ಆಕ್ಟಿನಿಯಮ್

ಆಕ್ಟಿನಿಯಮ್ ಒಂದು ಬಹಳ ಅಪರೂಪದ ಮೂಲಧಾತು.ಇದನ್ನು ೧೮೯೯ ರಲ್ಲಿ ಫ್ರಾನ್ಸ್ಆಂಡ್ರೆ ಡೆಬಿಯರ್ನೆ ಎಂಬ ವಿಜ್ಞಾನಿ ಕಂಡು ಹಿಡಿದರು.ಇದು ಒಂದು ವಿಕಿರಣಶೀಲ ಲೋಹ.ಇದು ಬೆಳ್ಳಿ ಯಂತೆ ಬಿಳಿ ಬಣ್ಣದಾಗಿದ್ದು,ಹೊಳೆಯುವ ಲೋಹವಾಗಿದೆ.ಇದು ಹೆಚ್ಚಾಗಿ ಯುರೇನಿಯಮ್ ೨೩೫ನ ಕ್ಷಯಿಸುವಿಕೆ (decay)ಯಿಂದ ಉಂಟಾಗುತ್ತದೆ. ಆಕ್ಟೀನಿಯಂ ಆವರ್ತಕೋಷ್ಟಕದ ಏಳನೆಯ ಅಡ್ಡ ಮತ್ತು ಮೂರನೆಯ ಗುಂಪಿನ ವಿಕಿರಣಪಟು ಧಾತು. ಪ್ರತೀಕ ಂಛಿ. ಪರಮಾಣು ತೂಕ 227, ಸಾಪೇಕ್ಷ ಪರಮಾಣು ರಾಶಿ 89, ಇದು ಆಕ್ಟಿನೈಡ್‍ಗಳೆಂಬ ವಿಶೇಷ ಸಾಮ್ಯಗುಣವಿರುವ 15 ಮೂಲವಸ್ತುಗಳ ಪೈಕಿ ಮೊದಲನೆಯದು. ಆಕ್ಟಿನೈಡಿನ ಪರಮಾಣುವಿನ ಎಲೆಕ್ಟ್ರಾನಿಕ್ ವಿನ್ಯಾಸ (ಖಟಿ)6ಜ 7s2. ಅಂದರೆ ಜಡ ಅನಿಲ ರೇಡಾನ್ ಪರಮಾಣುವಿನ ಎಲೆಕ್ಟ್ರಾನಿಕ್ ವಿನ್ಯಾಸದಂಥ ಒಳಭಾಗವೂ 6ಜ ಮತ್ತು 7s ಶಕ್ತಿಮಟ್ಟಗಳಲ್ಲಿ 1 ಮತ್ತು 2 ಇರುವುವು[1]. ಈ ಮೂರೂ ಸಂಯೋಜಕ ಎಲೆಕ್ಟ್ರಾನುಗಳಾಗಿದ್ದು ಇವನ್ನು ಕಳೆದುಕೊಂಡ ಂಅ3+ ಅಯಾನು ರೇಡಾನ್ ಪರಮಾಣುವಿನ ದೃಢವಿನ್ಯಾಸ ಹೊಂದುವುದು. ಆದ್ದರಿಂದ ಆಕ್ಟೀನಿಯಮ್ ಒಂದು ಪ್ರಾರೂಪಿಕ ಮೂಲವಸ್ತು (ಟಿಪಿಕಲ್ ಎಲಿಮೆಂಟ್)[2].

