಇದರ ಬದಲಾಗಿ ದಪ್ಪ ತೊಗಲಿನ ಚಿಪ್ಪನ್ನು ಹೊಂದಿವೆ. ಒರಟು ಚಿಪ್ಪು ಅಂದರೆ ಆಮೆಗಳು ಇತರ ಸರೀಸೃಪಗಳಂತೆ ತಮ್ಮ ಎದೆಯ ಗೂಡನ್ನು ಪಕ್ಕೆಲಬುಗಳ ಮೂಲಕ ಹಿಗ್ಗಿಸಿ ಮತ್ತು ಕುಗ್ಗಿಸಿ ಉಸಿರಾಡಿಸಲಾರವು. ಬದಲಾಗಿ, ಆಮೆಗಳು ಎರಡು ರೀತಿಯಿಂದ ಉಸಿರಾಡುತ್ತವೆ. ಮೊದಲು, ಅವು ಕೆನ್ನೆಯನ್ನು ಪಂಪ್ ಮಾಡುತ್ತವೆ. ಗಾಳಿಯನ್ನು ತಮ್ಮ ಬಾಯಿಗೆ ಎಳೆದುಕೊಳ್ಳುತ್ತವೆ, ನಂತರ ಅದನ್ನು ಗಂಟಲಿನ ತಳದಲ್ಲಿರುವ ಪದರವನ್ನು ಕಂಪಿಸಿ ಪುಪ್ಪುಸಕ್ಕೆ ತಳ್ಳುತ್ತವೆ. ಎರಡನೆಯದಾಗಿ ಚಿಪ್ಪಿನ ಹಿಂಭಾಗದ ಬಾಯನ್ನು ಮುಚ್ಚಿರುವ ಹೊಟ್ಟೆಯ ಸ್ನಾಯುಗಳನ್ನು ಆಕುಂಚನಗೊಳಿಸುತ್ತದೆ. ಆಗ ಚಿಪ್ಪಿನ ಒಳಗಿನ ಪ್ರಮಾಣ ಹಿಗ್ಗುತ್ತದೆ. ಇದು ಗಾಳಿಯನ್ನು ಪುಪ್ಪುಸದೊಳಕ್ಕೆ ಎಳೆದುಕೊಳ್ಳುತ್ತದೆ. ಸಸ್ತನಿಗಳಲ್ಲಿ ಎದೆಯ ಭಾಗಕ್ಕೂ ಹೊಟ್ಟೆಯ ಭಾಗಕ್ಕೂ ನಡುವಿರುವ ವಿಭಾಜಕಾಂಗದ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಸ್ನಾಯುಗಳಿಗೆ ಅವಕಾಶವನ್ನು ನೀಡುತ್ತವೆ. ಆಮೆಗಳು ಹೇಗೆ ಬದುಕುತ್ತವೆ ಎಂಬುದನ್ನು ಅರಿಯಲು ಚಿಪ್ಪಿನ ಆಕಾರವು ಸರಕಾರಿಯಾಗಬಲ್ಲ ಹೊಳಹನ್ನು ನೀಡುತ್ತದೆ. ಬಹುತೇಕ ಆಮೆಗಳು ದೊಡ್ಡದಾದ ಗುಮ್ಮಟದ ರೀತಿಯ ಚಿಪ್ಪನ್ನು ಹೊಂದಿರುತ್ತವೆ. ಭಕ್ಷಕ ಪ್ರಾಣಿಗಳು ಇದನ್ನು ತಮ್ಮ ದವಡೆಯಲ್ಲಿಟ್ಟು ಅಗಿಯುವುದಕ್ಕೆ ಇದು ಕಠಿಣವನ್ನಾಗಿಸುತ್ತದೆ. ಕೆಲವು ಅಪವಾದಗಳಲ್ಲಿ ಇದೂ ಒಂದು, ಆಫ್ರಿಕದ ಪನಾಕೇಕ್ ಟಾರ್ಟೈಸ್ ಸಪಾಟಾದ ಬಾಗಿಸಬಹುದಾದ ಚಿಪ್ಪನ್ನು ಹೊಂದಿದ್ದು, ಇದು ಅವುಗಳಿಗೆ ನದಿಯೊಳಗಿನ ಪೊಟರೆಗಳಲ್ಲಿ ಅಡಗುವುದಕ್ಕೆ ಅವಕಾಶಮಾಡಿಕೊಡುತ್ತದೆ. ಬಹುತೇಕ ಜಲವಾಸಿ ಆಮೆಗಳು ಸಪಾಟಾದ, ಸುಗಮ ಚಲನೆಗೆ ಪೂರಕವಾದ ಚಿಪ್ಪುಗಳನ್ನು ಹೊಂದಿವೆ. ಇವು ಈಜುವುದಕ್ಕೆ ಮತ್ತು ಮುಳುಗುವುದಕ್ಕೆ ಸಹಾಯ ಮಾಡುತ್ತವೆ. ಅಮೆರಿಕದ ಸ್ನ್ಯಾಪಿಂಗ್ ಟರ್ಟಲ್ಸ್ ಮತ್ತು ಮಸ್ಕ್ ಟರ್ಟಲ್ಸ್ ಚಿಕ್ಕದಾದ, ಶಿಲುಬೆಯಾಕಾರದ ಎದೆಗವಚವನ್ನು ಹೊಂದಿದ್ದು ಇದು ಕೆರೆಗಳು ಮತ್ತು ಹಳ್ಳಗಳ ತಳದಲ್ಲಿ ನಡೆಯುವಾಗ ಸಮರ್ಥವಾಗಿ ಕಾಲುಗಳ ಚಲನೆಗೆ ನೆರವಾಗುವುದು. ಆಮೆಯ ಚಿಪ್ಪಿನ ಬಣ್ಣ ಬೇರೆಬೇರೆಯಾಗಿರಬಹುದು. ಚಿಪ್ಪುಗಳು ಸಾಮಾನ್ಯವಾಗಿ ಕಂದು, ಕಪ್ಪು ಇಲ್ಲವೆ ಆಲಿವ್ ಹಸಿರುಬಣ್ಣದ್ದಾಗಿರುತ್ತವೆ. ಇನ್ನು ಕೆಲವು ತಳಿಗಳಲ್ಲಿ ಚಪ್ಪುಗಳು ಕೆಂಪು, ಕಿತ್ತಳೆ, ಹಳದಿ ಅಥವಾ ಬೂದು ಗೆರೆಗಳನ್ನು ಹೊಂದಿರಬಹುದು. ಈ ಗೆರೆಗಳು ಹೆಚ್ಚಾಗಿ ಚುಕ್ಕಿಗಳು, ಗೆರೆಗಳು ಅಥವಾ ಅನಿಯಮಿತ ಹೊಪ್ಪಳೆಗಳಂತೆ ಇರುತ್ತವೆ. ಅತ್ಯಂತ ವರ್ಣರಂಜಿತ ಆಮೆಗಳಲ್ಲಿ ಒಂದು ಪೂರ್ವ ದೇಶದ ಬಣ್ಣ ಬಳಿದ ಆಮೆ (ಪೇಂಟೆಡ್ ಟರ್ಟಲ್). ಇದು ಹಳದಿ ಎದೆಗವಚ ಮತ್ತು ಕಪ್ಪು ಅಥವಾ ಆಲಿವ್ ಬಣ್ಣದ ಚಿಪ್ಪು, ಜೊತೆಗೆ ಅಂಚಿನುದ್ದಕ್ಕೂ ಕೆಂಪು ಗೆರೆಗಳನ್ನು ಹೊಂದಿದೆ. ಭೂಮಿಯ ಮೇಲೆ ಇರುವ ಆಮೆಗಳು ಅತ್ಯಂತ ಭಾರವಾದ ಚಿಪ್ಪನ್ನು ಹೊಂದಿರುತ್ತವೆ. ಇದಕ್ಕೆ ವಿರುದ್ಧವಾಗಿ ಜಲವಾಸಿ ಆಮೆಗಳು ಹಗುರವಾದ ಚಿಪ್ಪುಗಳನ್ನು ಹೊಂದಿರುತ್ತವೆ. ಅವು ನೀರಿನಲ್ಲಿ ಮುಳುಗದಂತೆ ಮತ್ತು ಹೆಚ್ಚು ಚುರುಕಾಗಿ ವೇಗದಿಂದ ಈಜುವುದಕ್ಕೆ ನೆರವಾಗುತ್ತದೆ. ಈ ಹಗುರವಾದ ಚಿಪ್ಪುಗಳು ಚಿಪ್ಪಿನ ಎಲುಬುಗಳ ನಡುವೆ ಫಾಂಟನೆಲ್ಲೆಗಳು ಎಂದು ಕರೆಯುವ ವಿಶಾಲವಾದ ಸ್ಥಳವನ್ನು ಹೊಂದಿರುತ್ತವೆ. ಚರ್ಮದ ಬೆನ್ನಿನ ಆಮೆಗಳು ಅತ್ಯಂತ ಹಗುರವಾಗಿರುತ್ತವೆ, ಏಕೆಂದರೆ ಅವು ಸ್ಕ್ಯೂಟ್ ಗಳನ್ನು ಹೊಂದಿರುವುದಿಲ್ಲ ಮತ್ತು ಅನೇಕ ಫಾಂಟನೆಲ್ಲೆಗಳನ್ನು ಹೊಂದಿರುತ್ತವೆ.
ಚರ್ಮ ಮತ್ತು ಕವಚ ಕಳಚುವುದು

ಮೇಲೆ ಉಲ್ಲೇಖಿಸಿದಂತೆ ಚಿಪ್ಪಿನ ಹೊರ ಪದರ ಚರ್ಮದ ಅಂಗ; ಚಿಪ್ಪಿನ ಮೇಲಿನ ಪ್ರತಿ ಸ್ಕ್ಯೂಟ್ (ಅಥವಾ ಪ್ಲೇಟ್) ಒಂದೇ ಪರಿಷ್ಕೃತ ಪೊರೆಯೊಂದಿಗೆ ವ್ಯವಹರಿಸುತ್ತದೆ. ಚರ್ಮದ ಉಳಿದ ಭಾಗ ಇತರ ಸರೀಸೃಪಗಳ ಚರ್ಮದ ರೀತಿಯಲ್ಲಿಯೇ ಅತ್ಯಂತ ಸಣ್ಣ ಪೊರೆಗಳೊಂದಿಗೆ ಚರ್ಮದೊಂದಿಗೆ ಸೇರಿಕೊಂಡಿರುತ್ತದೆ. ಹಾವುಗಳು ಮಾಡುವಂತೆ ಆಮೆಗಳು ಒಂದೇ ಸಲಕ್ಕೆ ತಮ್ಮ ಚರ್ಮವನ್ನು ಕಳಚಿಕೊಳ್ಳುವುದಿಲ್ಲ, ಆದರೆ ಸತತವಾಗಿ ಚಿಕ್ಕಚಿಕ್ಕ ತುಣುಕುಗಳ ರೀತಿಯಲ್ಲಿ ಕಳಚಿಕೊಳ್ಳುವವು. ಜಲಚಲ ತೊಟ್ಟಿ(ಅಕ್ವೇರಿಯಂ)ಯಲ್ಲಿ ಇಟ್ಟಾಗ ಉದುರಿದ ಚರ್ಮದ ಚಿಕ್ಕಚಿಕ್ಕ ಚೂರುಗಳು ನೀರಿನಲ್ಲಿ ಬಿದ್ದಿರುವುದನ್ನು ಕಾಣಬಹುದು. (ಬಹುತೇಕ ಇದು ಪ್ಲಾಸ್ಟಿಕ್ ನ ಚಿಕ್ಕ ಚೂರುಗಳಂತೆ ಕಾಣುತ್ತವೆ.) ಆಮೆ ತನ್ನನ್ನು ತಾನು ಕಟ್ಟಿಗೆ ಅಥವಾ ಕಲ್ಲಿಗೆ ತೀಕ್ಷ್ಣವಾಗಿ ಉಜ್ಜಿಕೊಂಡಾಗ ಈ ಚಿಪ್ಪು ಚೂರಾಗಿ ಬೀಳುತ್ತವೆ. ಕೂರ್ಮಗಳೂ ತಮ್ಮ ಚರ್ಮವನ್ನು ಕಳಚಿಕೊಳ್ಳುತ್ತವೆ. ಆದರೆ ಸತ್ತ ಚರ್ಮವು ದಪ್ಪಗಿರುವ ಬುಗಟೆಯಲ್ಲಿ ಮತ್ತು ಪ್ಲೇಟ್್ಗಳಲ್ಲಿ ಶೇಖರಣೆಗೊಳ್ಳಲು ಇವು ಅವಕಾಶ ನೀಡುತ್ತವೆ. ಇವು ಚಿಪ್ಪಿನ ಹೊರಗಿನ ಶರೀರದ ಭಾಗಕ್ಕೆ ರಕ್ಷಣೆಯನ್ನು ಒದಗಿಸುತ್ತದೆ. ಚಿಕ್ಕದಾದ ಪದರಗಳು, ದೊಡ್ಡದರ ಮೇಲೆ ಹಳೆದಾದ ಸ್ಕ್ಯೂಟ್ ಗಳು, ಹೊಸದಾದವು ಉಂಟುಮಾಡಿದ ವರ್ತುಲಗಳನ್ನು ಎಣಿಸಿ ಒಂದು ವರ್ಷದಲ್ಲಿ ಎಷ್ಟು ಸ್ಕ್ಯೂಟ್ ಗಳು ತಯಾರಾಗುತ್ತವೆ ಎಂಬ ಮಾಹಿತಿ ಇದ್ದವರು ಆಮೆಯ ವಯಸ್ಸನ್ನು ಅಂದಾಜು ಮಾಡಬಹುದು.[6] ಈ ಪದ್ಧತಿ ಅತ್ಯಂತ ನಿರ್ದಿಷ್ಟವಾದುದಲ್ಲ, ಭಾಗಶಃ ಸರಿಯಾದುದು, ಏಕೆಂದರೆ ಬೆಳವಣಿಗೆ ದರ ಒಂದೇ ರೀತಿ ಇರುವುದಿಲ್ಲ, ಅಲ್ಲದೆ ಕೆಲವು ಸ್ಕ್ಯೂಟ್ ಗಳು ಅಂತಿಮವಾಗಿ ಚಿಪ್ಪಿನಿಂದ ದೂರವೇ ಬಿದ್ದುಹೋಗುತ್ತವೆ.
