ಅಮರೇಶ ನುಗಡೋಣಿ

ಅಮರೇಶ ನುಗಡೋಣಿ ಇವರು ೧೯೬೦ರಲ್ಲಿ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನುಗಡೋಣಿಯಲ್ಲಿ ಜನಿಸಿದರು.

ವೃತ್ತಿ

ಅಮರೇಶ ನುಗಡೋಣಿಯವರು ಹಂಪೆಕನ್ನಡ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದಾರೆ.

ಕೃತಿಗಳು

ಕವನ ಸಂಕಲನ

  • ನೀನು, ಅವನು, ಪರಿಸರ

ಕಥಾಸಂಕಲನ

  • ಮಣ್ಣು ಸೇರಿತು ಬೀಜ
  • ಅರಿವು (ನವಸಾಕ್ಷರರಿಗಾಗಿ)
  • ತಮಂಧದ ಕೇಡು
  • ಮುಸ್ಸಂಜೆಯ ಕಥಾನಕಗಳು
  • ಸವಾರಿ

ವ್ಯಕ್ತಿ ಪರಿಚಯ

  • ಶ್ರೀಕೃಷ್ಣ ಆಲನಹಳ್ಳಿ (ಬದುಕು ಬರಹ)

ಸಂಪಾದನೆ

  • ಬಿಸಿಲ ಹನಿಗಳು ( ಹೈದರಾಬಾದ ಕರ್ನಾಟಕ ಪ್ರಾತಿನಿಧಿಕ ಕಥಾಸಂಕಲನ)

ಪುರಸ್ಕಾರ

  • ೧೯೮೯ರಲ್ಲಿ ಜಯತೀರ್ಥ ರಾಜಪುರೋಹಿತ ಸ್ಮಾರಕ ದತ್ತಿ ಕಥಾ ಪ್ರಶಸ್ತಿ ಲಭಿಸಿದೆ.
  • ೧೯೯೧ರಲ್ಲಿ “ಮಣ್ಣು ಸೇರಿತು ಬೀಜ” ಕಥಾ ಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ,ಚುಕ್ಕಿ ಉಮಾಪತಿ ಪ್ರತಿಷ್ಠಾನ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯದ ಪುಸ್ತಕ ಬಹುಮಾನ ಹಾಗು ೧೯೯೫ರಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ ದೊರೆತಿವೆ.
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.