89 ರೇಡಿಯಮ್ಆಕ್ಟಿನಿಯಮ್ಥೊರಿಯಮ್
ಲ್ಯಾಂಥಾನಮ್

Ac

ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ಆಕ್ಟಿನಿಯಮ್, Ac, 89
ರಾಸಾಯನಿಕ ಸರಣಿಆಕ್ಟಿನೈಡ್ಸ್
ಗುಂಪು, ಆವರ್ತ, ಖಂಡ 3, 7, f
ಸ್ವರೂಪಬೆಳ್ಳಿಯ ಬಣ್ಣ
ಅಣುವಿನ ತೂಕ227g·mol1
ಋಣವಿದ್ಯುತ್ಕಣ ಜೋಡಣೆ[Rn] 6d1 7s2
ಋಣವಿದ್ಯುತ್ ಪದರಗಳಲ್ಲಿ
ಋಣವಿದ್ಯುತ್ಕಣಗಳು
2, 8, 18, 32,18,9,2
ಭೌತಿಕ ಗುಣಗಳು
ಹಂತಘನ
ಸಾಂದ್ರತೆ (ಕೋ.ತಾ. ಹತ್ತಿರ)10 g·cm3
ಕರಗುವ ತಾಪಮಾನ1373 K
(1050 °C, 1922 °ಎಫ್)
ಕುದಿಯುವ ತಾಪಮಾನ3471 K
(3198 °C, 5788 °F)
ಸಮ್ಮಿಲನದ ಉಷ್ಣಾಂಶ14 kJ·mol1
ಭಾಷ್ಪೀಕರಣ ಉಷ್ಣಾಂಶ400 kJ·mol1
ಉಷ್ಣ ಸಾಮರ್ಥ್ಯ(25 °C) 27.2 J·mol1·K1
ಅಣುವಿನ ಗುಣಗಳು
ಸ್ಪಟಿಕ ಸ್ವರೂಪcubic face centered
ಆಕ್ಸಿಡೀಕರಣ ಸ್ಥಿತಿಗಳು3
(neutral oxide)
ವಿದ್ಯುದೃಣತ್ವ1.1 (Pauling scale)
ಅಣುವಿನ ತ್ರಿಜ್ಯ195 pm
ಇತರೆ ಗುಣಗಳು
ಕಾಂತೀಯ ವ್ಯವಸ್ಥೆಮಾಹಿತಿ ಇಲ್ಲ
ಉಷ್ಣ ವಾಹಕತೆ(300 K) 12 W·m1·K1
ಸಿಎಎಸ್ ನೋಂದಾವಣೆ ಸಂಖ್ಯೆ7440-34-8
ಉಲ್ಲೇಖನೆಗಳು

ಯುರೇನಿಯಂ ಖನಿಜವಾದ ಪಿಚ್‍ಬ್ಲೆಂಡ್‍ನಲ್ಲಿ ಆಕ್ಟೀನಿಯಮ್ಮನ್ನು 1899ರಲ್ಲಿ ಡಬೈರನ್‍ನೂ 1902ರಲ್ಲಿ ಸ್ವತಂತ್ರವಾಗಿ ಗೀಸಲ್‍ನೂ ಕಂಡುಹಿಡಿದರು[3]. ಒಂದು ಟನ್ ಅದುರಿನಲ್ಲಿ 0.1 ಮಿಲಿಗ್ರಾಮಿನಷ್ಟು ಆಕ್ಟೀನಿಯಂ ದೊರೆಯುವುದು. ವಿಕಿರಣರಶ್ಮಿ (ರೇಡಿಯೊ ಆಕ್ಟಿವಿಟಿ) ಗುಣಹೊಂದಿದ್ದುದರಿಂದ ಈ ಮೂಲ ವಸ್ತುವಿಗೆ ಆಕ್ಟೀನಿಯಮ್ ಎಂಬ ಹೆಸರಿಟ್ಟರು. ಪಿಚ್‍ಬ್ಲೆಂಡ್‍ನಿಂದ ವಿರಳ ಮೃದುಲೋಹ ಸಂಯುಕ್ತಗಳ ತಯಾರಿಕೆಯಲ್ಲಿ ಆಕ್ಟೀನಿಯಂ ಇವುಗಳ ಜೊತೆಯಲ್ಲಿ, ವಿಶೇಷವಾಗಿ ಲ್ಯಾಂತನಮ್ ಸಂಯುಕ್ತಗಳ ಜೊತೆಯಲ್ಲಿ ಕೇಂದ್ರೀಕರಿಸುತ್ತವೆ. ಲ್ಯಾಂತನಮ್ ಸಂಯುಕ್ತಗಳಿಂದ ಇದನ್ನು ಬೇರ್ಪಡಿಸುವುದು ದುಸ್ಸಾಧ್ಯ. 1950 ಕ್ಕೆ ಮೊದಲು 1% - 2% ಭಾಗದಷ್ಟು ಂಛಿ2ಔ3 ಇರುವ ಐಚಿ2ಔ3 ಅತ್ಯಂತ ಹೆಚ್ಚಿನ ಪ್ರಮಾಣ ಆಕ್ಟೀನಿಯಮ್ ಇರುವ ವಸ್ತುವಾಗಿತ್ತು. ಈಚಿನ ವರ್ಷಗಳಲ್ಲಿ ಅಯಾನ್ ವಿನಿಮಯ ವಿಧಾನಗಳಿಂದ ಇದನ್ನು ಶುದ್ಧ ರೂಪದಲ್ಲಿ ಬೇರ್ಪಡಿಸಿರುವರು.

ಇತ್ತೀಚೆಗೆ ಇದನ್ನು ಪರಮಾಣು ಪರಿವರ್ತಕಗಳಲ್ಲಿ (ಪರಮಾಣು ರಿಯಾಕ್ಟರುಗಳು) ಬೀಜ ಪರಿವರ್ತನೆಯ ಮೂಲಕ ಮಿಲಿಗ್ರಾಂ ಪ್ರಮಾಣದಲ್ಲಿ ಪಡೆದಿರುವರು. ಇದಕ್ಕೆ ಸಂಬಂಧಿಸಿದ ನೂಕ್ಲಿಯರ್ ಪರಿವರ್ತನೆ ಹೀಗಿದೆ.

226ಖಚಿ+ನ್ಯೂಟ್ರಾನ್(227ಖಚಿ(227ಂಛಿ+( ಕಣ.

ರೇಡಿಯಂ ಬ್ರೋಮೈಡಿನ ರೂಪದಲ್ಲಿರುವ ಸುಮಾರು 1 ಗ್ರಾಂ ರೇಡಿಯಂನಿಂದ 1.5 ಮಿ. ಗ್ರಾಂ. ನಷ್ಟು ಶುದ್ಧ ಆಕ್ಟೀನಿಯಮ್ ತಯಾರಿಸಬಹುದು. ರೇಡಿಯಮ್ ಮತ್ತು ಇದರ ಜೊತೆಯಲ್ಲಿರುವ ಇತರ ವಿಘಟನ ವಸ್ತುಗಳಿಂದ (ಡಿಸ್‍ಇಂಟೆಗ್ರೇಷನ್ ಪ್ರಾಡಕ್ಟ್ಸ್) ಆಕ್ಟೀನಿಯಮ್ ಅನ್ನು ಅಯಾನ್ ವಿನಿಮಯ ವಿಧಾನದಿಂದಲಾಗಲೀ ಅಥವಾ ಥಿನಾಯಲ್ ಟ್ರೈಫ್ಲೋರೋ ಅಸಿಟೋನ್ ಎಂಬ ದ್ರಾವಕದಿಂದ ಸಾರೀಕರಿಸಿಯಾಗಲೀ (ಎಕ್ಸ್‍ಟ್ರ್ಯಾಕ್ಟಿಂಗ್) ಬೇರ್ಪಡಿಸುವರು. ಈ ರೀತಿಯಾಗಿ ಪಡೆದ ದ್ರಾವಣದಿಂದ ಇದನ್ನು ಂಛಿಈ3 ಆಗಿ ಒತ್ತರಿಸಿ, ಶುಷ್ಕ ಫ್ಲೂರೈಡನ್ನು 11080-12750 ಸೆಂ.ಗ್ರೇ. ಉಷ್ಣತೆಯಲ್ಲಿ ಲಿಥಿಯಮ್ ಆವಿಯಿಂದ ಅಪಕರ್ಷಿಸಿ (ಅರೆಡ್ಯೂಸ್‍ಡ್) ಆಕ್ಟೀಯಂ ಲೋಹವನ್ನು ಪಡೆಯಬಹುದು. ಆಕ್ಟೀನಿಯಂ ಲೋಹ ಬೆಳ್ಳಿಯಂತೆ ಬಿಳುಪು. ಇದರ ಕರಗುವ ಬಿಂದು 10500 ಸೆಂ.ಗ್ರೇ. ವಿಕಿರಣಪಟುತ್ವದಿಂದಾಗಿ ಕತಲ್ತಲ್ಲಿ ಹೊಳೆಯುವುದು. ಲ್ಯಾಂತನಂನಂತೆ ಇದು ತುಂಬ ಪಟುವಾದ ಲೋಹ. ಅದಕ್ಕಿಂತಲೂ ಹೆಚ್ಚು ಧನವಿದ್ಯುದಂಶವಿದೆ. ತೇವವಿರುವ ಗಾಳಿಯಲ್ಲಿ ಇದು ಉತ್ಕರ್ಷಣ ಹೊಂದುವುದು.