ಕಾಲುಗಳು
ನೆಲದ ಮೇಲೆ ವಾಸಿಸುವ ಆಮೆಗಳು ಚಿಕ್ಕದಾದ ಕಟ್ಟುಮಸ್ತಾದ ಕಾಲುಗಳನ್ನು ಹೊಂದಿರುತ್ತವೆ. ನಿಧಾನ ನಡಿಗೆಗೆ ಆಮೆಗಳು ಪ್ರಸಿದ್ಧವಾಗಿವೆ. ಇದಕ್ಕೆ ಕಾರಣ ಅವುಗಳ ಭಾರ, ತೊಡಕಾಗಿರುವ ಚಿಪ್ಪು ದಾಪುಗಾಲು ಹಾಕುವುದಕ್ಕೆ ನಿಯಂತ್ರಿಸುವುದು. ಉಭಯವಾಸಿ ಆಮೆಗಳು ಸಾಮಾನ್ಯವಾಗಿ ಭೂಚರ ಆಮೆಗಳ ರೀತಿಯಲ್ಲಿಯೇ ಕಾಲುಗಳನ್ನು ಹೊಂದಿರುತ್ತವೆ. ಆದರೆ ಇವು ಜಾಲಪಾದವನ್ನು ಹೊಂದಿರುತ್ತವೆ ಮತ್ತು ಉದ್ದವಾದ ಮೊನೆಯುಗುರುಗಳು ಇರುತ್ತವೆ ಈ ಆಮೆಗಳು ನಾಲ್ಕೂ ಕಾಲುಗಳನ್ನು ಬಳಸಿ ನಾಯಿಯಂತೆ ಈಜುತ್ತವೆ. ಶರೀರದ ಎಡ ಮತ್ತು ಬಲ ಪಾದಗಳು ಒಂದಾದ ಮೇಲೆ ಒಂದರಂತೆ ತಳ್ಳುತ್ತಿರುತ್ತವೆ. ಚಿಕ್ಕ ಆಮೆಗಳಿಗಿಂತ ದೊಡ್ಡ ಆಮೆಗಳು ಈಜುವುದು ಕಡಿಮೆ. ಮತ್ತು ಅತ್ಯಂತ ದೊಡ್ಡ ತಳಿಗಳಾದ ಅಲ್ಲಿಗೇಟರ್ ಸ್ನಯಾಪಿಂಗ್ ಟರ್ಟಲ್ ಸ್ವಲ್ಪವೇ ಈಜುತ್ತವೆ. ಅವು ನದಿ ಅಥವಾ ಸರೋವರದ ತಳದಲ್ಲಿ ನಡೆಯುತ್ತವೆ ಅಷ್ಟೇ. ಜಾಲ ಪಾದಗಳ ಹಾಗೆಯೇ ಆಮೆಗಳು ಅತ್ಯಂತ ಉದ್ದವಾದ ಮೊನಚು ಉಗುರುಗಳನ್ನು ಹೊಂದಿರುತ್ತವೆ. ಇವು ನದಿ ದಂಡೆಯ ಮೇಲೆ ಮತ್ತು ತೇಲುವ ದಿಮ್ಮಿಗಳ ಮೇಲೆ ತೆವಳಿ ಹತ್ತುವುದಕ್ಕೆ ನೆರವಾಗುತ್ತವೆ.ಹೀಗೆ ಮಾಡಿ ಅವು ಬಿಸಿಲಿಗೆ ಮೈಯೊಡ್ಡಿ ಸುಖ ಅನುಭವಿಸುತ್ತವೆ. ನಿರ್ದಿಷ್ಟವಾಗಿ ಗಂಡು ಆಮೆಗಳು ಉದ್ದವಾದ ಮೊನಚು ಉಗುರುಗಳನ್ನು ಹೊಂದಿರುತ್ತವೆ. ಸಂಭೋಗ ಸಮಯದಲ್ಲಿ ಹೆಣ್ಣಾಮೆಗಳನ್ನು ಉದ್ದೀಪನಗೊಳಿಸಲು ಇವನ್ನು ಬಳಸುವ ಹಾಗೆ ಕಾಣುತ್ತದೆ. ಬಹುತೇಕ ಆಮೆಗಳಿಗೆ ಜಾಲ ಪಾದಗಳಿದ್ದರೆ ಕೆಲವು ಹಂದಿ ಮೂಗಿನ ಆಮೆಗಳು ನಿಜವಾದ ಹುಟ್ಟಿನಂಥ ಈಜುಗೈ ಹೊಂದಿವೆ. ಇದನ್ನು ಹುಟ್ಟಿನಂತೆ ಬಳಸುತ್ತವೆ. ಉಳಿದವಕ್ಕೆ ಹೋಲಿಸಿದರೆ ಉಗುರುಗಳು ಚಿಕ್ಕದಾಗಿರುತ್ತವೆ. ಸಮುದ್ರ ಆಮೆಗಳ ರೀತಿಯಲ್ಲಿಯೇ ಈ ತಳಿಯವು ಈಜುತ್ತವೆ. (ಕೆಳಗೆ ನೋಡಿ) ಸಮುದ್ರ ಆಮೆಗಳು ಬಹುತೇಕ ಸಂಪೂರ್ಣವಾಗಿ ಜಲವಾಸಿಗಳು ಮತ್ತು ಪಾದಗಳಿಗೆ ಬದಲು ಈಜುಗೈಗಳನ್ನು ಹೊಂದಿರುತ್ತವೆ. ಸಮುದ್ರ ಆಮೆಗಳು ಮುಂದಿನ ಹುಟ್ಟುಕಾಲುಗಳ ಏರು-ತಗ್ಗು ಚಲನೆಯ ಮೂಲಕ ಹಿಂದೆ ನೂಕಿ ಮುಂದೆ ಚಲಿಸಲು ನೀರಿನಲ್ಲಿ ಹಾರುತ್ತವೆ. ಹಿಂದಿನ ಕಾಲುಗಳನ್ನು ಮುನ್ನೂಕುವಿಕೆಗೆ ಬಳಸುವುದಿಲ್ಲ. ಆದರೆ, ತಿರುಗುವದಕ್ಕೆ ಚುಕ್ಕಾಣಿ ಹಲಗೆಯಂತೆ ಇವನ್ನು ಬಳಸಬಹುದು. ಸಿಹಿನೀರಿನ ಆಮೆಗಳಿಗೆ ಹೋಲಿಸಿದರೆ ಸಮುದ್ರದ ಆಮೆಗಳ ಭೂಮಿಯ ಮೇಲಿನ ಚಲನೆ ಅತ್ಯಂತ ಸೀಮಿತವಾದದ್ದು, ಸಮದ್ರದಲ್ಲಿ ಕ್ಷೋಭೆ ತಲೆದೋರುವುದು, ವಸತಿ ನೆಲೆಯಲ್ಲಿ ತೊಂದರೆ ಮತ್ತು ಮೊಟ್ಟೆ ಇರಿಸುವ ಸಂದರ್ಭ ಹೊರತು ಪಡಿಸಿದರೆ ಗಂಡು ಕಡಲಾಮೆಗಳು ಯಾವತ್ತೂ ಸಮುದ್ರವನ್ನು ಬಿಡುವುದಿಲ್ಲ. ಹೆಣ್ಣಾಮೆಗಳು ಮೊಟ್ಟೆಗಳನ್ನು ಇರಿಸುವುದಕ್ಕೆ ಭೂಮಿಯ ಮೇಲ್ಭಾಗಕ್ಕೆ ಬರಲೇ ಬೇಕು. . ಅವು ಅತ್ಯಂತ ನಿಧಾನವಾಗಿ ಮತ್ತು ಕಷ್ಟಪಟ್ಟು, ಹುಟ್ಟುಕಾಲುಗಳಿಂದ ತಮ್ಮನ್ನು ಮುಂದಕ್ಕೆ ಎಳೆದುಕೊಳ್ಳುತ್ತ ಚಲಿಸುತ್ತವೆ.
