ಅನಿಮೇಶನ್
ಚಲನೆಯ ಭ್ರಮೆ ಸೃಷ್ಟಿಗೆ ಆಕೃತಿಯೊಂದರ ಸ್ಥಾನಗಳ ಅಥವಾ 2-D(=2ನೇ ಆಯಾಮ) ಇಲ್ಲವೇ 3-D(=3ನೇ ಆಯಾಮ) ಚಿತ್ರಗಳ ದೃಶ್ಯ ಸರಣಿಯನ್ನು ಒಂದು ಅನುಕ್ರಮದ ಮಾದರಿಯಲ್ಲಿ ಕ್ಷಿಪ್ರವಾಗಿ ಪ್ರದರ್ಶನವಾಗುವಂತೆ ಮಾಡುವುದೇ ಅನಿಮೇಶನ್ ಅಥವಾ ಚಿತ್ರಸಂಚಲನೆ. ಇದು ದೃಷ್ಟಿಯ ನಿರಂತರತೆಯಿಂದ ಉಂಟಾಗುವ ಚಲನೆಯ ದೃಶ್ಯದ ಭ್ರಮೆ ಹಾಗೂ ಇದನ್ನು ಅಂಸಂಖ್ಯಾತ ವಿಧಾನಗಳಲ್ಲಿ ಸೃಷ್ಟಿಸಬಹುದು ಮತ್ತು ಪ್ರದರ್ಶಿಸಲೂಬಹುದು. ಅನಿಮೇಶನ್ ಪ್ರದರ್ಶಿಸಲು ಹಲವು ಇತರೆ ಪದ್ಧತಿಗಳು ಅಸ್ಥಿತ್ವದಲ್ಲಿವೆ, ಅನಿಮೇಶನ್ ಪ್ರದರ್ಶಿಸುವ ಅತ್ಯಂತ ಸಾಮಾನ್ಯ ವಿಧಾನವೆಂದರೆ, ಚಲಿಸುವ ಚಿತ್ರ ಅಥವಾ ವಿಡಿಯೋ ಪ್ರೋಗ್ರಾಮ್.
ಆರಂಭಿಕ ಉದಾಹರಣೆಗಳು

ಆದಿಕಾಲದಲ್ಲಿ ಚಲನೆಯನ್ನು ಹಿಡಿಯಲು ನಡೆಸಿರುವ ಪ್ರಯತ್ನಗಳನ್ನು ಪೇಲಿಯೋಲಿಥಿಕ್ ಗುಹಾಂತರ ಚಿತ್ರಗಳಲ್ಲಿ ಕಾಣಬಹುದು. ಇಲ್ಲಿ ಪ್ರಾಣಿಗಳನ್ನು ಹಲವು ಕಾಲುಗಳನ್ನು ಹೊಂದಿರುವಂತೆ ಹಾಗೂ ಅವುಗಳನ್ನು ತಿರುಗು-ಮುರುಗು ಸ್ಥಿತಿಯಲ್ಲಿ ಚಿತ್ರಿಸಲಾಗಿದೆ. ಇದು ಚಲನೆಯ ಅನುಭವವನ್ನು ಗ್ರಹಿಸಲು ನಡೆಸಿರುವ ಪ್ರಯತ್ನವೆಂದು ಸ್ಪಷ್ಟವಾಗಿ ಗೋಚರಿಸುತ್ತದೆ. ಇರಾನ್‌ನ ಶಾಹರ್-ಇ ಸೋಖ್ತಾ ಎಂಬಲ್ಲಿ 5,200 ವರ್ಷಗಳಷ್ಟು ಹಳೆಯದಾದ ಒಂದು ಮಣ್ಣಿನ ಪಾತ್ರೆ (=ಕುಡಿಕೆ) ದೊರೆತಿದ್ದು, ಇದರ ಸುತ್ತಲೂ ಮೇಕೆಯ ಐದು ಚಿತ್ರಗಳನ್ನು ಚಿತ್ರಿಸಲಾಗಿದೆ.
ಇದನ್ನು ಆರಂಭಿಕ ಕಾಲದ ಅನಿಮೇಶನ್ ಪ್ರಯತ್ನಕ್ಕೆ ಉದಾಹರಣೆಯೆಂದು ಪರಿಗಣಿಸಲಾಗಿದೆ.[1] ಆದರೂ ಚಿತ್ರಗಳ ಚಲನೆ ಮತ್ತು ನಿರಂತರತೆಯನ್ನು ತೋರಿಸಲು ಯಾವುದೇ ಉಪಕರಣಗಳು ಆಗಿನ ಕಾಲದಲ್ಲಿ ಇರಲಿಲ್ಲ, ಆದ್ದರಿಂದ ಅನಿಮೇಶನ್ ಪದ ನೀಡುವ ನಿಜ ಅರ್ಥದಲ್ಲಿ ಇದನ್ನು ಅನಿಮೇಶನ್ ಎಂದು ಕರೆಯಲು ಸಾಧ್ಯವಿಲ್ಲ.[2] ಫಿನಾಕಿಸ್ಟೋಸ್ಕೋಪ್, ಪ್ರಾಕ್ಸಿನೋಸ್ಕೋಪ್, ಇವುಗಳ ಜೊತೆಗೆ ಫ್ಲಿಪ್ ಬುಕ್‌ಗಳು ಆರಂಭಿಕ ಅನಿಮೇಶನ್‌ನ ಜನಪ್ರಿಯ ಸಾಧನಗಳಾಗಿದ್ದವು. ಇವುಗಳನ್ನು 1800ರ ಸುಮಾರಿಗೆ ಆವಿಷ್ಕರಿಸಲಾಗಿತ್ತು. ಚೀನಿಯರು ಝೋಟ್ರೋಪ್-ವಿಧಾನವನ್ನು 180ಕ್ರಿ.ಪೂ (ADಯ) ಅವಧಿಗಾಗಲೇ ರೂಪಿಸಿದ್ದರು.[3][4][5][6] ಅನುಕ್ರಮ ಚಿತ್ರ ಸರಣಿಯನ್ನು ತಾಂತ್ರಿಕ ರೀತಿಯಲ್ಲಿ ಬಳಸಿಕೊಂಡು ಈ ಪದ್ಧತಿಗಳು ಚಲನೆಯನ್ನು ಸೃಷ್ಟಿಸುತ್ತಿದ್ದವು. ಆದರೆ ಸಿನಿಮಾಟೋಗ್ರಫಿ ತಂತ್ರಜ್ಞಾನ ಉದಯವಾಗುವವರೆಗೂ ಅನಿಮೇಶನ್ ಹೆಚ್ಚೇನೂ ಅಭಿವೃದ್ಧಿ ಕಂಡಿರಲಿಲ್ಲ. ಹಲವಾರು ವಿಧದ ಯೋಜನೆಗಳ ಮೂಲಕ ವಿಭಿನ್ನ ಬಗೆಯ ಅನಿಮೇಶನ್ ತಂತ್ರಗಳನ್ನು ಒಂದೇ ಕಾಲದಲ್ಲಿ ಅಭಿವೃದ್ಧಿಪಡಿಸಿದ್ದಾರೆ. ಚಲನಚಿತ್ರ ಅನಿಮೇಶನ್ ಅಥವಾ ಚಲಿಸುವ ಚಿತ್ರಗಳನ್ನು ರಚಿಸುವ ಈ ಕಲೆಗೆ ಒಬ್ಬನೇ "ಸೃಷ್ಟಿಕರ್ತ"ನಿಲ್ಲ. ಸ್ಪೆಷಲ್-ಎಫೆಕ್ಟ್ (=ವಿಶಿಷ್ಟ ಪರಿಣಾಮದ)ಚಲಿಸುವ ಚಿತ್ರಗಳ ತಯಾರಕನಾಗಿದ್ದ ಜಾರ್ಜೆಸ್ ಮೆಲೀಸ್ ತನ್ನದೇ ತಂತ್ರಗಳ ಮೂಲಕ ಅನಿಮೇಶನ್ ವಿಧಾನವನ್ನು ಬಳಸಿದ ಮೊದಲ ವ್ಯಕ್ತಿಗಳಲ್ಲಿ ಒಬ್ಬನಾಗಿದ್ದ.