ಆಕ್ಟೀನಿಯಂ ಮೂರು ಧನ ಸಂಯೋಜನ ಸಾಮಥ್ರ್ಯವನ್ನು ಮಾತ್ರ ಹೊಂದಿರುವುದು. ಆವರ್ತ ಕೋಷ್ಟಕದಲ್ಲಿ ಇದರ ಸ್ಥಾನದಿಂದ ನಿರೀಕ್ಷಿಸಬಹುದಾದಂತೆ ಇದರ ಸಂಯುಕ್ತಗಳು ಲ್ಯಾಂತನಂ ಸಂಯುಕ್ತಗಳನ್ನು ಹೋಲುವುವು. ಇದರ ಹೈಡ್ರಾಕ್ಸೈಡ್ ಮತ್ತು ಫ್ಲೊರೈಡುಗಳು ಕ್ಷಾರೀಯ ವಸ್ತುಗಳಲ್ಲ. ಇದು ಲ್ಯಾಂತನಂನಂತೆ ಅನೇಕ ಯುಗ್ಮಲವಣಗಳನ್ನು ಕೊಡುವುದು. ಆಕ್ಟೀನಿಯಮ್ ಹ್ಯಾಲೈಡುಗಳು, ಆಕ್ಸೈಡ್, ಸಲ್ಫೈಡ್, ಫಾಸ್ಪೇಟ್ ಮುಂತಾದವುಗಳನ್ನು ಘನ ರೂಪದಲ್ಲಿ ಪಡೆಯಬಹುದು. ಂಛಿಅಟ3 ಅಧಿಕ ಉಷ್ಣತೆಯಲ್ಲಿ ಜಲವಿಶ್ಲೇಷಣ ಹೊಂದಿ ಂಛಿಔಅಟ ಅನ್ನು ಕೊಡುವುದು. ಲ್ಯಾಂತನಂಗಿಂತ ಐಚಿಅಟ3 ಜಲವಿಶ್ಲೇಷಣ ಹೊಂದಿದಾಗ ಐಚಿ2ಔ3 ಉಂಟಾಗುವುದು. ಲ್ಯಾಂತನಮ್‍ಗಿಂತ ಆಕ್ಟೀನಿಯಂ ಹೆಚ್ಚು ಧನವಿದ್ಯುದಂಶವುಳ್ಳ ಲೋಹ ಎನ್ನುವುದಕ್ಕೆ ಇದೊಂದು ನಿದರ್ಶನ.

ಆಕ್ಟೀನಿಯಂ ಒಂದು ವಿಕಿರಣರಶ್ಮಿ ವಸ್ತು. ಇದು (-ಕಣವನ್ನು ಹೊರಸೂಸಿ ರೇಡಿಯೋ ಆಕ್ಟೀನಿಯಂ ಖಜಂಛಿ ಅನ್ನು ಕೊಡುವುದು. ಇದು ( ಕಣವನ್ನು ಹೊರಸೂಸಿ ರೇಡಿಯಂ ಸಮಸ್ಥಾನಿಯಾದ ಂಛಿಘಿ ಅನ್ನೂ ರೇಡಾನ್ ಎಂಬ ಜಡ ಅನಿಲದ ಸಮಸ್ಥಾನಿ ಆದ ಆಕ್ಟಿನಾನ್ ಅನ್ನೂ ಅನಂತರ ಇದೇ ರೀತಿಯಲ್ಲಿ ವಿಕಿರಣರಶ್ಮಿ ವಸ್ತುಗಳ ಶ್ರೇಣಿ ಮುಂದುವರಿದು ಂಛಿಂ, ಂಛಿಃ ಇತ್ಯಾದಿಗಳಾಗಿ ಕೊನೆಯಲ್ಲಿ ವಿಕಿರಣರಶ್ಮಿ ವಸ್ತು ಅಲ್ಲದ ಸೀಸದ ಸಮಸ್ಥಾನಿಯಾದ 207 ಪರಮಾಣು ತೂಕವುಳ್ಳ ಂಛಿಆ ಯನ್ನು ಕೊಡುವುದು. ಆಕ್ಟೀನಿಯಮ್ ಈ ಶ್ರೇಣಿಯ ಜನಕ ಮೂಲ ವಸ್ತುವಲ್ಲ; ಶ್ರೇಣಿಯ ಜನಕ ಮೂಲವಸ್ತು 235U . ಇದು ( ಕಣವನ್ನು ಸೂಸಿ 231Uಥಿ ಆಗಿಯೂ ಇದು ( ಕಣವನ್ನು ಸೂಸಿ 231Pಚಿ ಆಗಿ, ಅನಂತರ 231Pಚಿ ( ಕಣವನ್ನು ಹೊರಸೂಸಿ 227ಂಛಿ (ಆಕ್ಟೀನಿಯಂ) ಆಗಿ ಮೇಲೆ ಹೇಳಿದಂತೆ ವಿಕಿರಣಪಟುತ್ವ ವಸ್ತುಗಳ ಶ್ರೇಣಿ ಮುಂದುವರಿಯುವುದು.

ಉಲ್ಲೇಖನಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.