ಪರಿಸರ ವಿಜ್ಞಾನ ಮತ್ತು ಜೀವ ಇತಿಹಾಸ
ವರ್ಗೀಕರಣ ವಿಧಾನ ಹಾಗೂ ವಿಕಸನ

ಮೊದಲ ಆದಿಮ-ಆಮೆಗಳು ಸುಮಾರು ೨೨೦ ದಶಲಕ್ಷ ವರ್ಷಗಳ ಹಿಂದೆ ಮೆಸೋಜೋಯಿಕ್ ಶಕೆಯಲ್ಲಿ ಟ್ರಿಯಾಸ್ಸಿಕ್ ಅವಧಿಯ ಆರಂಭದಲ್ಲಿ ಅಸ್ತಿತ್ವದಲ್ಲಿದ್ದವು ಎಂದು ನಂಬಲಾಗಿದೆ. ಮತ್ತು ಅವುಗಳ ಚಿಪ್ಪು ಗಮನಾರ್ಹ ರೀತಿಯಲ್ಲಿ ಸ್ಥಿರವಾದ ಶರೀರ ಯೋಜನೆಯನ್ನು ಉಳಿಸಿಕೊಂಡಿವೆ, ಅವುಗಳ ಬೆನ್ನೆಲುಬೇ ವಿಸ್ತರಿಸಿಕೊಂಡು ಆ ರೂಪ ತಳೆದಿರಬಹುದು, ಅವುಗಳ ವಿಶಾಲವಾದ ಪಕ್ಕೆಲಬುಗಳು ವಿಸ್ತರಿಸಿಕೊಂಡು ಇಡಿಯಾದ ಚಿಪ್ಪನ್ನು ರೂಪಿಸಿರಬಹುದು, ಇದು ಅದರ ವಿಕಸನದ ಪ್ರತಿ ಹಂತದಲ್ಲೂ ರಕ್ಷಣೆಯನ್ನು ನೀಡಿದೆ. ಚಿಪ್ಪಿನ ಎಲುಬಿನ ಭಾಗಗಳು ಪೂರ್ತಿಗೊಳ್ಳದೆ ಇದ್ದಾಗಲೂ ಈ ರಕ್ಷಣೆ ದೊರೆತಿದೆ. ಸಿಹಿನೀರಿನ ಒಡೋಂಟೋಚೆಲಿಸ್ ಸೆಮಿಟೆಸ್ಟಾಸೀಯ ಅಥವಾ ಹಲ್ಲಿರುವ ಅರೆ ಚಿಪ್ಪಿನ ಆಮೆಯ ಪಳೆಯುಳಿಕೆಗಳು ಇದನ್ನು ಸಮರ್ಥಿಸಿವೆ. ಟ್ರಿಯಾಸಿಕ್್ನ ಕೊನೆಯ ಹಂತದಲ್ಲಿ ಇವು ನೈಋತ್ಯ ಚೀನದ ಗ್ವಾಂಗ್ಲಿಂಗ್ ಬಳಿ ಕಂಡುಬಂದಿವೆ. ಒಡೋಂಟೋಚೆಲಿಸ್ ಒಂದು ಸಂಪೂರ್ಣ ಎದೆಗವಚ ಮತ್ತು ಅಪೂರ್ಣ ಬೆನ್ನು ಚಿಪ್ಪನ್ನು ಹೊಂದಿರುವುದನ್ನು ತೋರಿಸುತ್ತದೆ. ಆಮೆಯ ಆದಿ ಸ್ಥಿತಿಯ ಬೆಳವಣಿಗೆಯ ರೀತಿಯಲ್ಲೇ ಇದು ಇದೆ.[8] ಈ ಶೋಧಕ್ಕೆ ಮೊದಲು, ನಮಗೆ ಗೊತ್ತಿದ್ದ ಆಮೆಯ ಪಳೆಯುಳಿಕೆ ಟೆರ್ರೆಸ್ಟ್ರಿಯಲ್ ಮತ್ತು ಇದು ಪರಿಪೂರ್ಣ ಚಿಪ್ಪನ್ನು ಹೊಂದಿದೆ. ದೇಹರಚನೆಯ ಈ ಗಮನಾರ್ಹ ವಿಕಸನದ ಕುರಿತು ಯಾವುದೇ ಸುಳುಹುಗಳನ್ನು ನೀಡುವುದಿಲ್ಲ. ಜುರಾಸಿಕ್ ನಂತರದ ಅವಧಿಯಲ್ಲಿ ಆಮೆಗಳು ಎಲ್ಲಕಡೆ ಕಂಡುಬಂದವು ಮತ್ತು ಅವುಗಳ ಪಳೆಯುಳಿಕೆ ಇತಿಹಾಸವನ್ನು ಅರಿಯುವುದು ಹೆಚ್ಚು ಸುಲಭವಾಯಿತು. ಅವುಗಳ ಸರಿಯಾದ ಕುಲದ ವಿವರ ವಿವಾದಾತ್ಮಕವಾಗಿದೆ. ಇವು ಪುರಾತನ ವಿಕಾಸ ಹಂತದ ಅನಾಪ್ಸಿಡಾದ ಏಕೈಕ ಅಳಿದುಳಿದಿರುವ ಶಾಖೆ ಎಂದು ನಂಬಲಾಗಿದೆ. ಈ ಗುಂಪಿನಲ್ಲಿ ಪ್ರೊಕೊಲೊಫೋನಿಡ್ಸ್, ಮಿಲ್ಲೆರೆಟ್ಟಿಡ್ಸ್, ಪ್ರೊಟೊರೊಥಿರಿಡ್ಸ್ ಮತ್ತು ಪರೀಯಸೌರ್ಸ್ ಸೇರಿವೆ. ಎಲ್ಲ ಅನಾಪ್ಸಿಡಾದ ಅಸ್ಥಿಪಂಜರಗಳ ಕಪೋಲದ ಮೂಳೆಗಳು ತೆರೆದುಕೊಳ್ಳುವುದಿಲ್ಲ. ಆದರೆ ಇತರ ಎಲ್ಲ ಮೊಟ್ಟೆ ಇಡುವ ಪ್ರಾಣಿಗಳ ಕಪೋಲದ ಮೂಳೆಗಳು ತೆರೆದುಕೊಳ್ಳುತ್ತವೆ (ಸಸ್ತನಿಗಳಲ್ಲಿ ರಂಧ್ರವು ಕೆನ್ನೆ ಮೂಳೆ ಕಮಾನು ಆಗಿದ್ದರೂ) ಪರ್ಮಿಯನ್ ಅವಧಿಯ ಕೊನೆಯಲ್ಲಿ ಮಿಲ್ಲೆರೆಟ್ಟಿಡ್ಸ್, ಪ್ರೊಟೊರೊಥಿರಿಡ್ಸ್ ಮತ್ತು ಪರಾಯಸೌರ್ಸ್ ಹಾಗೂ ಟ್ರಿಯಾಸಿಕ್ ಕಾಲದಲ್ಲಿ ಪ್ರೊಕೊಲೋಫೊನೈಡ್ಸ್ ಕಣ್ಮರೆಯಾದವು.[9] ಅನಾಪ್ಸಿಡ್ ನಂಥ ಆಮೆಗಳ ಅಸ್ಥಿಪಂಜರ ವಂಶಾನುಕ್ರಮದಿಂದ ಬಂದಿರುವುದಕ್ಕಿಂತ ಹೆಚ್ಚಾಗಿ ಹಿಮ್ಮರಳುವಿಕೆಯಿಂದಾಗಿ ದೊರೆತಿರುವುದು ಎಂದು ಇತ್ತೀಚೆಗೆ ಸೂಚಿಸಲಾಗಿದೆ. ಇದೇ ಆಲೋಚನೆಯಲ್ಲಿ ತೀರ ಇತ್ತೀಚೆಗೆ ಆಕೃತಿ ವಿಜ್ಞಾನದ ಜಾತಿವಿಕಾಸದ ಅಧ್ಯಯನಗಳು ಆಮೆಗಳನ್ನು ದೃಢವಾಗಿ ಡಿಯಾಪಿಡ್ಸ್ ಗಳಲ್ಲಿ ಇರಿಸಿದೆ. ಇದು ಆರ್ಕೋಸೌರಿಯಾಕ್ಕಿಂತ ಸ್ಕ್ವಾಮಾತಾಕ್ಕೆ ಇನ್ನೂ ಸ್ವಲ್ಪ ಹತ್ತಿರ.[10] ಎಲ್ಲ ಜೀವಾಣು ವಿಜ್ಞಾನ ಅಧ್ಯಯನ ಆಮೆಗಳನ್ನು ಡಿಯಾಪಿಡ್ಸ್ ಗಳಲ್ಲಿ ಸೇರಿಸುವುದನ್ನು ಬಲವಾಗಿ ಸಮರ್ಥಿಸಿವೆ. ಆದರೂ ಕೆಲವರು ಆಮೆಗಳನ್ನು ಸ್ಕ್ವಾಮಾತಾಕ್ಕಿಂತ ಆರ್ಚೋಸೌರಿಯಾಕ್ಕೆ ಹತ್ತಿರ ಇರಿಸುತ್ತಾರೆ.[11] ವಂಶವಾಹಿ ತಜ್ಞರ ಹಿಂದಿನ ಅಭಿಪ್ರಾಯಗಳ ಮರು ವಿಶ್ಲೇಷಣೆಗಳು ಹೇಳುವುದೇನೆಂದರೆ, ಆಮೆಗಳನ್ನು ಅನಾಪ್ಸಿಡ್್ಗಳ ವರ್ಗದಲ್ಲಿ ಸೇರಿಸಿದ್ದು ಏಕೆಂದರೆ ಈ ವರ್ಗೀಕರಣವನ್ನೇ ಅವರು ಊಹಿಸಿಕೊಂಡದ್ದು.( ಅವರಲ್ಲಿ ಬಹಳ ಜನರು ಅನಾಪ್ಸಿಡ್ ಆಮೆಗಳು ಯಾವ ರೀತಿಯವು ಎಂದು ಅಧ್ಯಯನ ಮಾಡುತ್ತಿದ್ದರು) ಮತ್ತು ಪಳೆಯುಳಿಕೆಗಳ ಮಾದರಿಯನ್ನು ನೋಡಲಿಲ್ಲ ಮತ್ತು ಕ್ಲಾಡೋಗ್ರಾಮ್ ನಿರ್ಮಾಣಕ್ಕೆ ವಿಸ್ತೃತವಾದ ವರ್ಗವೇ ಸ್ಥೂಲವಾಗಿ ಸಾಕು ಎನಿಸಿದ್ದು. ಟೆಸ್ಟುಡಿನ್್ಗಳು ಇತರ ಡಿಯಾಪ್ಸಿಡ್್ಗಳಿಂದ ೨೦೦ರಿಂದ ೨೭೯ ದಶಲಕ್ಷ ವರ್ಷಗಳ ಹಿಂದೆ ಅವತರಿಸಿರಬೇಕು ಎಂದು ಸೂಚಿಸಲಾಗಿದ್ದರೂ ಈ ಚರ್ಚೆಯು ಇನ್ನೂ ಇತ್ಯರ್ಥವಾಗಿಲ್ಲ.[12][13][14] ನಮಗೆ ಗೊತ್ತಿರುವ ಅತಿ ಹಳೆಯ ಸಂಪೂರ್ಣ ಚಿಪ್ಪಿರುವ ಆಮೆ ಟ್ರಿಯಾಸಿಕ್ ಕೊನೆಯ ಹಂತದ ಪ್ರೊಗಾನೋಚೆಲಿಸ್ ಈ ಕುಲದ ಜಾತಿಯವು ಈಗಾಗಲೆ ಕೆಲವು ಮುಂದುವರಿದ ಆಮೆಯ ವಿಶೇಷ ಲಕ್ಷಣಗಳನ್ನು ಹೊಂದಿವೆ. ಮತ್ತು ಇವು ಬಹುಶಃ ಆಮೆಗಳ ಅನೇಕ ದಶಲಕ್ಷ ವರ್ಷಗಳ ವಿಕಸನ ಪ್ರಕ್ರಿಯೆಯಿಂದಾದ್ದು ಮತ್ತು ಅದರ ಕುಲದ ಪೀಳಿಗೆಯಿಂದ ಬಂದದ್ದು. ತನ್ನ ಚಿಪ್ಪಿನೊಳಗೆ ತಲೆಯನ್ನು ಎಳೆದುಕೊಳ್ಳುವ ಸಾಮರ್ಥ್ಯ ಇದಕ್ಕೆ ಇರಲಿಲ್ಲ. (ಮತ್ತು ಇದು ಉದ್ದವಾದ ಕುತ್ತಿಗೆಯನ್ನು ಹೊಂದಿತ್ತು.) ಮತ್ತು ಉದ್ದವಾದ ಮೊನಚಾದ ಬಾಲವನ್ನು ಗುಂಡನೆಯ ಗದೆ ರೂಪದಲ್ಲಿ ಹೊಂದಿತ್ತು. ಇದು ಇದೇ ರೀತಿಯ ಗೂಡನ್ನು ಹೊಂದಿರುವ ಅಂಕಿಲೋಸೌರ್್ಗಳ ಜೊತೆ ಪೀಳಿಗೆಯ ಸಂಬಂಧವನ್ನು ಸೂಚಿಸುತ್ತದೆ. (ಅವು ಸಮಾನಾಂತರವಾಗಿ ವಿಕಾಸ ಹೊಂದಿದ್ದರೂ) ಆಮೆಗಳನ್ನು ಮೂರು ಉಪ ವರ್ಗಗಳಲ್ಲಿ ವಿಭಾಗಿಸಿದ್ದಾರೆ. ಇವುಗಳಲ್ಲಿ ಒಂದು ಪಾರಾಕ್ರಿಪ್ಟೋಡಿರಾ ಅಳಿದು ಹೋಗಿದೆ. ಈಗಲೂ ಉಳಿದಿರುವ ಎರಡು ಉಪವರ್ಗಗಳು ಕ್ರಿಪ್ಟೋಡಿರಾ ಮತ್ತು ಪ್ಲ್ಯುರೋಡಿರಾ. ಕ್ರಿಪ್ಟೋಡಿರಾ ಈ ಎರಡು ಗುಂಪುಗಳಲ್ಲಿ ದೊಡ್ಡದು ಮತ್ತು ಎಲ್ಲ ಸಮುದ್ರ ಆಮೆಗಳನ್ನು, ಭೂವಾಸಿ ಆಮೆಗಳನ್ನು ಮತ್ತು ಅನೇಕ ಸಿಹಿನೀರಿನ ಆಮೆಗಳನ್ನು ಒಳಗೊಂಡಿವೆ. ಪ್ಲ್ಯುರೋಡಿರಾವನ್ನು ಕೆಲವೊಮ್ಮೆ ಅಡ್ಡಕುತ್ತಿಗೆಯ ಆಮೆ ಎಂದು ತಿಳಿಯಲಾಗಿತ್ತು. ಅವು ತಮ್ಮ ಚಿಪ್ಪಿನೊಳಗೆ ಕತ್ತನ್ನು ಎಳೆದುಕೊಳ್ಳುವ ರೀತಿಯನ್ನು ನೋಡಿ ಹೀಗೆ ತಿಳಿಯಲಾಗಿತ್ತು. ಈ ಚಿಕ್ಕ ಗುಂಪು ಮೂಲತಃ ವಿವಿಧ ಸಿಹಿ ನೀರಿನ ಆಮೆಗಳನ್ನು ಹೊಂದಿವೆ.