ಆತನದು ಆಕಸ್ಮಿಕ ಆವಿಷ್ಕಾರ.ದೃಶ್ಯಗಳಲ್ಲಿ ಬದಲಾವಣೆಗೆ ಕ್ಯಾಮರಾದಲ್ಲಿ ತಡೆ ಉಂಟಾಗುತ್ತಿತ್ತು.ನಂತರ ಫಿಲ್ಮ್ ಸುತ್ತುವಿಕೆಗೆ ಚಾಲನೆ ದೊರೆಯುತ್ತಿತ್ತು. ಇದೇ ತಂತ್ರ ಮುಂದೆ ಸ್ಪಾಪ್-ಮೋಷನ್ ಅನಿಮೇಶನ್(ಸ್ಥಿರ ಚಿತ್ರಚಲನೆಯ ಪದ್ದತಿ) ಎಂದು ಜನಪ್ರಿಯವಾಯಿತು. ಮೆಲೀಸ್ ಒಮ್ಮೆ ಬಸ್ ಚಾಲನಾ ಚಿತ್ರೀಕರಣದಲ್ಲಿ ತೊಡಗಿದ್ದಾಗ ಕ್ಯಾಮೆರಾ ಒಡೆದು ಹೋದ ಸಂದರ್ಭದಲ್ಲಿ ಅಕಸ್ಮಿಕವಾಗಿ ಈ ತಂತ್ರವನ್ನು ಕಂಡುಕೊಂಡಿದ್ದ. ಮೆಲೀಸ್ ತನ್ನ ಭಗ್ನಗೊಂಡ ಕ್ಯಾಮೆರಾವನ್ನು ಸರಿಪಡಿಸಿಕೊಂಡು ಮರು ಚಿತ್ರೀಕರಿಸಲು ಆರಂಭಿಸಿದಾಗ ಒಂದು ಶವವಾಹನ ಹಾದು ಹೋದಂತಾಯಿತು. ಇದರ ಅಂತಿಮ ಪರಿಣಾಮ ಇವನಿದ್ದ ಬಸ್ಸೇ ಶವವಾಹನವಾಗಿ ಪರಿವರ್ತನೆಯಾದಂತಾಗಿತ್ತು! ಇದೇ ಆತನಿಗೆ ಅನಿಮೇಶನನ್ ಆವಿಷ್ಕಾರಕ್ಕೆ ಸ್ಪೂರ್ತಿಯಾಯಿತು. ಆರಂಭಿಕ ವರ್ಷಗಳಲ್ಲಿ ಅನಿಮೇಶನ್ ಬೆಳವಣಿಗೆಗೆ ಮಹತ್ತರ ಕೊಡುಗೆ ಸಲ್ಲಿಸಲು ಕಾರಣವಾದ ಹಲವು ಘಟನೆಗಳಲ್ಲಿ ಇದೂ ಒಂದಾಗಿತ್ತು. ತೀರ ಆರಂಭ ಕಾಲದಲ್ಲಿ ಅರ್ಥರ್ ಮೆಲ್ಬೋರ್ನ್-ಕೂಪರ್ ನಿರ್ಮಿಸಿದ್ದ ಮ್ಯಾಚೆಸ್: ಯ್ಯಾನ್ ಅಪ್ಪೀಲ್ (1899) ಎಂಬ ಹೆಸರಿನ ಸ್ಥಿರ ಚಿತ್ರಣದ ಜಾಹಿರಾತು ಚಿತ್ರ ಇಂಗ್ಲಿಷ್‌ನಲ್ಲಿತ್ತು. ಇದನ್ನು ಬ್ರಿಯಾಂಟ್ ಅಂಡ್ ಮೇ ಎಂಬಹೆಸರಿನ ಬೆಂಕಿಪೊಟ್ಟಣ ತಯಾರಿಕಾ ಕಂಪನಿಗಾಗಿ ಕೂಪರ್ ನಿರ್ಮಿಸಿದ್ದರು. ಈ ಅನಿಮೇಶನ್, ಕಪ್ಪುಹಲಗೆಯ ಮೇಲೆ ಏಕರೂಪದ ಬೆಂಕಿಕಡ್ಡಿಗಳು ಒಟ್ಟಿಗೆ ದೇಶಪ್ರೇಮಕ್ಕಾಗಿ ಕರೆಯನ್ನು ಬರೆಯುತ್ತಿದ್ದ ಸ್ಟಾಪ್-ಮೋಷನ್(ಸ್ಥಿರ ಚಿತ್ರಣದ) ತಂತ್ರವನ್ನು ಒಳಗೊಂಡಿತ್ತು. J. ಸ್ಟುವರ್ಟ್ ಬ್ಯ್ಲಾಕ್‌ಟನ್ ಸ್ಟಾಪ್-ಮೋಷನ್ ಮತ್ತು ಹ್ಯಾಂಡ್-ಡ್ರಾನ್ (=ಕೈಯಿಂದ ಬಿಡಿಸಿದ ರೇಖಾ ಚಿತ್ರ) ತಂತ್ರಗಳನ್ನು ಅನಿಮೇಶನ್‌ನಲ್ಲಿ ಬಳಸಿಕೊಂಡ ಮೊದಲ ಅಮೆರಿಕನ್ ಚಲನಚಿತ್ರ ನಿರ್ಮಾಪಕನಾಗಿದ್ದ. ಆದರೆ ಚಲನಚಿತ್ರ ನಿರ್ಮಾಣದಲ್ಲಿ ಈ ತಂತ್ರ ಪರಿಚಯಿಸಿದ ಎಡಿಸನ್. 20ನೇ ಶತಮಾನದ ಉತ್ತರಾರ್ಧದಲ್ಲಿ ಈ ಪರಿಕಲ್ಪನೆಗಳನ್ನು 1900ರಲ್ಲಿ ತನ್ನ ಮೊದಲ ಹಕ್ಕುಸ್ವಾಮ್ಯದ ಚಿತ್ರದಲ್ಲಿ ಬಳಸಿ ಈ ಪರಿಕಲ್ಪನೆಗಳಿಗೆ ಹೊಸ ಆಯಾಮ ನೀಡಿದ. ಈತನ ಚಿತ್ರಗಳು ದಿ ಎನ್‌ಚಾಂಟೆಡ್ ಡ್ರಾಯಿಂಗ್ (1900) ಮತ್ತು ಹ್ಯೂಮರಸ್ ಪೇಸಸ್ ಆಫ್ ಫನ್ನಿ ಫೇಸಸ್ (1906) ಬ್ಯ್ಲಾಕ್‌ಟನ್‌ನ "ಲೈಟಿಂಗ್ ಆರ್ಟಿಸ್ಟ್" ದಿನಚರಿಯ ಚಲನಚಿತ್ರ ಆವೃತ್ತಿಗಳಾಗಿದ್ದವು. ಆರಂಭದಲ್ಲಿ ಮೆಲೀಸ್ ಕಪ್ಪುಹಲಗೆಮೇಲೆ ಬಿಡಿಸಿದ ಆಕೃತಿಗಳು ಚಲಿಸಿದಂತೆ ಮಾಡಲು ಮತ್ತು ತಮಗೆ ತಾವೇ ಆಕಾರ ಬದಲಿಸಿಕೊಳ್ಳಲು ಬಳಸಿದ ಸ್ಟಾಪ್-ಮೋಷನ್ ತಂತ್ರಗಳ ಪರಿವರ್ತಿತ ರೂಪಗಳಾಗಿದ್ದವು. 'ಹ್ಯೂಮರಸ್ ಪೇಸಸ್ ಆಫ್ ಫನ್ನಿ ಫೇಸಸ್' ಚಿತ್ರ ಅನಿಮೇಶನ್ ತಂತ್ರವನ್ನು ಬಳಸಿಕೊಂಡ ನೈಜ ಅನಿಮೇಟೆಡ್ ಚಿತ್ರವೆಂದು ಕರೆಸಿಕೊಂಡರೆ, ಬ್ಯ್ಲಾಕ್‌ಟನ್ ಮೊದಲ ನಿಜವಾದ ಅನಿಮೇಟರ್ ಎನಿಸಿಕೊಂಡರು.
