ಆಂಟ್ವರ್ಪ್

ಆಂಟ್‍ವರ್ಪ್ ಬೆಲ್ಜಿಯಮ್ಮಿನ ಎರಡನೆಯ ದೊಡ್ಡ ನಗರ[1]. ಜನಸಂಖ್ಯೆ 5,99,240 ಉತ್ತರ ಸಮುದ್ರದಿಂದ 55 ಮೈ. ದೂರದಲ್ಲಿ ದೊಡ್ಡ ಮೆಕ್ಕಲು ಮಣ್ಣಿನ ಸಮತಲ ಪ್ರದೇಶದಲ್ಲಿದೆ. ಶೆಲ್ಡ್ ನದಿಯ ಇಕ್ಕೆಲಗಳಲ್ಲೂ ವ್ಯಾಪಿಸಿದ್ದು ಬೆಲ್ಜಿಯಂನ ಮುಖ್ಯ ಬಂದರು ಹಾಗೂ ಮುಖ್ಯ ವಾಣಿಜ್ಯ ಕೇಂದ್ರವಾಗಿದೆ. ಪಟ್ಟಣದ ಎರಡು ಭಾಗಗಳಿಗೂ ಸುರಂಗ ಸಂಪರ್ಕವಿದೆ. ವ್ಯಾಪಕವಾದ ಇಲ್ಲಿನ ರೈಲು ಮತ್ತು ಜಲಮಾರ್ಗಗಳು ಫ್ರಾನ್ಸ್, ರೈನ್‍ಲ್ಯಾಂಡ್, ಮತ್ತು ಬೆಲ್ಜಿಯಂಗಳ ವ್ಯಾಪಾರಕ್ಕೆ ಅನುಕೂಲವಾಗಿವೆ. ರಾಸಾಯನಿಕ ವಸ್ತುಗಳು, ಕಾರುಗಳು, ಹಡಗು ಕಟ್ಟುವಿಕೆ, ಸಕ್ಕರೆ, ಎಣ್ಣೆ ಶುದ್ಧೀಕರಣ ಇವೇ ಮುಂತಾದವು ಇಲ್ಲಿನ ಮುಖ್ಯ ಕೈಗಾರಿಕೆಗಳು. ವಜ್ರ ಕೈಗಾರಿಕೆ ಮತ್ತು ವ್ಯಾಪಾರಕ್ಕೆ ಇದು ಪ್ರಪಂಚದ ಪ್ರಮುಖ ಕೇಂದ್ರವಾಗಿದೆ[2]. ಪ್ರಾಚೀನ ಕಲೆ ಮತ್ತು ವಸ್ತುಸಂಗ್ರಹಾಲಯಗಳು ಬಹುಕಾಲದಿಂದ ಪ್ರಸಿದ್ಧವಾಗಿವೆ.[3]

ಆಂಟ್ವರ್ಪ್ ನಗರ
ಬೆಲ್ಜಿಯಂ ನಗರವದ ಆಂಟ್ವರ್ಪ್ ಧ್ವಜ
View from the left riverside on Antwerp

ಉಲ್ಲೇಖನಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.