ಆಮೆ ಕುಲಗಳು ಮೂಲದ ಅಥವಾ ಅನಿಶ್ಚಿತ ಜಾತಿವಿಕಾಸ ಸ್ಥಿತಿ
- ಕುಲ †ಅಸ್ಟ್ರಾಲೋಚೆಲಿಸ್ (ಚೆಲೋನಿಯಾ ಇನ್ಸರ್ಟೆ ಸೆಡಿಸ್ )
- ಕುಲ †ಮುರ್ಹಡ್ತಿಯಾ (ಚೆಲೋನಿಯಾಇನ್ಸರ್ಟೆ ಸೆಡಿಸ್ )
- ಕುಲ †ಪಾಲಿಯೋಚೆರ್ಸಿಸ್ (ಚೆಲೋನಿಯಾ ಇನ್ಸರ್ಟೆ ಸೆಡಿಸ್ )
- ಕುಲ †ಚಿನ್ಲೆಚೆಲಿಸ್ (ಪ್ರೋಗಾನೋಚೆಲಿಡಿಯಾ ಅಥವಾ ಬಾಸಲ್ ಟೆಸ್ಟುಡಿನ್ಸ್)
- ಕುಲ †ಚೆಲಿಕಾರಾಪುಕಸ್ ( ಟೆಸ್ಟುಡಿನ್ಸ್ ಇನ್ಸರ್ಟೆ ಸೆಡಿಸ್ )
- ಕುಲ †ಚಿತ್ರಾಸೆಫಲಸ್ (ಟೆಸ್ಟುಡಿನ್ಸ್ ಇನ್ಸರ್ಟೆ ಸೆಡಿಸ್ )
- ಕುಲ †ನ್ಯುಸ್ಟಿಸೆಮಿಸ್ (ಟೆಸ್ಟುಡಿನ್ಸ್ ಇನ್ಸರ್ಟೆ ಸೆಡಿಸ್ )
- ಕುಲ †ಸ್ಕುಟೆಮಿಸ್ (ಟೆಸ್ಟುಡಿನ್ಸ್ ಇನ್ಸರ್ಟೆ ಸೆಡಿಸ್ )
ಉಪವರ್ಗ †ಪ್ರೋಗನೋಚೆಲಿಡಿಯ
- ಕುಲ †ಒಡಾಂಟೋಚೆಲಿಸ್ (ಪ್ರಾಯೋಗಿಕವಾಗಿ ಇಲ್ಲಿ ಇರಿಸಲಾಗಿದೆ)
- ಕುಲ †ಪ್ರೋಗನೋಚೆಲಿಸ್

ಉಪ ವರ್ಗ ಕ್ರಿಪ್ಟೋಡಿರಾ
ಮೂಲ ಕುಲಗಳು
- ಕುಲ †ಕಯೆನ್ಟಾಚೆಲಿಸ್
- ಕುಲ †ಇಂಡೋಚೆಲಿಸ್
ನಿಮ್ನ ವರ್ಗ †ಪ್ಯಾರಾಕ್ರಿಪ್ಟೋಡಿರಾ
- ಮೂಲ ಮತ್ತು ಇನ್ಸರ್ಟೆ ಸೆಡಿಸ್
- ವಂಶ †ಕಲ್ಲೋಕಿಬೋಟಿಡೆ
- ವಂಶ †ಮೊಂಗಲೋಚೆಲಿಂಡೆ
- ವಂಶ †ಪ್ಲ್ಯುರೋಸ್ಟೆಮಿಡೆ
- ವಂಶ †ಸೋಲೆಮಿಡಿಡೆ
- ಮೇಲಿನಕುಲ †ಬೆನೋಯಿಡೆ
- ವಂಶ †ಬೆನೋಯಿಡೆ
- ವಂಶ †ಮ್ಯಾಕ್ರೋಬೆಯೆನಿಡೆ
- ಕುಟುಂಬ †ನ್ಯೂರಾಂಕಿಲಿಡೆ
ನಿಮ್ನ ವರ್ಗ ಯುಕ್ರಿಪ್ಟೋಡಿರಾ
- ಮೂಲ ಮತ್ತು ಇನ್ಸರ್ಟೆ ಸೆಡಿಸ್
- †"ಸಿನೆಮಿಸ್" ವೆರಿಹೋಯೆನ್ಸಿಸ್
- ಕುಲ †ಚುಬುಟೆಮಿಸ್ (ಮಿಯೋಲಾನಿಡೆ?)
- ಕುಲ †ಹಂಗಿಯೇಮಿಸ್ (ಮೆಕ್ರೋಬೆನಿಡೆ?)
- ಕುಲ †ಜುಡಿತೆಮಿಸ್
- ಕುಲ †ಒಸ್ಟಿಯೋಪಿಗಿಸ್
- ಕುಲ †ಪ್ಲಾನೆಟೋಚೆಲಿಸ್
- ವಂಶ ಚೆಲಿಡ್ರಿಡೆ (ಕಚ್ಚುವ ಆಮೆಗಳು)
- ವಂಶ †ಯುರಿಸ್ಟೆಮಿಡೆ
- ವಂಶ †ಮೆಕ್ರೋಬೆನಿಡೆ
- ವಂಶ †ಮಿಯೋಲನಿಡೆ (ಕೊಂಬಿರುವ ಆಮೆಗಳು)
- ವಂಶ †ಪ್ಲೆಸಿಯೋಚೆಲಿಡೆ
- ವಂಶ †ಸಿನೆಮಿಡಿಡೆ
- ವಂಶ †ಕ್ಷಿಂಗ್್ಜಿಯಾಂಗ್್ಚೆಲಿಡೆ
- ಉನ್ನತ ವಂಶ ಚೆಲೋನಿಯೋಡೆ (ಸಮುದ್ರ ಆಮೆಗಳು)
- ವಂಶ †ಪ್ರೊಟೊಸ್ಟೆಗಿಡೆ
- ವಂಶ †ಥಲಾಸ್ಸೆಮಿಡೆ
- ವಂಶ †ಟೋಕ್ಷೋಚೆಲಿಡೆ ಪಶ್ಚಿಮದ ಹರ್ಮನ್ಸ್ ಟರ್ಟೈಸ್(ಟೆಸ್ಟುಡೋ ಹರ್ಮನ್ನಿ ಹರ್ಮನ್ನಿ) ಒಂದು ಕ್ರಿಪ್ಟೋಡೈರ್.ಕ್ರಿಪ್ಟೋಡೈರ್್ಗಳು ತಮ್ಮ ತಲೆಯನ್ನು ಒಳಗಡೆ ಅಡಗಿಸಿಕೊಳ್ಳುತ್ತವೆ.
- ವಂಶ ಚೆಲೋನಿಡೆ (ಹಸಿರು ಸಮುದ್ರ ಆಮೆಗಳು ಮತ್ತು ಸಂಬಂಧಿಗಳು)
- ವಂಶ ಡೆರ್ಮೋಚೆಲಿಡೆ (ಚರ್ಮ ಬೆನ್ನಿನ ಆಮೆಗಳು)
- ಉನ್ನತವಂಶ ಟೆಸ್ಟುಡಿನೊಯ್ಡೆ
- ವಂಶ †ಹೈಚೆಮಿಡಿಡೆ
- ವಂಶ †ಲಿಂಧೋಲ್ಮೆಮಿಡಿಡೆ
- ವಂಶ †ಸಿನೋಚೆಲಿಡೆ
- ವಂಶ ಪ್ಲಾಸ್ಟಿಟೆಮಿಡೆ (ದೊಡ್ಡ-ತಲೆಯ ಆಮೆ)
- ವಂಶ ಎಮಿಡಿಡೆ (ಹೊಂಡ, ಪೆಟ್ಟಿಗೆ ಮತ್ತುನೀರಿನ ಆಮೆಗಳು)
- ವಂಶ ಜಿಯೋಮಿಡಿಡೆ (ಏಶಿಯದ ನೀರಿನ ಆಮೆಗಳು, ಏಶಿಯದ ಎಲೆ ಆಮೆಗಳು, ಏಶಿಯದ ಪೆಟ್ಟಿಗೆ ಆಮೆಗಳು ಮತ್ತು ಚಾವಣಿ ಆಮೆಗಳು)
- ವಂಶ ಟೆಸ್ಟುಡಿನಿಡೆ (ನಿಜ ಆಮೆಗಳು)
- ಉನ್ನತ ವಂಶ ಟ್ರಿಯೋನಿಚೋಡಿಯೆ
- ವಂಶ †ಅಡೋಸಿಡೆ
- ವಂಶ ಕೆರೆಟ್ಟೋಚೆಲಿಡೆ (ಹಂದಿ ಮೂಗಿನ ಆಮೆಗಳು)
- ವಂಶ ಡರ್ಮೆಟೆಮಿಡಿಡೆ (ನದಿ ಆಮೆಗಳು)
- ವಂಶ ಕಿನೋಸ್ಟೆಮಿಡೆ (ಕೆಸರಿನ ಆಮೆಗಳು)
- ವಂಶ ಟ್ರಿಯೋನಿಚಿಡೆ (ಮೃದುಚಿಪ್ಪಿನ ಆಮೆಗಳು)
ಉಪವರ್ಗ ಪ್ಲ್ಯುರೋಡಿರಾ
- ಮೂಲ ಮತ್ತು ಇನ್ಸರ್ಟೆ ಸೆಡಿಸ್
- ವಂಶ †ಅರಿಪೆಮಿಡಿಡೆ
- ವಂಶ †ಪ್ರೊಟೆರೋಚೆರ್ಸಿಡೆ
- ವಂಶ ಚೆಲಿಡೆ (ಆಸ್ಟ್ರೋ-ಅಮೆರಿಕನ್ ಸೈಡ್ ನೆಕ್ ಟರ್ಟಲ್)
- ಉನ್ನತ ವಂಶ ಪೆಲೋಮೆಡುಸೋಡಿಯಾ
- ವಂಶ †ಬೋಥರ್ಮಿಡಿಡೆ
- ವಂಶ ಪೆಲೋಮೆಡುಸಿಡೆ (ಆಫ್ರಿಕನ್ ಸೈಡ್ ನೆಕ್ ಟರ್ಟಲ್)
- ವಂಶ ಪೋಡೋಕ್ನೆಮಿಡಿಡೆ (ಮಡಗಾಸ್ಕನ್ ಬಿಗ್-ಹೆಡೆಡ್ ಮತ್ತು ಅಮೆರಿಕನ್ ಸೈಡ್ ನೆಕ್ ರಿವರ್ ಟರ್ಟಲ್್ ಗಳು)
ಟರ್ಟಲ್, ಟರ್ಟೊಯ್ಸ್ ಅಥವಾ ಟೆರಾಪಿನ್
ಕ್ರಮವಾಗಿ ಟೆಸ್ಟೋಡೈನ್‌ಗಳ ಎಲ್ಲಾ ಸದಸ್ಯರನ್ನು ವರ್ಣಿಸಲು ದೊಡ್ಡ ಆಮೆ ಅನ್ನೋ ಶಬ್ದವನ್ನು ವ್ಯಾಪಕವಾಗಿ ಉಪಯೋಗಿಸಿದರೂ, ನಿರ್ದಿಷ್ಟ ಸದಸ್ಯರನ್ನು ಟೆರಾಪಿನ್‌ಗಳು, ಆಮೆಗಳು ಅಥವಾ ಸಮುದ್ರದ ದೊಡ್ಡ ಆಮೆಗಳು ಎಂಬುದಾಗಿ ವರ್ಣಿಸುವುದನ್ನು ಸಾಮಾನ್ಯವಾಗಿ ನೋಡುತ್ತೇವೆ. ಸರಿಯಾದ ರೀತಿಯಲ್ಲಿ ಹೇಗೆ ಈ ಪರ್ಯಾಯ ಹೆಸರುಗಳು ಉಪಯೋಗಿಸಲ್ಪಡುತ್ತವೆ, ಎಂಬುದು ಯಾವ ಆಂಗ್ಲ ಭಾಷೆ ಉಪಯೋಗಿಸಿದೆ ಅನ್ನುವುದರ ಮೇಲೆ ಆಧಾರವಾಗಿರುತ್ತದೆ.