ಮತ್ತೊಬ್ಬ ಫ್ರೆಂಚ್ ಕಲಾವಿದ ಇಮೈಲ್ ಕೋಹ್ಲ್ ವ್ಯಂಗ್ಯ ರೇಖಾ ಚಿತ್ರಗಳ ಪಟ್ಟೆಯನ್ನು ಬರೆಯುದರೊಂದಿಗೆ 1908ರಲ್ಲಿ ಫ್ಯಾಂಟಸ್ಮಾಗೋರಿ ಹೆಸರಿನ ಚಿತ್ರವನ್ನು ಸಿದ್ದಪಡಿಸಿದ.[7] ಕಡ್ಡಿ ಆಕೃತಿ ಚಿತ್ರಗಳು ಮಾದಕ ವಸ್ತುಗಳನ್ನು ಎಂದರೆ ಮದ್ಯದ ಬಾಟಲಿಗಳನ್ನು ಹಿಡಿದುಕೊಂಡಂತೆಯೇ ಅವುಗಳನ್ನು ಹೂವಾಗಿ ಪರಿವರ್ತಿಸಿ ಚಲಿಸುವ ವಿಧಾನವನ್ನು ಈ ಚಿತ್ರ ದೊಡ್ಡ ಪ್ರಮಾಣದಲ್ಲಿ ಬಳಸಿಕೊಂಡಿತ್ತು. ಅನಿಮೇಟರ್‌ನ ಕೈಗಳು ದೃಶ್ಯದಲ್ಲಿ ಪ್ರವೇಶಿಸುತ್ತಿದ್ದ ನೈಜ ದೃಶ್ಯಗಳ ಸನ್ನಿವೇಶಗಳೂ ಈ ಚಿತ್ರದಲ್ಲಿದ್ದವು. ಮೊದಲು ಕಾಗದದ ಮೇಲೆ ಪ್ರತಿಯೊಂದು ಛಾಯಾ ಆಕೃತಿ ಬಿಡಿಸಿ ನಂತರ ಒಂದೊಂದೂ ಚೌಕಟ್ಟನ್ನು ನೆಗೆಟಿವ್ ಫಿಲ್ಮ್‌ನಲ್ಲಿ ಚಿತ್ರೀಕರಿಸಿ ಈ ಚಿತ್ರಸರಣಿ ರೂಪಿಸಲಾಗಿತ್ತು. ಇದರಿಂದಾಗಿ ಚಿತ್ರ ಕಪ್ಪು ಹಲಗೆಯ ರೂಪಕ್ಕೆ ತಿರುಗಿತ್ತು . ಇದರಿಂದ ಫ್ಯಾಂಟಸ್ಮಾಗೋರಿ ಚಿತ್ರ, ಸಾಂಪ್ರದಾಯಿಕ ಶೈಲಿಯ ಕೈಯಿಂದ ಬಿಡಿಸಿದ(ಟ್ರೆಡಿಷನಲ್ ಅನಿಮೇಷನ್ (ಹ್ಯಾಂಡ್-ಡ್ರಾನ್)) ಎಂದು ಹೆಸರಾಗಿರುವ ತಂತ್ರವನ್ನು ಬಳಸಿದ ಮೊದಲ ಅನಿಮೇಟೆಡ್ ಚಿತ್ರ ಎಂದು ಕರೆಸಿಕೊಂಡಿತು. ಬ್ಯ್ಲಾಕ್‌ಟನ್ ಮತ್ತು ಕೋಹ್ಲ್ ಅವರ ಯಶಸ್ಸಿನ ನಂತರ, ಇತರೆ ವಿಭ್ಹಾಗದ ಹಲವು ಕಲಾವಿದರು ಅನಿಮೇಶನ್‌ನಲ್ಲಿ ಪ್ರಯೋಗ ಮಾಡಲಾರಂಭಿಸಿದರು. ಯಶಸ್ವಿ ಪತ್ರಿಕಾ ವ್ಯಂಗ ಚಿತ್ರಕಾರ ವಿನ್ಸರ್ ಮ್ಯಾಕ್‌ಕೆ ಇವರಲ್ಲಿ ಒಬ್ಬರು. ಚಿತ್ರದ ಒಂದೊಂದೂ ವಿವರವನ್ನು ಬಹಳ ಜಾಗರೂಕತೆಯಿಂದ ಸೇರ್ಪಡೆ ಮಾಡಿದ್ದಾರೆ ಕಲಾವಿದರ ಒಂದು ತಂಡವೇ ಇದರಲ್ಲಿ ದುಡಿದಿದೆ. ಹೀಗಾಗಿ ವಿಸ್ತೃತವಾದ ಅನಿಮೇಷನ್ ಅನ್ನು ಇವರು ರೂಪಿಸಿದರು. ಇದರ ಪ್ರತಿ ಚೌಕಟ್ಟನ್ನು ಕಾಗದಲ್ಲಿ ಒಡಮೂಡಿಸಲಾಗಿತ್ತು. ಇವೇ ಪಾತ್ರಗಳನ್ನು ಯಾವುದೇ ಬದಲಾವಣೆಯಿಲ್ಲದೆ ಮತ್ತೆ ಬರೆದು ಅದಕ್ಕೆ ಅನಿಮೇಶನ್ ರೂಪ ನೀಡಲಾಗಿತ್ತು. ಮ್ಯಾಕ್‌ಕೆನ ಹೆಚ್ಚು ಜನಪ್ರಿಯವಾದ ಚಿತ್ರಗಳಲ್ಲಿ ಲಿಟಲ್ ನೆಮೋ (1911), ಗರ್ಟೀ ದಿ ಡೈನೋಸಾರ್ (1914) ಮತ್ತು ದಿ ಸಿಂಕಿಂಗ್ ಆಫ್ ದಿ ಲೂಸಿತಾನಿಯಾ (1918) ಪ್ರಮುಖವಾದವು. ಸಾಮಾನ್ಯವಾಗಿ "ಕಾರ್ಟೂನ್ಸ್" ಎಂದು ಕರೆಯುವ ಅನಿಮೇಟೆಡ್ ಕಿರು ಚಿತ್ರಗಳ ನಿರ್ಮಾಣ 1910ರ ಅವಧಿಯಲ್ಲಿ ಸ್ವಾಯತ್ತ ಉದ್ಯಮವಾಗಿ ಬೆಳೆಯಿತು, ಇಂತಹ ತಮಾಷೆಯ ವಸ್ತುವನ್ನೊಳಗೊಂಡ ಕಿರುಚಿತ್ರಗಳು ಚಲನಚಿತ್ರ ಮಂದಿರಗಳಲ್ಲೂ ಪ್ರದರ್ಶನಗೊಳ್ಳಲು ಆರಂಭಿಸದವು. ಆರಂಭಿಕ ವರ್ಷಗಳಲ್ಲಿ ಯಶಶ್ವಿ ಅನಿಮೇಶನ್ ಸೃಷ್ಟಿಕರ್ತರೆಂದರೆ ಜಾನ್ ರಾಂಡಾಲ್ಫ್ ಬ್ರೆ; ಇವರು ಮತ್ತೊಬ್ಬ ಅನಿಮೇಟರ್ ಎರ್ಲ್ ಹರ್ಡ್‌ರೊಡನೆ ಸೇರಿ ಸೆಲ್ ಅನಿಮೇಶನ್‌ಪ್ರಕ್ರಿಯೆಗೆ ಹಕ್ಕು ಸ್ವಾಮ್ಯ ಪಡೆದರು. ದಶಕದ ಉತ್ತರಾರ್ಧದಲ್ಲಿ ಅನಿಮೇಷನ್ ಉದ್ಯಮ ತನ್ನ ಪ್ರಾಬಲ್ಯ ಮೆರೆಯಿತು.
ತಂತ್ರಗಳು
ಸಾಂಪ್ರದಾಯಿಕ ಅನಿಮೇಶನ್

ಟ್ರೆಡಿಷನಲ್ ಅನಿಮೇಶನ್ (ಇದು ಸೆಲ್ ಅನಿಮೇಶನ್ ಅಥವಾ ಹ್ಯಾಂಡ್-ಡ್ರಾನ್ ಅನಿಮೇಶನ್ ಎಂದೂ ಕರೆಯಲ್ಪಡುತ್ತದೆ.)ರೇಖಾ ನಕ್ಸೆಗಳ ಮೂಲಕ ಚಿತ್ತ್ರಕೋಶ ರಚನೆ ಎನ್ನುವುದು 20ನೇ ಶತಮಾನದ ಬಹುತೇಕ ಅನಿಮೇಶನ್ ಚಿತ್ರಗಳಲ್ಲಿ ಬಳಸಲಾದ ತಂತ್ರಗಾರಿಕೆ .
ಟ್ರೆಡಿಷನಲ್ ಅನಿಮೇಶನ್ ಚಿತ್ರದಲ್ಲಿ ಪ್ರತಿಯೊಂದಕ್ಕೂ ಚೌಕಟ್ಟುಗಳನ್ನು ನಿರ್ಮಿಸಲಾಗುತ್ತದೆ. ಮೊದಲು ಕಾಗದದ ಮೇಲೆ ಬಿಡಿಸಿದ ಚಿತ್ರಗಳ ಛಾಯಾ ಚಿತ್ರ ಅಥವಾ ಛಾಯಾ ಪ್ರತಿಗಳನ್ನು ಬಳಸಲಾಗುತ್ತದೆ. ಚಲನೆಯ ಭ್ರಮೆಯನ್ನು ಉಂಟುಮಾಡಲು ಪ್ರತಿಯೊಂದೂ ಚಿತ್ರ ಬರಹವು ತನ್ನ ಹಿಂದಿನ ಫ್ರೇಮ್‌ಗಿಂತ ಸ್ವಲ್ಪ ಭಿನ್ನವಾಗಿರುತ್ತವೆ. ಅನಿಮೇಟರ್‌ಗಳು ಬಿಡಿಸಿದ ಚಿತ್ರಗಳನ್ನು ಸೆಲ್ ಎಂದು ಕರೆಯುವ ಪಾರದರ್ಶಕ ಅಸಿಟೇಟ್ ಹಾಳೆಗಳ ಮೇಲೆ ನೆರಳಚ್ಚು(ಝರಾಕ್ಸ್ )ಪ್ರತಿ ತೆಗೆಯಲಾಗುತ್ತದೆ. ನಂತರ ಚಿತ್ರಿಸಲಾದ ರೇಖೆಗಳ ಒಳಗೆ ಈಗಾಗಲೇ ನಿರ್ಧರಿಸಿರುವ ಬಣ್ಣ ಅಥವಾ ಧ್ವನಿ ತುಂಬಲಾಗುತ್ತದೆ.