- ಸಾಮಾನ್ಯವಾಗಿ ಬ್ರಿಟಿಷ್ ಇಂಗ್ಲಿಷ್‌ನಲ್ಲಿ ಈ ತರಹದ ಸರೀಸೃಪಗಳನ್ನು ಅವು ಸಾಗರದಲ್ಲಿ ವಾಸಿಸಿದರೆ ದೊಡ್ಡ ಆಮೆಗಳೆಂದು; ಸಿಹಿ ನೀರಿನಲ್ಲಿ ಅಥವಾ ಕೆಸರು ನೀರಿನಲ್ಲಿ ವಾಸಿಸಿದರೆ ಟೆರಾಪಿನ್ಸ್ ಗಳೆಂದು ; ಅಥವಾ ಅವು ನೆಲದಲ್ಲಿ ವಾಸಿಸಿದರೆ ಆಮೆಗಳೆಂದು ವರ್ಣಿಸುತ್ತದೆ. ಆದಾಗ್ಯೂ, ಅಮೆರಿಕನ್ ಅಥವಾ ಆಸ್ಟ್ರೇಲಿಯನ್ನರು ಸಾಮಾನ್ಯವಾಗಿ ಫ್ಲೈ ರಿವರ್ ಟರ್ಟಲ್ ಎಂದು ಕರೆಯುವುದು ಇದಕ್ಕೆ ಹೊರತಾಗಿದೆ.
- ಅಮೆರಿಕದ ಇಂಗ್ಲಿಷ್ ನಲ್ಲಿ ಎಲ್ಲ ಜಾತಿಗಳಿಗೂ ಸಾಮಾನ್ಯ ಪದವಾಗಿ ಆಮೆ (turtle) ಎಂದು ಬಳಸಲಾಗುತ್ತದೆ. ಬಹುತೇಕ ನೆಲದ ಮೇಲೆ ವಾಸಿಸುವ ಜಾತಿಗಳಿಗೆ "ಟರ್ಟೈಸ್" ಎಂದು ಕರೆಯುತ್ತಾರೆ. ಇದರಲ್ಲಿ ಟೆಸ್ಟುಡಿನಿಡೆ ಮತ್ತು ಬಾಕ್ಸ್ ಟರ್ಟೈಸ್್ಗಳು ಸೇರಿವೆ. ಸಾಗರದಲ್ಲಿರುವ ಜಾತಿಗೆ ಸಾಮಾನ್ಯವಾಗಿ ಸಮುದ್ರ ಆಮೆ (ಸೀ ಟರ್ಟಲ್ಸ್) ಎಂದು ಕರೆಯುತ್ತಾರೆ. ಟೆರಾಪಿನ್ ಅನ್ನುವ ಹೆಸರು ಕೊಳಚೆ ನೀರಿನ ಡೈಮಂಡ್‌ಬ್ಯಾಕ್ ಟೆರಾಪಿನ್, ಮಲಾಕ್ಲಿಮಿಸ್ ಟೆರಾಪಿನ್ ಗಳಿಗೆ ಮಾತ್ರ ಮೀಸಲಾಗಿದೆ; ಈ ಪ್ರಾಣಿಗೆ ಮಲಾಕ್ಲೆಮಿಸ್್ ಟೆರಾಪಿನ್ ಅನ್ನುವ ಪದವನ್ನು ಅಲ್ಗೊನ್ಕಿಯನ್ ಅನ್ನುವ ಪದದಿಂದ ಪಡೆಯಲಾಗಿದೆ.[15]
- ಆಸ್ಟ್ರೇಲಿಯಾದ ಇಂಗ್ಲಿಷ್ನಲ್ಲಿ ಕಡಲಿನ ಮತ್ತು ಸಿಹಿನೀರಿನ ಉಭಯ ತಳಿಗಳಿಗೆ ದೊಡ್ಡ ಆಮೆ(ಟರ್ಟಲ್) ಎಂದು ಆದರೆ ಭೂಮಿಯ ಮೇಲೆ ಇರುವ ಜಾತಿಗೆ ಆಮೆ (ಟರ್ಟೈಸ್) ಎಂದು ಹೇಳುತ್ತಾರೆ
ಈ ಪ್ರಾಣಿಗಳ ಜೊತೆಯಲ್ಲಿ ಕೆಲಸ ಮಾಡುವಂತಹ ಪಶು ವೈದ್ಯರು, ವಿಜ್ಞಾನಿಗಳು, ಪಾಲನೆದಾರರ ನಡುವೆ ಗೊಂದಲ ದೂರವಿರಿಸಲು, ಕೆಲೋನಿಯಾ ಸಂತತಿಯ ಯಾವುದೇ ಸದಸ್ಯರನ್ನು ಗುರುತಿಸಲು ಕೆಲೋನಿಯಾನ್ ಅನ್ನುವ ಪದ ಜನಪ್ರಿಯವಾಗಿದೆ, ಇದರಲ್ಲಿ ದೊಡ್ಡ ಆಮೆಗಳು, ಆಮೆಗಳು, ಟೆರಾಪಿನ್ ಗಳು ಇನ್ನೂ ಇರುವ ಜಾತಿಗಳು, ನಶಿಸಿಹೋಗಿರುವ ತಳಿಗಳು ಹಾಗೂ ಅವುಗಳ ಹಿಂದಿನ ಪೀಳಿಗೆಗಳು ಒಳಗೊಂಡಿರುತ್ತವೆ ಇದು ಪ್ರಾಚೀನ ελώνη, ಕೆಲೊನೆ ; ಆಧುನಿಕ ಗ್ರೀಕ್ ಪದ χελώνα, ಕೆಲೊನಾ ; ಆಧರಿಸಿದ್ದು ಇದರ ಅರ್ಥ ಟರ್ಟಲ್ /ಟರ್ಟೈಸ್.
ವಿತರಣೆ
ಜಗತ್ತಿನಾದ್ಯಂತ ಕಡಲಾಮೆಗಳ ಏಳು ಜಾತಿಗಳಿವೆ ಇವುಗಳಲ್ಲಿ ಐದನ್ನು ಯುರೋಪಿನಲ್ಲಿ ದಾಖಲಿಸಲಾಗಿದೆ.[16]
ಸಾಕು ಪ್ರಾಣಿಯಾಗಿ
ಆಮೆಗಳನ್ನು, ನಿರ್ದಿಷ್ಟವಾಗಿ ಭೂಮಿಯ ಮೇಲಿರುವ ಸಣ್ಣ ಆಮೆಗಳನ್ನು ಮತ್ತು ಸಿಹಿ ನೀರಿನ ಆಮೆಗಳನ್ನು ಸಾಮಾನ್ಯವಾಗಿ ಸಾಕುಪ್ರಾಣಿಯಾಗಿ ಇಡುವರು. ಇವುಗಳಲ್ಲಿ ಹೆಚ್ಚು ಜನಪ್ರಿಯವಾಗಿರುವವು ರಶಿಯನ್ ಟರ್ಟೈಸ್ ಗಳು, ಮೊನಚು ತೊಡೆಯ ಆಮೆ (spur-thighed)ಮತ್ತು ಕೆಂಪು ಕಿವಿಯ ಜಾರಿಹೋಗುವ ಆಮೆ (red-eared slider)[17] ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಸಾಮಾನ್ಯವಾಗಿ ಆಮೆಗಳ ಸಂಪರ್ಕದಿಂದ ಬರುವ ಆಹಾರ ವಿಷವಾಗುವ ರೋಗವನ್ನು ತಡೆಯಲು ಯು.ಎಸ್. ಆಹಾರ ಮತ್ತು ಔಷಧ ಆಡಳಿತವು (ಎಫ್್ಡಿಎ) ೪ ಅಂಗುಲಕ್ಕಿಂತ ಚಿಕ್ಕದಾದ ಆಮೆಗಳನ್ನು ಮಾರುವುದನ್ನು ನಿಲ್ಲಿಸುವ ಕಾನೂನನ್ನು ೧೯೭೫ರಲ್ಲಿ ತಂದಿತು. ಯು.ಎಸ್.ನ ಪ್ರತಿ ರಾಜ್ಯದಲ್ಲೂ ೪ ಅಂಗುಲ ಉದ್ದಕ್ಕಿಂತ ಚಿಕ್ಕದಾದ ಆಮೆಗಳನ್ನು ಮಾರುವುದು ಕಾನೂನುಬಾಹಿರ. ಎಫ್್ಡಿಎದಲ್ಲಿಯ ಲೋಪದೋಷದಿಂದಾಗಿ ಅನೆಕ ಅಂಗಡಿಗಳಲ್ಲಿ ಮತ್ತು ಹುಳಗಳನ್ನು ಮಾರುವ ಅಂಗಡಿಗಳಲ್ಲಿ ಚಿಕ್ಕ ಆಮೆಗಳನ್ನು ಮಾರುತ್ತಾರೆ. ಹೇಗೆಂದರೆ ಕಾನೂನು ಶೈಕ್ಷಣಿಕ ಉದ್ದೇಶಕ್ಕೆ ೪ ಅಂಗುಲಕ್ಕಿಂತ ಕಡಿಮೆ ಉದ್ದದ ಆಮೆಗಳನ್ನು ಮಾರುವುದಕ್ಕೆ ಅವಕಾಶ ನೀಡುತ್ತದೆ.[18][19] ರೆಡ್ ಇಯರ್ಡ್ ಸ್ಲೈಡರ್ ಗಳನ್ನು ಸಾಕುಪ್ರಾಣಿಯಾಗಿ ಬಳಸದಿರುವಂತೆ ಮಾಡಲು ಕೆಲವು ರಾಜ್ಯಗಳಲ್ಲಿ ಬೇರೆ ಕಾಯ್ದೆ ಮತ್ತು ನಿಯಮಗಳನ್ನು ತಂದಿದ್ದಾರೆ. ಏಕೆಂದರೆ ಅವು ಆಕ್ರಮಣಶೀಲ ಜಾತಿಯವು. ಇನ್ನೊಂದು ಕಾರಣ ಈ ಸಾಕುಪ್ರಾಣಿಯಾದವು ಸ್ಥಳೀಯವಾಗಿರುವುದಿಲ್ಲ, ಅವನ್ನು ಸಾಕುಪ್ರಾಣಿ ವ್ಯಾಪಾರದ ಮೂಲಕ ಪರಿಚಯಿಸಿದ್ದಾಗಿರುತ್ತದೆ. ೧ ಜುಲೈ ೨೦೦೭ರ ಪ್ರಕಾರ ಫ್ಲೋರಿಡಾದಲ್ಲಿ ವನ್ಯಜಾತಿಯ ರೆಡ್ ಇಯರ್ಡ್ ಸ್ಲೈಡರ್ಗಳನ್ನು ಮಾರುವುದು ಕಾನೂನುಬಾಹಿರ. ಮೊಟ್ಟೆ ಒಡೆದು ಹೊರಬರುವ ಅಸ್ವಾಭಾವಿಕವಾದ ಬಣ್ಣಗಳ ವೈವಿಧ್ಯವಿರುವ ಅಲ್ಬಿನೋ ಮತ್ತು ಪಾಸ್ಟಲ್ ರೆಡ್-ಇಯರ್ಡ್ ಸ್ಲೈಡರ್ಗಳನ್ನು ಮಾರುವುದಕ್ಕೆ ಇನ್ನೂ ಅವಕಾಶವಿದೆ.[20]
ಆಹಾರ, ಸಾಂಪ್ರದಾಯಿಕ ಔಷಧ ಮತ್ತು ಸುಗಂಧದ್ರವ್ಯವಾಗಿ
ಆಮೆಗಳ ಮಾಂಸವನ್ನು ಈ ಹಿಂದೆ ಮತ್ತು ಈಗಲೂ ಅನೇಕ ಸಂಸ್ಕೃತಿಯಲ್ಲಿ ಸ್ವಾದಿಷ್ಟ ಭಕ್ಷ್ಯ ಎಂದು ಪರಿಗಣಿಸಲಾಗಿದೆ.[3] ಆಂಗ್ಲೋ-ಅಮೆರಿಕನ್ ಅಡುಗೆಯಲ್ಲಿ ಟರ್ಟಲ್ ಸೂಪ್ ಬೆಲೆಯುಳ್ಳ ಭಕ್ಷ್ಯವಾಗಿದೆ.[21] ಮತ್ತು ದೂರಪ್ರಾಚ್ಯದ ಕೆಲವು ಭಾಗಗಳಲ್ಲಿ ಈಗಲೂ ಹೀಗೆಯೇ ಇದೆ. ಕುದಿಸಿದ ಗೋಫರ್ ಟರ್ಟೈಸ್ ಪ್ಲೋರಿಡಾದ ಕೆಲವು ಗುಂಪುಗಳಲ್ಲಿ ಜನಪ್ರಿಯವಾಗಿದೆ.[22] ಗ್ರಾಂಡ್ ಕೇಮನ್ ದ್ವೀಪದಲ್ಲಿ ಆಮೆಯು ಸಾಂಪ್ರದಾಯಿಕ ಆಹಾರದ ಭಾಗವಾಗಿದೆ. ಕಾಡಿನ ಸಂಗ್ರಹ ತೀರುತ್ತ ಬಂದ ಕಾರಣ ಒಂದು ಆಮೆಯ ಫಾರ್ಮ್ಅನ್ನು ವಿಶೇಷವಾಗಿ ಆಹಾರಕ್ಕಾಗಿಯೇ ಸಮುದ್ರ ಆಮೆಗಳನ್ನು ಹೆಚ್ಚಿಸಲು ಸ್ಥಾಪಿಸಲಾಗಿದೆ. ಕೆರಿಬಿಯನ್ ಸಮುದ್ರದಲ್ಲಿ ಆಮೆಯ ಸಂತತಿಯನ್ನು ಹೆಚ್ಚಿಸುವ ಪ್ರಯತ್ನದ ಅಂಗವಾಗಿ ಈ ಫಾರ್ಮ್ ಕಾಡಿಗೆ ಮಾದರಿಗಳನ್ನು ಬಿಡುಗಡೆ ಮಾಡಿದೆ.[23] ಕೆರಿಬಿಯನ್ ಮತ್ತು ಮೆಕ್ಸಿಕೋಗಳಲ್ಲಿ ಆಮೆಯ ಕೊಬ್ಬನ್ನು ಸುಗಂಧದ್ರವ್ಯಗಳ ತಯಾರಿಕೆಯಲ್ಲಿ ಪ್ರಮುಖ ಸಾಮಗ್ರಿಯಾಗಿ ಬಳಸುತ್ತಾರೆ. ಇವನ್ನು ಸ್ಪ್ಯಾನಿಶ್ ಹೆಸರು ಕ್ರೀಮ್ ಡೆ ಟೋರ್ಟುಗಾ ಹೆಸರಿನಲ್ಲಿ ಮಾರುಕಟ್ಟೆ ಮಾಡುತ್ತಾರೆ.[24]

ಆಮೆಯ ತಳಭಾಗದ ಚಿಪ್ಪನ್ನು (ಇದು ಆಮೆಯನ್ನು ತಳಭಾಗದಲ್ಲಿ ಆವರಿಸಿರುತ್ತದೆ) ಸಾಂಪ್ರದಾಯಿಕ ಚೀನಾ ಔಷಧಗಳಲ್ಲಿ ಬಳಸುತ್ತಾರೆ. ಅಂಕಿಅಂಶಗಳ ಪ್ರಕಾರ ತೈವಾನ್ ನೂರಾರು ಟನ್ ಆಮೆಯ ತಳಭಾಗದ ಚಿಪ್ಪನ್ನು ಪ್ರತಿವರ್ಷ ರಫ್ತು ಮಾಡುತ್ತದೆ.[25] ಒಂದು ಜನಪ್ರಿಯ ಔಷಧ ತಯಾರಿಕೆಯು ಆಮೆಯ ತಳಕವಚದ ಪುಡಿಯನ್ನು(ಮತ್ತು ವಿವಿಧ ಗಿಡಮೂಲಿಕೆಗಳನ್ನು) ಆಧರಿಸಿದೆ.ಇದು ಗ್ವಿಲಿಂಗ್ಗಾವೋ ಜೆಲ್ಲಿ, ಈಚಿನ ದಿನಗಳಲ್ಲಿ ಇದನ್ನು ಕೇವಲ ಗಿಡಮೂಲಿಕೆ ಸಾಮಗ್ರಿಗಳಿಂದ ಮಾತ್ರ ತಯಾರಿಸುತ್ತಾರೆ.[26][27]
ಸಂರಕ್ಷಣೆಯ ಸ್ಥಾನಮಾನ
ರಸಭರಿತ ಆಹಾರ ಮತ್ತು ಸಾಂಪ್ರದಾಯಿಕ ಔಷಧ ತಯಾರಕರ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಚೀನದ ಉದ್ದಿಮೆದಾರರು ಪ್ರಯತ್ನಗಳನ್ನು ಮಾಡಿದ್ದಾರೆ. ಸಹಜವಾಗಿ ಹುಟ್ಟಿಬೆಳೆದ ಆಮೆಗಳನ್ನು ಹಿಡಿಯುವದರ ಬದಲಿಗೆ ಫಾರ್ಮ್ ಗಳಲ್ಲಿ ಬೆಳೆಸಿದ್ದನ್ನು ಪೂರೈಸುತ್ತಿದ್ದಾರೆ. ೨೦೦೭ರಲ್ಲಿ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ, ಚೀನದಲ್ಲಿ ಒಂದು ಸಾವಿರಕ್ಕೂ ಅಧಿಕ ಆಮೆ ಫಾರ್ಮ್ ಕಾರ್ಯನಿರ್ವಹಿಸುತ್ತಿವೆ.[28][29] ಒಕ್ಲಹೋಮಾ ಮತ್ತು ಲೋಯಿಸಿಯಾನಾಗಳಲ್ಲಿಯ ಆಮೆ ಫಾರ್ಮ್ ಗಳು ಚೀನಕ್ಕೆ ರಫ್ತು ಮಾಡಲು ಆಮೆಗಳನ್ನು ಬೆಳೆಸುತ್ತಿವೆ.[29] ಆದಾಗ್ಯೂ ನೈಸರ್ಗಿಕ ಆಮೆಗಳನ್ನು ಹಿಡಿಯುವುದು ಮತ್ತು ಭಾರೀ ಪ್ರಮಾಣದಲ್ಲಿ ಮಾರುಕಟ್ಟೆಗೆ ಕಳುಹಿಸುವುದು ಮುಂದುವರಿದಿದೆ.(ಆಮೆಗಳ ಫಾರ್ಮನ್ನು ಮರಿಗಳನ್ನು ಮಾಡುವ ಅಡ್ಡೆ[28] ಯಾಗಿ ಬಳಸುವರು)ಇದರ ಪರಿಣಾಮ ಪರಿಸ್ಥಿತಿಯು ಸಂರಕ್ಷಣಕಾರರು ವರ್ಣಿಸುವಂತೆ "ಏಶಿಯದ ಆಮೆಗಳು ಸಂಕಷ್ಟದಲ್ಲಿವೆ".[30] ಜೀವಶಾಸ್ತ್ರಜ್ಞ ಜಾರ್ಜ್ ಅಮಾಟೋ ಅವರ ಮಾತುಗಳಲ್ಲಿಯೇ ಹೇಳಬೇಕೆಂದರೆ,"ಹಿಡಿದಿರುವ ಆಮೆಗಳ ಮೊತ್ತ ಮತ್ತು ಪ್ರಮಾಣ..... ಆಗ್ನೇಯ ಏಶಿಯಾ ಪ್ರದೇಶದಲ್ಲಿ ಇಡೀ ಜಾತಿಯನ್ನೇ ನಾಮಾವಶೇಷ ಮಾಡಿಬಿಟ್ಟಿದೆ". ಈಗಲೂ ಕೂಡ ಜೀವಶಾಸ್ತ್ರಜ್ಞರು ಈ ಭಾಗದಲ್ಲಿ ಎಷ್ಟು ವಿಶಿಷ್ಟ ಆಮೆ ಜಾತಿ ಈ ಪ್ರದೇಶದಲ್ಲಿವೆ ಎಂಬುದನ್ನು ತಿಳಿದಿಲ್ಲ.[31] ಏಶಿಯಾದ ೯೦ ಸಮುದ್ರ ಆಮೆಗಳು ಮತ್ತು ಸಿಹಿನೀರಿನ ಆಮೆಗಳ ಜಾತಿಯಲ್ಲಿ ಶೇ.೭೦ರಷ್ಟು ಅಪಾಯವನ್ನು ಎದುರಿಸುತ್ತಿವೆ.[29] ನೈಸರ್ಗಿಕ ಆಮೆಗಳ ಕೃಷಿ ಮಾಡುವುದು ಯುಎಸ್ಎದ ಅನೇಕ ರಾಜ್ಯಗಳಲ್ಲಿ ಕಾನೂನುಬದ್ಧ.[29] ಇವುಗಳಲ್ಲಿ ಒಂದು ರಾಜ್ಯ ಫ್ಲೋರಿಡಾದಲ್ಲಿ ಕೇವಲ ಒಂದು ಸೀ ಫುಡ್ ಕಂಪನಿ ಫೋರ್ಟ್ ಲವ್್ಡೇರ್್ಡಲೆ ೨೦೦೮ರಲ್ಲಿ ವಾರವೊಂದಕ್ಕೆ ಐದು ಸಾವಿರ ಡ ಮೃದು ಚಿಪ್ಪಿನ ಆಮೆಗಳನ್ನು ಖರೀದಿಸುತ್ತಿತ್ತು. ಈ ಕೃಷಿಕರಿಗೆ (ಬೇಟೆಗಾರರು)ಪ್ರತಿ ಪೌಂಡ್್ಗೆ $೨ಕೊಡುತ್ತಿದ್ದರು. ಕೆಲವರು ಒಳ್ಳೆಯ ದಿನಗಳಲ್ಲಿ ೩೦-೪೦ ಆಮೆಗಳನ್ನು (೫೦೦ಪೌಂಡ್) ಹಿಡಿಯುತ್ತಿದ್ದರು. ಹಿಡಿದವುಗಳಲ್ಲಿ ಕೆಲವನ್ನು ಸ್ಥಳೀಯ ರೆಸ್ಟೋರೆಂಟ್್ಗಳಿಗೆ ಮಾರಿದರೆ, ಹೆಚ್ಚಿನವು ದೂರಪ್ರಾಚ್ಯ ದೇಶಗಳಿಗೆ ರಫ್ತಾಗುತ್ತಿವೆ. ಫ್ಲೋರಿಡಾ ಮೀನು ಮತ್ತು ವನ್ಯಜೀವಿ ಸಂರಕ್ಷಣೆ ಆಯೋಗವು ೨೦೦೮ರಲ್ಲಿ ಮಾಡಿದ ಅಂದಾಜಿನ ಪ್ರಕಾರ ೩೦೦೦ ಪೌಂಡ್ ಮೃದು ಚಿಪ್ಪಿನ ಆಮೆಗಳು ಪ್ರತಿ ವಾರ ತಾಂಪಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ರಫ್ತಾಗುತ್ತವೆ. ಹೀಗಿದ್ದಾಗ್ಯೂ ಅಮೆರಿಕದಿಂದ ರಫ್ತಾಗುವ ಬಹುತೇಕ ಆಮೆಗಳು ಫಾರ್ಮ್್ಗಳಲ್ಲಿ ಕೃಷಿಮಾಡಿದವು ಆಗಿವೆ. ವರ್ಲ್ಡ್ ಕೆಲೋನಿಯನ್ ಟ್ರಸ್ಟ್ ಮಾಡಿರುವ ಒಂದು ಅಂದಾಜಿನ ಪ್ರಕಾರ ಮೂರು ವರ್ಷಗಳ ಅವಧಿಯಲ್ಲಿ (ನವೆಂಬರ್ ೪, ೨೦೦೨- ನವೆಂಬರ್ ೨೬, ೨೦೦೫ ಅಮೆರಿಕದಲ್ಲಿ ಮಾಡಿರುವ ೩೨.೮ ದಶಲಕ್ಷ ಪ್ರಾಣಿಗಳ ಕೃಷಿಯಲ್ಲಿ ಸುಮಾರು ಶೇ.೯೭ರಷ್ಟು ರಫ್ತಾಗಿವೆ.[29][32] (ಇದೇ ೨೦೦೨-೨೦೦೫ರ ಅವಧಿ ಎಂದುಕೊಳ್ಳಬಹುದು) ಅಮೆರಿಕದಿಂದ ರಫ್ತಾದ ಒಟ್ಟೂ ಆಮೆಗಳಲ್ಲಿ ಶೇ.೪೭ರಷ್ಟು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಕ್ಕೆ (ಹೆಚ್ಚಾಗಿ ಹಾಂಗ್್ಕಾಂಗ್್ಗೆ), ಇನ್ನು ಶೇ.೨೦ ಭಾಗ ತೈವಾನ್್ಗೆ ಮತ್ತು ಶೇ.೧೧ ಭಾಗ ಮೆಕ್ಸಿಕೋಗೆ ರಫ್ತಾಗಿದೆ ಎಂದು ಅಂದಾಜು ಮಾಡಲಾಗಿದೆ. [33] [34]
ಚಿತ್ರ ಸಂಪುಟ
- ಉತ್ತರ ನ್ಯೂಯಾರ್ಕ್ ರಾಜ್ಯದಲ್ಲಿ ಸೇಂಟ್ ಲಾರೆನ್ಸ್ ನದಿಯ ಬಳಿ ಅತಿ ಹತ್ತಿರದಿಂದ ತೆಗೆದ ರೇಗುವ ಆಮೆಯ (ಚೆಲಿಂಡ್ರಾ ಸೆರ್ಪೆಂಟಿನಾ) ತಲೆಯ ಭಾಗದ ಚಿತ್ರ
- ಫ್ಲೋರಿಡಾ ನಿವಾಸಿಯೊಬ್ಬನ ಹಿತ್ತಿಲಿನಲ್ಲಿಯ ಆಮೆ.
ಸಂಸ್ಕೃತಿ
ಇವನ್ನೂ ಗಮನಿಸಿ