ಪಾರದರ್ಶಕ ಅಸಿಟೇಟ್ ಹಾಳೆಗಳಲ್ಲಿನ ಚಿತ್ರಕೋಶಗಳ ಛಾಯಾಗ್ರಹಣದ ನಂತರ ಅವುಗಳ ಆಕಾರಕ್ಕೆ ಹೋಲಿಕೆಯಾಗುವ ಹಿನ್ನಲೆ ವರ್ಣದ ವೇದಿಕೆಯಲ್ಲಿ ಚಿತ್ರಿಸಲಾಗುತದೆ.ಇದರಲ್ಲಿ ತಿರುಗುವ ಇಲ್ಲವೆ ಕೊಕ್ಕೆ ಆಕಾರದ ಕ್ಯಾಮರಾ ಬಳಸಿಕೊಳ್ಳಲಾಗುವುದು. ರೇಖಾ ಚಿತ್ರಗಳ ಬಳಕೆ ಟ್ರೆಡಿಷನಲ್ ಸೆಲ್ ಅನಿಮೇಶನ್ ಪದ್ಧತಿಯು 21ನೇ ಶತಮಾನದ ಆರಂಭದೊಂದಿಗೆ ಗತಿಸಿಹೋಯಿತು. ಇಂದಿನ ಅನಿಮೇಶನ್ ಚಿತ್ರ ಮತ್ತು ಹಿನ್ನೆಲೆಗಳನ್ನು ಪರಿಷ್ಕರಿಸಿ ಕಂಪ್ಯೂಟರ್‌ಗಳಲ್ಲಿ ದಾಖಲಿಸಲಾಗುತ್ತದೆ, ಇಲ್ಲವೇ ಉಪಕರಣಗಳ ನೆರವಿನಿಂದ ನೇರವಾಗಿ ಕಂಪ್ಯೂಟರ್‌ನಲ್ಲೇ ಚಿತ್ರ ಬಿಡಿಸಲಾಗುತ್ತದೆ. ಕ್ಯಾಮೆರಾ ಚಲನೆ ಮತ್ತು, ವಿಶೇಷ ಪ್ರಭಾವ ಒದಗಿಸಲು ಚಿತ್ರಗಳಿಗೆ ಬಣ್ಣ ತುಂಬಲು ವೈವಿಧ್ಯಮಯ(ತಂತ್ರಜ್ಞಾನ) ಸಾಫ್ಟ್‌ವೇರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಪೂರ್ಣಗೊಂಡ ಅನಿಮೇಶನ್ ಕೃತಿ ವಿವಿಧ ಪ್ರಕಾರದ ಮಾಧ್ಯಮಗಳಲ್ಲಿ ಮೂಡಿಬರುತ್ತದೆ, ಎಂದರೆ ಪಾರಂಪರಿಕ 35 mm ಫಿಲ್ಮ್ ಮತ್ತು ಹೊಸ ತಂತ್ರಜ್ಞಾನದ ಡಿಜಿಟಲ್ ವಿಡಿಯೋಗಳಲ್ಲಿ ಕಾಣಬರುತ್ತದೆ. ಟ್ರೆಡಿಷನಲ್ ಸೆಲ್ ಅನಿಮೇಶನ್‌ನ ಆ "ಛಾಯೆ" ಈಗಲೂ ಉಳಿದುಕೊಂಡಿದೆ. ಅಲ್ಲದೆ ಕ್ಯಾರೆಕ್ಟರ್ ಅನಿಮೇಟರ್‌ನ ಕೆಲಸಕಾರ್ಯ ಸುಮಾರು 70ಕ್ಕೂ ಹೆಚ್ಚು ವರ್ಷಗಳಿಂದ ಅದೇ ಸ್ವರೂಪ ಉಳಿಸಿಕೊಂಡಿದೆ. ಅಸಿಟೇಟ್ ಪಾರದರ್ಶಕ ಹಾಳೆಗಳ ಉಪಯೋಗ ಇನ್ನ ಆಚರಣೆಯಲ್ಲಿದೆ. ಕೆಲವು ಅನಿಮೇಶನ್ ನಿರ್ಮಾಪಕರು ಸೆಲ್ ಅನಿಮೇಶನ್ ಅನ್ನು ವಿವರಿಸಲು "ಟ್ರೇಡಿಜಿಟಲ್" ಎಂಬ ಪದ ಬಳಸಿದ್ದಾರೆ. ಇದರಲ್ಲಿ ಕಂಪ್ಯೂಟರ್ ತಂತ್ರಜ್ಞಾನದ ಅತಿ ಹೆಚ್ಚು ಬಳಕೆಯಿರುತ್ತದೆ. ಟ್ರೆಡಿಷನಲ್ ಅನಿಮೇಶನ್ ಪೀಚರ್ ಫಿಲ್ಮ್‌ಗಳಿಗೆ ಉದಾಹರಣೆಗಳೆಂದರೆ, ಪಿನೋಚ್ಚಿಯೋ (ಯುನೈಟೆಡ್ ಸ್ಟೇಟ್ಸ್, 1940), ಅನಿಮಲ್ ಫಾರ್ಮ್ (ಯುನೈಟೆಡ್ ಕಿಂಗ್‌ಡಮ್, 1954), ಮತ್ತು ಅಕಿರಾ (ಜಪಾನ್, 1988). ಕಂಪ್ಯೂಟರ್ ತಂತ್ರಜ್ಞಾನ ಬಳಸಿಕೊಂಡು ನಿರ್ಮಾಣಗೊಂಡ ಟ್ರೆಡಿಷನಲ್ ಅನಿಮೇಶನ್ ಫಿಲ್ಮ್‌ಗಳೆಂದರೆ, ದಿ ಲಯನ್ ಕಿಂಗ್ (US, 1994) ಸೆನ್ ಟು ಚಿಚಿರೋ ನೋ ಕಾಮಿಕಾಕುಶಿ (ಸ್ಪಿರಿಟೆಡ್ ಅವೇ) (ಜಪಾನ್, 2001), ಟ್ರೆಷರ್ ಪ್ಲಾನೆಟ್ (USA, 2002) ಮತ್ತು ಲೆಸ್ ಟ್ರಿಪ್ಲೆಟ್ಸ್ ಡಿ ಬೆಲ್ಲೆವಿಲ್ಲೆ (2003).

- ಪೂರ್ಣಪ್ರಮಾಣದ ಅನಿಮೇಶನ್ ಎಂದರೆ ಅತ್ಯುತ್ತಮ ಗುಣಮಟ್ಟದ ಸಾಂಪ್ರದಾಯಿಕ ಶೈಲಿಯ ಅನಿಮೇಶನ್ ಚಿತ್ರ ನಿರ್ಮಾಣವನ್ನು ಸೂಚಿಸುತ್ತದೆ. ಇದರಲ್ಲಿ ವಿವರವಾದ ರೇಖಾ ನಕ್ಷೆಗಳ ಸಾಂಧರ್ಭಿಕ ಚಲನೆಯನ್ನು ಬಿಂಬಿಸಲಾಗುತ್ತದೆ. ಪೂರ್ಣ ಪ್ರಮಾಣದ ಅನಿಮೇಶನ್ ಚಿತ್ರಗಳ ನಿರ್ಮಾಣದಲ್ಲಿ ವಿಭಿನ್ನ ಶೈಲಿಗಳಿವೆ. ವಾಲ್ಟ್ ಡಿಸ್ನಿ ಸ್ಟುಡಿಯೋ ನಿರ್ಮಿಸಿದ (ಬ್ಯೂಟಿ ಅಂಡ್ ದಿ ಬೀಸ್ಟ್ , ಅಲ್ಲಾದಿನ್ , ಲಯನ್ ಕಿಂಗ್ )ಇತ್ಯಾದಿ. ನೈಜವಾಗಿ ವಿನ್ಯಾಸಗೊಳಿಸಿದ ಚಿತ್ರಗಳಿಂದ ಹಿಡಿದು ವಾರ್ನರ್ ಬ್ರದರ್ಸ್ ಅನಿಮೇಶನ್ ಸ್ಟುಡಿಯೋ ನಿರ್ಮಿಸಿದ (ಐರನ್ ಜೇಂಟ್, ಕ್ವೆಸ್ಟ್ ಫಾರ‍್ ಕೇಮ್‌ಲಾಟ್, ಕ್ಯಾಟ್ಸ್ ಡೋಂಟ್ ಡ್ಯಾನ್ಸ್) ಹೆಚ್ಚು "ಕಾರ್ಟೂನ್" ಶೈಲಿಯ ಚಿತ್ರಗಳವರೆಗೆ ವಿಭಿನ್ನತೆ ಇದೆ. ಡಿಸ್ನಿ ಅನಿಮೇಟೆಡ್ ಫೀಚರ್ಸ್ ನಿರ್ಮಿಸಿದ ಹಲವು ಚಿತ್ರಗಳು ಹಾಗೂ ಡಿಸ್ನಿ ಅನಿಮೇಶನ್ ಸ್ಟುಡಿಯೋದ ಹೊರಗೆ ಚಿತ್ರಿತ ಇತರರ ಚಿತ್ರಗಳು ಎಂದರೆ, ದಿ ಸೀಕ್ರೆಟ್ ಆಫ್ NIMH (US, 1982), ದಿ ಐರನ್ ಜೇಂಟ್ (US, 1999), ನೋಕ್ಟುರ್ನಾ (ಸ್ಪೇನ್, 2007), ಸಂಪೂರ್ಣ ಅನಿಮೇಶನ್ ತಂತ್ರಕ್ಕೆ ಉದಾಹರಣೆಗಳಾಗಿವೆ.
- ಸೀಮಿತ ಅನಿಮೇಶನ್ ಕಡಿಮೆ ವಿಸ್ತೃತ ಮತ್ತು ಹೆಚ್ಚು ವಿಶಿಷ್ಟ ಶೈಲಿಯ ಚಿತ್ರಗಳ ಬಳಕೆಯನ್ನು ಒಳಗೊಂಡಿರುತ್ತದೆ, ಜೊತೆಗೆ ಚಲನೆಯ ವಿವಿಧ ಮಾದರಿಗಳನ್ನು ಇದು ಅಗತ್ಯ ಪ್ರಮಾಣದಲ್ಲಿ ಬಳಸುತ್ತದೆ. ಅಮೆರಿಕದ ಯುನೈಟೆಡ್ ಪ್ರೊಡಕ್ಷನ್ಸ್ ಆಫ್ ಅಮೆರಿಕ ಸಂಸ್ಥೆಯ ಕಲಾವಿದರು ಇದರ ಪ್ರವರ್ತಕರು. ವಿಶಿಷ್ಟ ಶೈಲಿಯ ಕಲಾತ್ಮಕ ಅಭಿವ್ಯಕ್ತಿಯ ವಿಧಾನವಾಗಿ ಸೀಮಿತ ಅನಿಮೇಶನ್ ಬಳಕೆಯಾಗುತ್ತದೆ. ಗೆರಾಲ್ಡ್ ಮ್ಯಾಕ್‌ಬೋಯಿಂಗ್ (US, 1951), ಯೆಲ್ಲೋ ಸಬ್‌ಮರೀನ್ (UK, 1968) ಮತ್ತು ಜಪಾನ್ ನಿರ್ಮಾಣದ ಅನೀಮ್ ಚಿತ್ರ ಸರಣಿಯ ಬಹುತೇಕ ಭಾಗಗಳಲ್ಲಿ ಈ ತಂತ್ರಜ್ಞಾನ ಬಳಕೆಯಾಗಿದೆ. ಟೆಲಿವಿಷನ್‌ನಂತಹ ವಿದ್ಯುನ್ಮಾನದ ಮಾಧ್ಯಮಗಳಿಗೆ ಕಡಿಮೆ ವೆಚ್ಚದ ಅನಿಮೇಶನ್ ಚಿತ್ರಗಳನ್ನು ನಿರ್ಮಿಸುವಲ್ಲಿ (ಹನ್ನ-ಬಾರ್ಬೆರಾದ ನಿರ್ಮಾಣ, ಫಿಲ್ಮೇಶನ್, ಮತ್ತು ಇತರೆ TV ಅನಿಮೇಶನ್ ಸ್ಟುಡಿಯೋಗಳ ನಿರ್ಮಾಣದಲ್ಲಿ) ಇದು ಪ್ರಮುಖವಾಗಿ ಬಳಕೆಯಾಗುತ್ತದೆ. ಈ ಮೂಲಕ ಇಂಟರ್ನೆಟ್‌ನಲ್ಲೂ (ವೆಬ್ ಕಾರ್ಟೂನ್) ಬಳಕೆಗೆ ಬಂತು. ಕೆಲವು ಉದಾಹರಣೆಗಳೆಂದರೆ, ಸ್ಪಾಂಗೆಬಾಬ್ ಸ್ಕ್ವೇರ್‌ಪ್ಯಾಂಟ್ಸ್ (USA, 1999-ಪ್ರಸ್ತುತಿ), ದಿ ಫೇರ್‌ಲಿ ಆಡ್ ಪೇರೆಂಟ್ಸ್(USA, 2001-ಪ್ರಸ್ತುತಿ) ಮತ್ತು ಇನ್‌ವ್ಯಾಡರ್ ಝಿಮ್ (USA, 2001-2006)
- ರೋಟೋಸ್ಕೋಪಿಂಗ್ ಎನ್ನುವುದು ಅನಿಮೇಶನ್ ನಿರ್ಮಾಣದಲ್ಲಿ ಒಂದು ತಂತ್ರ. ಇದನ್ನು ಮ್ಯಾಕ್ಸ್ ಫ್ಲೀಷರ್ 1917ರಲ್ಲಿ ಹಕ್ಕು ಸ್ವಾಮ್ಯ ಪಡೆದುಕೊಂಡಿದ್ದಾರೆ. ಇದರಲ್ಲಿ ಅನಿಮೇಟರ್‌ಗಳು ಫ್ರೇಮ್‌ನಿಂದ ಫ್ರೇಮ್‌ಗೆ ನೈಜ ಚಲನೆಯನ್ನು ಚಿತ್ರಿಸುತ್ತಾರೆ. ಮೂಲ ಚಿತ್ರವನ್ನು ನೇರವಾಗಿ ಬಟ್ಟಿ ಇಳಿಸಿ ಅನಿಮೇಟೆಡ್ ಚಿತ್ರಗಳಾಗಿ ಪರಿವರ್ತಿಸಬಹುದು. ಉದಾಹರಣೆಗೆ ದಿ ಲಾರ್ಡ್ ಆಫ್ ದಿ ರಿಂಗ್ಸ್ . ಅನಿಮೇಶನ್‌ಗೆ ತಳಹದಿ ಮತ್ತು ಸ್ಪೂರ್ತಿ ಬಳಸಿಕೊಂಡ ಬಹುತೇಕ ಡಿಸ್ನಿ ಚಿತ್ರ. ಅಥವಾ ವಾಕಿಂಗ್ ಲೈಫ್ (US, 2001) ಮತ್ತು ಅ ಸ್ಕ್ಯಾನರ್ ಡಾರ್ಕ್‌ಲಿ (US, 2006) ಚಿತ್ರಗಳಲ್ಲಿ ವಿಶಿಷ್ಟ ಶೈಲಿಯ ಮತ್ತು ಅಭಿವ್ಯಕ್ತಿಗೆ ಹೆಚ್ಚು ಒತ್ತು ನೀಡುವ ವಿಧಾನ ಬಳಕೆಯಾಗಿದೆ. ಇದಕ್ಕೆ ಮತ್ತಷ್ಟು ಉದಾಹರಣೆಗಳೆಂದರೆ, ರಾಲ್ಫ್ ಬಕ್ಷಿಯವರ ದಿ ಲಾರ್ಡ್ ಆಫ್ ದಿ ರಿಂಗ್ಸ್(USA, 1978), ಫೈಯರ್ ಅಂಡ್ ಐಸ್(USA, 1983), ಮತ್ತು ಹೆವಿ ಮೆಟಲ್(1981)