- ಅದ್ವೈತ — ಒಂದು ದೈತ್ಯ ಆಮೆ, ೨೦೦೬ರಲ್ಲಿ ಅದು ಸತ್ತಾಗ ೨೫೦ ವರ್ಷವಾಗಿತ್ತು ಎನ್ನಲಾಗಿದೆ.
- ಅರಾರಿಪೆಮಿಸ್ ಆರ್ಟೌರಿ
- ಟರ್ಟಲ್ ರೇಸಿಂಗ್
ಮುಂದಿನ ಓದಿಗಾಗಿ
- Iskandar, DT (2000). Turtles and Crocodiles of Insular Southeast Asia and New Guinea. Bandung: Palmedia – ITB.
- Pritchard, Peter Charles Howard (1979). Encyclopedia of turtles. Neptune, NJ: T.F.H. Publications. ISBN 0-87666-918-6.
ಆಕರಗಳು
- "Testudines". Integrated Taxonomic Information System.
- "Archelon-Enchanted Learning Software". Enchantedlearning.com. Retrieved 2009-03-14.
- ಜೇಮ್ಸ್ ಇ. ಬಾರ್ಜಿಕ್ ಟರ್ಟಲ್ಸ್ ಇನ್ ಕ್ರೈಸಿಸ್: ದಿ ಏಶಿಯನ್ ಫುಡ್ ಮಾರ್ಕೆಟ್ಸ್. ಈ ಲೇಖನ ದಿನಾಂಕವನ್ನು ಹೊಂದಿಲ್ಲ, ಆದರೆ ೧೯೯೫-೨೦೦೦ರ ಅಂಕಿ ಅಂಶಗಳನ್ನು ಹೆಚ್ಚಾಗಿ ಉಲ್ಲೇಖಿಸಿದೆ.
- Michael J. Connor. "CTTC's Turtle Trivia". Tortoise.org. Retrieved 2009-03-14.
- "Marine Turtles". Oceansofkansas.com. Retrieved 2009-03-14.
- "Anatomy and Diseases of the Shells of Turtles and Tortoises". Peteducation.com. Retrieved 2009-03-14.
- ಆಲ್ ಬಟ್ ಏಜ್್ಲೆಸ್, ಟರ್ಟಲ್ಸ್ ಫೇಸ್ ದೇರ್ ಬಿಗ್ಗೆಸ್ಟ್ ಥ್ರೆಟ್: ಹ್ಯೂಮನ್ಸ್
- Li C, Wu XC, Rieppel O, Wang LT, Zhao LJ (2008). "An ancestral turtle from the Late Triassic of southwestern China". Nature. 456 (7221): 497–501. doi:10.1038/nature07533. PMID 19037315. Unknown parameter
|month=
ignored (help)CS1 maint: multiple names: authors list (link) - "Introduction to Procolophonoidea". Ucmp.berkeley.edu. Retrieved 2009-03-14.
- Rieppel O, DeBraga M (1996). "Turtles as diapsid reptiles". Nature. 384: 453–5. doi:10.1038/384453a0.
- Zardoya R, Meyer A (1998). "Complete mitochondrial genome suggests diapsid affinities of turtles". Proc. Natl. Acad. Sci. U.S.A. 95 (24): 14226–31. doi:10.1073/pnas.95.24.14226. PMC 24355. PMID 9826682. Unknown parameter
|month=
ignored (help) - Benton, M. J. (2000). Vertebrate Paleontology (2nd ed.). London: Blackwell Science Ltd. ISBN 0632056142., ೩ನೆ ಆವೃತ್ತಿ. ೨೦೦೪ ISBN ೦-೬೩೨-೦೫೬೩೭-೧
- Zardoya, R. (1998). "Complete mitochondrial genome suggests diapsid affinities of turtles". Proc Natl Acad Sci U S A. 95 (24): 14226–14231. doi:10.1073/pnas.95.24.14226. ISSN 0027-8424. PMC 24355. PMID 9826682. Unknown parameter
|coauthors=
ignored (|author=
suggested) (help) - Rieppel, O. (1996). "Turtles as diapsid reptiles". Nature. 384: 453–455. doi:10.1038/384453a0. Unknown parameter
|coauthors=
ignored (|author=
suggested) (help) - http://www.bartleby.com/೬೧/೧/T೦೧೨೦೧೦೦.html
- ಕಿಂಗ್, .ಎಲ್. ಆ್ಯಂಡ್ ಬೆರ್ರೋ, ಎಸ್,ಡಿ. ೨೦೦೯. ಮರೈನ್ ಟರ್ಟಲ್ಸ್ ಇನ್ ಐರಿಶ್ ವಾಟರ್ಸ್ Ir. Nat. J. ಸ್ಪೆಶಿಯಲ್ ಸಪ್ಲಿಮೆಂಟ್ ೨೦೦೯
- ಡೇವಿಡ್ ಅಲ್ಡರ್ಟನ್ (೧೯೮೬). ಆ್ಯನ್ ಇಂಟರ್ಪೀಟ್ ಗೈಡ್ ಟು ರೆಪ್ಟೈಲ್ಸ್ ಆ್ಯಂಡ್ ಆ್ಯಂಪಿಬಿಯನ್ಸ್ , ಸಲಮೆಂಡರ್ ಬುಕ್ಸ್ ಲಿ., ಲಂಡನ್ & ನ್ಯೂಯಾರ್ಕ್.
- ಟರ್ಟಲ್ಸ್ ಇಂಟ್ರಾಸ್ಟೇಟ್ ಆ್ಯಂಡ್ ಇಂಟರ್್ಸ್ಟೇಟ್ ರಿಕ್ವಾಯರ್್ಮೆಂಟ್ಸ್; ಎಫ್್ಡಿಎ ರೆಗ್ಯುಲೇಶನ್, ಸೆಕ್ಷನ್. 1240.62, ಪೇಜ್ 678 ಪಾರ್ಟ್ ಡಿ1.
- GCTTS FAQ: "4 ಇಂಚ್ ಲಾ", ಆ್ಯಕ್ಚುಅಲಿ ಆ್ಯನ್ ಎಫ್್ಡಿಎ ರೆಗ್ಯುಲೇಶನ್
- ಟರ್ಟಲ್ ಬ್ಯಾನ್ ಬಿಗಿನ್ಸ್ ಟುಡೇ; ನ್ಯೂ ಸ್ಟೇಟ್ ಲಾ, newszap.com , ೨೦೦೭-೦೭-೦೧. ೨೦೦೭-೦೮-೨೮ರಂದು ಪುನರ್ ಸ್ಥಾಪಿಸಲಾಗಿದೆ.
- ಟರ್ಟಲ್ ಸೂಪ್ ರೆಸಿಪಿ ಇನ್ ಹೌಸ್್ಹೋಲ್ಡ್ ಸೈಕೋಪಿಡಿಯಾ ಆಫ್ ಜನರಲ್ ಇನ್್ಫಾರ್ಮೇಶನ್ (೧೮೮೧)
- "ಗೋಫರ್ ಟಾರ್ಟೈಸಸ್ ಸ್ಟ್ಯೂ", ಇನ್: ರೆಸಿಪ್ಸ್ ಫ್ರಾಂ ಎನೆದರ್ ಟೈಂ: ಸೇವರ್ ದಿ ಫ್ಲೇವರ್ ಆಫ್ ಸೇಂಟ್. ಓಗಸ್ಟೀನ್ ಆ್ಯಂಡ್ ಟ್ರೈ ಎ ಕಪಲ್ ಆಫ್ ದೀಸ್ ಓರಿಜಿನಲ್ ರೆಸಿಪಿಸ್. ಸ್ಮಿಥ್ಸೋನಿಯನ್ ಮ್ಯಾಗಜಿನ್, ಅಕ್ಟೋಬರ್ ೨೦೦೧
- "Cayman Islands Turtle Farm". Retrieved 2009-10-28.