- ಲೈವ್-ಆಕ್ಷನ್/ಅನಿಮೇಶನ್ (ನೈಜ-ಕಾರ್ಯ ಅನಿಮೇಶನ್) ತಂತ್ರಗಾರಿಕೆಯು ಕೈಯಲ್ಲಿ ಬಿಡಿಸಿದ ಚಿತ್ರ ಅಥವಾ ಪಾತ್ರಗಳನ್ನು ಸಹಜ ಕ್ರಿಯಾತ್ಮಕ ಪಾತ್ರಗಳೊಂದಿಗೆ ಸಂಯೋಜಿಸಲು ಬಳಕೆಯಾಗುತ್ತದೆ. ಇದನ್ನು ಎಡಿಟಿಂಗ್ ಎಂಬ ಅರ್ಥದಲ್ಲೂ ಬಳಸಬಹುದಾಗಿದೆ. ಕೋಕೋ ದಿ ಕ್ಲಾನ್ ಎಂಬ ಪಾತ್ರವನ್ನು ನೈಜ ದೃಶ್ಯದ ಮೇಲೆ ಚಿತ್ರಿಸುವುದರೊಂದಿಗೆ ಈ ತಂತ್ರ ಆರಂಭ ಕಂಡಿತ್ತು. ಇದಕ್ಕೆ ಮತ್ತಷ್ಟು ಉದಾಹರಣೆಗಳೆಂದರೆ, ಹೂ ಫ್ರೇಮ್ಡ್ ರೋಜರ್ ರಾಬಿಟ್? , (USA, 1988), ಸ್ಪೇಸ್ ಜಾಮ್ (USA, 1996) ಮತ್ತು ಓಸ್ಮೋಸಿಸ್ ಜೋನ್ಸ್ (USA, 2002) ಎಂಬ ಚಿತ್ರಗಳು.
- ಅನೀಮ್ ಎನ್ನುವ ತಂತ್ರದ ಮೂಲ USA ಆದರೂ ಪ್ರಮುಖವಾಗಿ ಬಳಕೆಯಾಗಿದ್ದು ಜಪಾನ್‌ನಲ್ಲಿ. ಸಾಮಾನ್ಯವಾಗಿ ವಿಸ್ತೃತ ಪಾತ್ರಗಳನ್ನು ಒಳಗೊಂಡಿದ್ದರೂ, ಇದು ಹೆಚ್ಚು ಸ್ಟಿಫ್ (ಜಡ-ಜಟಿಲ) ಅನಿಮೇಶನ್‌ಗೆ ಸಂಬಂಧಿಸಿದ್ದು. ಇದರಲ್ಲಿ ಬಾಯಿಯ ಚಲನೆಗೆ ಮುಖ್ಯವಾಗಿ 2-3 ಫ್ರೇಮ್‌ಗಳನ್ನು, ಕಾಲಿನ ಚಲನೆಗೆ ಸುಮಾರು 6ರಿಂದ 10 ಫ್ರೇಮ್‌ಗಳನ್ನು ಬಳಸುತ್ತಾರೆ. ಸಾಕಷ್ಟು ವೇಳೆ ಈ ತಂತ್ರದಲ್ಲಿ ಪಾತ್ರಗಳ ಕಣ್ಣುಗಳ ಚಲನೆಗೆ ಹೆಚ್ಚು ಮಹತ್ವ ಇರುವುದರಿಂದ ಅವುಗಳನ್ನು ಕೂಲಂಕುಷವಾಗಿ ಬಿಡಿಸಲಾಗಿರುತ್ತದೆ. ಆದ್ದರಿಂದ ಕೆಲವೊಮ್ಮೆ ಪ್ರತಿ ಫ್ರೇಮ್‌ಗಳ ಮೇಲೆ ಅವುಗಳನ್ನು ಚಿತ್ರಿಸುವುದಕ್ಕೆ ಬದಲು ಎರಡು ಕಣ್ಣುಗಳನ್ನು 5ರಿಂದ 6 ಕೋನಗಳಲ್ಲಿ ಚಿತ್ರಿಸಿ ಅವನ್ನು ಪ್ರತಿ ಫ್ರೇಮ್‌ಗೂ ಅಂಟಿಸಲಾಗುತ್ತದೆ.(ಆಧುನಿಕ ಕಾಲದಲ್ಲಿ ಇದಕ್ಕೆ ಕಂಪ್ಯೂಟರ್ ಬಳಸುತ್ತಾರೆ). ಅನಿಮ್ ತಂತ್ರವನ್ನು ಬಳಸಿಕೊಂಡ ಕೆಲವು ಚಲನಚಿತ್ರಗಳೆಂದರೆ; ಸ್ಪಿರಿಟೆಡ್ ಅವೇ(ಜಪಾನ, 2001), ಅಕೀರಾ(ಜಪಾನ್, 1988) ಮತ್ತು ಪ್ರಿನ್ಸೆಸ್ ಮೊನೋನೋಕೆ
ಸ್ಟಾಪ್ ಮೋಶನ್ (ಸ್ಥಿರಗತಿಯಲ್ಲಿನ ಚಲನೆ)

ಸ್ಟಾಪ್-ಮೋಶನ್ ಅನಿಮೇಶನ್ ಎನ್ನುವ ಪರಿಕಲ್ಪನೆ ಭೌತಿಕವಾಗಿ ವಾಸ್ತವ ಜಗತ್ತಿನ ವಸ್ತುಗಳ ಚಲನೆಯನ್ನು ವಿವರಿಸಲು ಬಳಕೆಯಾಗುತ್ತದೆ. ಇದರಲ್ಲಿ ನೈಸರ್ಗಿಕ ವಸ್ತುಗಳನ್ನು ಒಂದೊಂದೂ ಪತ್ಯೇಕ ಫ್ರೇಮ್‌ಗಳಲ್ಲಿ ಚಿತ್ರೀಕರಿಸಿ ಏಕಕಾಲದಲ್ಲಿ ಚಲಿಸುವಂತೆ ಮಾಡಿ ಚಲನೆಯ ಭ್ರಮೆಯನ್ನು ಸೃಷ್ಟಿಸುತ್ತಾರೆ. ಸ್ಟಾಪ್-ಮೋಶನ್ ಅನಿಮೇಶನ್‌ನಲ್ಲಿ ಹಲವು ವೈವಿಧ್ಯಗಳಿವೆ. ಅನಿಮೇಶನ್ ರೂಪಿಸಲು ಬಳಸಿದ ಮಾಧ್ಯಮದ ಹೆಸರೇ ಇದಕ್ಕೆ ಬಂದಿದೆ. ಈ ರೀತಿಯ ಅನಿಮೇಶನ್ ಚಿತ್ರಗಳನ್ನು ರೂಪಿಸಲು ವ್ಯಾಪಕವಾಗಿ ಸಾಫ್ಟ್‌ವೇರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.ಕಾಂಪೂಟರ ಕೂಡಾ ಹೆಚ್ಚು ಬಳಕೆಯಾಗುತ್ತಿದೆ