- NOAA ಮರೈನ್ ಫೋರೆನ್ಸಿಕ್ಸ್ ಬ್ರ್ಯಾಂಚ್
- Chen1, Tien-Hsi; Chang2, Hsien-Cheh; Lue, Kuang-Yang (2009). "Unregulated Trade in Turtle Shells for Chinese Traditional Medicine in East and Southeast Asia: The Case of Taiwan". Chelonian Conservation and Biology. 8 (1): 11–18. doi:10.2744/CCB-0747.1.
- Dharamanda, APPENDIX ೧: "ಗೋಲ್ಡನ್ ಕಾಯಿನ್ ಟರ್ಟಲ್" (ಎ ರಿಪೋರ್ಟ್ ಡೇಟೆಡ್ ಏಪ್ರಿಲ್ ೨೭, ೨೦೦೨ ECES News ನಿಂದ(ಅರ್ಥ್ ಕ್ರಾಶ್ ಅರ್ಥ್ ಸ್ಪಿರಿಟ್)). ಕೋಟ್: "ಟರ್ಟಲ್ ಜೆಲ್ಲಿಯ ಜನಪ್ರಿಯತೆಯನ್ನು ನ್ಗ್ ಯಿಯು-ಮಿಂಗ್ ಅವರ ಯಶಸ್ಸಿನಲ್ಲಿ ಕಾಣಬಹುದು. ಅವರ ವಿಶೇಷ ಅಂಗಡಿಗಳ ಸರಪಳಿ ೧೯೯೧ರಲ್ಲಿ ಒಂದು ಇದ್ದದ್ದು ಇಂದು ೬೮ ಆಗಿದೆ.ಹಾಂಗ್್ಕಾಂಗ್, ಮಕುವಾ ಮತ್ತು ಮೇನ್ ಲ್ಯಾಂಡ್ ಚೀನಗಳಲ್ಲಿ ಇವು ಇವೆ. ನ್ಗ್ ಆಮೆಗಳ ಜೆಲ್ಲಿಯನ್ನು ಕೈಯಲ್ಲಿ ಒಯ್ಯಬಹುದಾದ ಕಂಟೇನರ್್ಗಳಲ್ಲೂ ಪ್ಯಾಕ್ ಮಾಡಿ ಅನುಕೂಲಕರ ಅಂಗಡಿಗಳಲ್ಲಿ ಮಾರುವ ವ್ಯವಸ್ಥೆ ಮಾಡಿದ್ದಾರೆ. ಗೋಲ್ಡನ್ ಕಾಯಿನ್ ಆಮೆಗಳನ್ನು ಬಳಸದಂತೆ ಅವರು ಸೂಚಿಸಿದ್ದರು. 'ಅವು ಅತ್ಯಂತ ದುಬಾರಿಯವು' ಎಂದೂ ಅವರು ಹೇಳಿದರು. '... ಗಿಡಮೂಲಿಕೆಯ ವಸ್ತುಗಳನ್ನು ಹೇಗೆ ಆಯ್ಕೆಮಾಡಬೇಕು ಎಂಬುದು ನಿಮಗೆ ಗೊತ್ತಿದ್ದರೆ ಬೇರೆ ಜಾತಿಯ ಆಮೆಗಳಿಂದ ಮಾಡಿದ ಜೆಲ್ಲಿ ಕೂಡ ಅದೇ ರೀತಿ ಉತ್ತಮವಾಗಿರುತ್ತವೆ.'"
- Dharamanda, APPENDIX ೩: "ಟೋರ್ಟೈಸ್ ಜೆಲ್ಲಿ(ಟರ್ಟಲ್ ಜೆಲ್ಲಿ)"
- "ಆಮೆ ಫಾರ್ಮ್್ಗಳು ಅಪರೂಪದ ಜಾತಿಗಳಿಗೆ ಆತಂಕವೊಡ್ಡಿವೆ, ಪರಿಣತರು ಹೇಳುತ್ತಾರೆ". ಫಿಶ್ ಫಾರ್ಮರ್ , ೩೦ ಮಾರ್ಚ್ ೨೦೦೭. ಅವರ ಮೂಲ ಒಂದು ಲೇಖನ. ಇದನ್ನು ಬರೆದವರು ಜೇಮ್ಸ್ ಪರ್ಹಾಮ್, ಶಿ ಹೈಟಾವೋ ಮತ್ತು ಇತರ ಇಬ್ಬರು. ಫೆ.೨೦೦೭ರ ಕನ್ಸರ್ವೇಶನ್ ಬಯಾಲಜಿ ಜರ್ನಲ್್ನಲ್ಲಿ ಪ್ರಕಟಗೊಂಡಿದೆ.
- ಹಿಲರಿ ಹಿಲ್ಟನ್, "ಕೀಪಿಂಗ್ ಯು.ಎಸ್. ಟರ್ಟಲ್ ಔಟ್ ಆಫ್ ಚೀನಾ", ಟೈಂ ಮ್ಯಾಗಜಿನ್, ೨೦೦೭-೦೫-೦೮. ಅಲ್ಲದೆ ಇದರದೊಂದು ಪ್ರತಿ TSA ಸೈಟ್್ನಲ್ಲಿದೆ. ಪೀಟರ್ ಪೌಲ್ ವಾನ್ ಡಿ ಜ್ಕೆ ಬರೆದ ಲೇಖನಗಳನ್ನು ಮುಖ್ಯ ಆಕರ ಎಂದು ಉಲ್ಲೇಖಿಸಲಾಗಿದೆ.
- ಸ್ಜೆ ಮಾನ್ ಚೆಯುಂಗ್, ಡೇವಿಡ್ ಡುಡ್್ಜಿಯಾನ್, "ಕ್ವಾಂಟಿಫೈಯಿಂಗ್ ದಿ ಏಶಿಯನ್ ಟರ್ಟಲ್ ಕ್ರೈಸಿಸ್: ಮಾರ್ಕೆಟ್ ಸರ್ವೆ ಇನ್ ಸದರ್ನ್ ಚೈನಾ, 2000-2003". ಅಕ್ವೇಟಿಕ್ ಕನ್ಸರ್ವೇಶನ್:ಮರೈನ್ ಆ್ಯಂಡ್ ಫ್ರೆಶ್ ವಾಟರ್ ಇಕೋಸಿಸ್ಟಮ್ಸ್ , ಸಂಪುಟ ೧೬ ಸಂಚಿಕೆ ೭, ಪುಟಗಳು ೭೫೧-೭೭೦. ಪಬ್ಲಿಶ್ಡ್ ಆನ್ ಲೈನ್: ೨೫ Oct ೨೦೦೬
- ಎ ಕನ್ವರ್್ಶೇಷನ್ ಆ್ಯಟ್ ದಿ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿ: ದಿ ಚಾನ್ಸಸ್ ಆಫ್ ದಿ ವರ್ಲ್ಡ್ ಚೇಂಜಿಂಗ್ಸಿನಿಮಾದ ತಯಾರಕ ಎರಿಕ್ ಡೇನಿಯಲ್ ಮೆಟ್ಜ್್ಗರ್, ಅಮೆರಿಕನ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿಯಲ್ಲಿ ಡೈರೆಕ್ಟರ್ ಆಫ್ ಕನ್ಸರ್ವೇಶನ್ ಜಿನೆಟಿಕ್ಸ್ ಆಗಿರುವ ಜಾರ್ಜ್ ಆಮಾಟೋ ಜೊತೆ ಆಮೆಗಳ ಸಂರಕ್ಷಣೆ ಬಗ್ಗೆ ಮತ್ತು ಆಮೆಗಳ ವಿಕಾಸ ಮತ್ತು ಅವುಗಳ ವಿನಾಶದ ನಡುವಿನ ಸಂಬಂಧದ ಬಗ್ಗೆ ಮಾತನಾಡುತ್ತಾರೆ.
- ಅಮೆರಿಕ ಸಂಯುಕ್ತ ಸಂಸ್ಥಾನದಿಂದ ಆಮೆಗಳ ವ್ಯಾಪಾರದ ಘೋಷಣೆ- ಒಟ್ಟೂ
- ಅಮೆರಿಕ ಸಂಯುಕ್ತ ಸಂಸ್ಥಾನದಿಂದ ಆಮೆಗಳ ವ್ಯಾಪಾರದ ಘೋಷಣೆ- ಸ್ಥಳಗಳು (ಪ್ರಮುಖ ಸ್ಥಳಗಳು: ೧೩,೬೨೫,೬೭೩ ಹಾಂಗ್್ಕಾಂಗ್್ಗೆ ಪ್ರಾಣಿಗಳು, ೧,೩೬೫,೬೮೭ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನ (PRC)ದ ಉಳಿದ ಕಡೆ, ೬,೨೩೮,೩೦೦ ತೈವಾನ್, ೩,೪೭೮,೨೭೫ ಮೆಕ್ಸಿಕೋ, ಮತ್ತು ೧,೫೨೭,೭೭೧ ಜಪಾನ್್ಗೆ, ೯೪೫,೨೫೭ ಸಿಂಗಾಪುರಕ್ಕೆ , ಮತ್ತು ೫೯೬,೯೬೬ ಸ್ಪೇನ್್ಗೆ.
- ಅಮೆರಿಕ ಸಂಯುಕ್ತ ಸಂಸ್ಥಾನದಿಂದ ಘೋಷಣೆಯಾದ ಆಮೆಗಳ ವ್ಯಾಪಾರ- ನಿರೀಕ್ಷಣೆಗಳು
ಬಾಹ್ಯ ಕೊಂಡಿಗಳು
![]() |
Testudines: ಇದಕ್ಕೆ ಸಂಬಂಧಿಸಿದಂತೆ ವಿಕಿಸ್ಪೀಸೀಸ್ ಮಾಹಿತಿಯನ್ನು ಹೊಂದಿದೆ. |
![]() |
The Wikibook Dichotomous Key has a page on the topic of: Testudines |
- ಯುಸಿ ಬರ್ಕಲಿ ಮ್ಯುಸಿಯಂ ಆಫ್ ಪಾಲೆಯೆಂಟೋಲಜಿ
- ಕೆಲೋನಿಯನ್ ಸ್ಟಡ್್ಬುಕ್ ಕಲೆಕ್ಷನ್ ಆ್ಯಂಡ್ ಡಿಸ್ಪ್ಲೇ ಆಫ್ ದಿ ವೇಟ್ಸ್/ಸೈಜಸ್ ಆಫ್ ಕ್ಯಾಪ್ಟಿವ್ ಟರ್ಟಲ್ಸ್
- ಬಯೋಜಿಯೋಗ್ರಫಿ ಆ್ಯಂಡ್ ಫಿಲೋಜೆನಿ ಆಫ್ ದಿ ಕೆಲೋನಿಯಾ (ಟಾಕ್ಷೋನಮಿ,ಮ್ಯಾಪ್ಸ್)
- 'ಟರ್ಟಲ್' ಪದ ಬೇರೆಬೇರೆ ಭಾಷೆಗಳಲ್ಲಿ
- ಸೈಂಟಿಸ್ಟ್ ಆರ್ಟಿಕಲ್ (ಇನ್್ಕ್ಲುಡಿಂಗ್ ವೀಡಿಯೋ) ಆನ್ ಹೌ ದಿ ಟರ್ಟಲ್ ಇವಾಲ್ವಡ್ ಇಟ್ಸ್ ಶೆಲ್)