- ಪಪ್ಪೆಟ್ ಅನಿಮೇಶನ್ (ತೊಗಲು ಸೂತ್ರದ ಗೊಂಬೆಗಳು), ನಿರ್ಮಿತ ವಾತಾವರಣದಲ್ಲಿ ಪರಸ್ಪರ ಸಂಭಾಷಣೆಯಲ್ಲಿ ತೊಡಗುವ ಸ್ಟಾಪ್-ಮೋಶನ್ ಪಪ್ಪೆಟ್ (ಪುಟ್ಟ ಗೊಂಬೆಗಳ) ಆಕೃತಿಗಳನ್ನು ಇದು ಒಳಗೊಳ್ಳುತ್ತದೆ. ಮಾಡೆಲ್ ಅನಿಮೇಶನ್‌ನಲ್ಲಿ ವಾಸ್ತವ ಜಗತ್ತಿನ ಸಂವಹನಕ್ಕೆ ಪ್ರತಿಯಾಗಿ ಸಂವಹನ ನಡೆಯುತ್ತದೆ. ಈ ಸೂತ್ರದ ಗೊಂಬೆಗಳ ಒಳಗೆ ಸಾಮಾನ್ಯವಾಗಿ ಅರ್ಮೇಚರ್(ಕೈಗೊಂಬೆ ಕವಚ) ಅನ್ನು ಅಳವಡಿಸಲಾಗಿರುತ್ತದೆ. ಅವು ಸ್ಥಿರವಾಗಿ ನಿಲ್ಲುವಂತೆ ಜೊತೆಗೆ ನಿರ್ದಿಷ್ಟ ಮಾರ್ಗದ ಕಡೆ ಚಲಿಸುವಂತೆ ಕೈಕವಚ ಅಳವಡಿಸಿರುತ್ತಾರೆ.ಇದು ಗೊಂಬೆಗಳ ವೇಗದ ಚಲನೆಗೂ ಸಹಕಾರಿಯಾಗುತ್ತದೆ. ದಿ ಟೇಲ್ ಆಫ್ ದಿ ಫಾಕ್ಸ್ (ಫ್ರಾನ್ಸ್, 1937), ನೈಟ್‌ಮೇರ್ ಬಿಫೋರ್ ಕ್ರಿಸ್‌ಮಸ್(US, 1993), ಕಾರ್ಪಸ್ ಬ್ರಿಡ್ಜ್ (US, 2005), ಕೋರಾಲಿನ್ (US, 2009) ಮತ್ತು ಜಿರಿ ಟ್ರಂಕದ (Jiří Trnka) ಚಿತ್ರಗಳು ಹಾಗೂ ರೋಬಾಟ್ ಚಿಕನ್ (US, 2005–ಪ್ರಸ್ತುತಿ) ಎಂಬ TV ಸರಣಿಗಳು ಇದಕ್ಕೆ ಉದಾಹರೆಣಗಳಾಗಿವೆ.
- ಪಪ್ಪೆಟೂನ್ , ಇವುಗಳನ್ನು ಜಾರ್ಜ್ ಪಾಲ್ ರೂಪಿಸಿದ ತಂತ್ರಗಳನ್ನು ಬಳಸಿಕೊಂಡು ಸೃಷ್ಟಿಸಲಾಗಿದೆ. ಇವು ಪಪ್ಪೆಟ್ ಅಥವಾ ಸೂತ್ರದ ಗೊಂಬೆಗಳ ಅನಿಮೇಶನ್ ಚಿತ್ರಗಳಾಗಿವೆ. ಇರುವ ಗೊಂಬೆಯನ್ನೇ ಬೇರೆ ಆಕೃತಿಗಳಿಗೆ ಪರಿವರ್ತಿಸುವುದಕ್ಕೆ ಬದಲಾಗಿ ಫ್ರೇಮ್‌ಗಳ ನಿರ್ಮಾಣ ಮಾಡಲಾಗುತ್ತದೆ.ಇದರಿಂದಾಗಿ ಗೊಂಬೆಗಳ ವಿಭಿನ್ನ ಆವೃತ್ತಿಗಳನ್ನು ಬಳಸಲಾಗುತ್ತದೆ.
- ಕ್ಲೇ ಅನಿಮೇಶನ್ ಜೇಡಿ ಮಣ್ಣಿನಿಂದ ತಯಾರಿಸಿದ ಜಿಗುಟು ಪದಾರ್ಥಗಳಿಂದ ನಿರ್ಮಿಸಿದ,ಗೊಂಬೆಗಳ ಎನಿಮೇಶನ್ ಅಥವಾ ಪ್ಲಾಸ್ಟಿಸಿನ್ ಅನಿಮೇಶನ್; ಇದನ್ನು ಕ್ಲೇಮೇಶನ್ ಎಂದು ಸಂಕ್ತಿಪ್ತವಾಗಿ ಹೇಳಬಹುದು. ಸ್ಟಾಪ್ ಮೋಶನ್ ಅನಿಮೇಶನ್ ಚಿತ್ರಗಳನ್ನು ಸೃಷ್ಟಿಸಲು ಜೇಡಿಮಣ್ಣಿನ ಆಕೃತಿಗಳನ್ನು ಅಥವಾ ಇದೇ ರೀತಿಯ ಮೆದುವಾದ ವಸ್ತುವಿನಿಂದ ರೂಪಿಸಿದ ಆಕೃತಿಗಳನ್ನು ಬಳಸಲಾಗುತ್ತದೆ. ಈ ಆಕೃತಿಗಳು ತಮ್ಮೊಳಗೆ ಅರ್ಮೇಚರ್ ಅಥವಾ(ಸಂಹನ ಸೂಕ್ಷ್ಮ ತಂತಿಗಳ ಸೂಡು) ವೈಯರ್ ಫ್ರೇಮ್‌ಗಳನ್ನು ಹೊಂದಿರುತ್ತವೆ. ಇದು ಕೈಗೊಂಬೆ ಅನಿಮೇಶನ್ (ಕೆಳಗೆ ಕಾಣಿಸಿದ) ರೀತಿಯಲ್ಲೇ ಇರುತ್ತದೆ. ಇದರಲ್ಲಿರುವ ವೈಯರ್ ಅಥವಾ ಅರ್ಮೇಚರ್, ಆಕೃತಿಗಳನ್ನು ಬೇಕಾದ ಕೋನದಲ್ಲಿ ತಿರುಗಿಸಲು ನೆರವಾಗುತ್ತದೆ. ಪರ್ಯಾಯವೆಂದರೆ, ಬ್ರೂಸ್ ಬಿಕ್‌ಫೋರ್ಡ್ ಚಿತ್ರದಲ್ಲಿ ಬಳಸಿರುವಂತೆ ಆಕೃತಿಗಳನ್ನು ಸಂಪೂರ್ಣವಾಗಿ ಜೇಡಿಮಣ್ಣಿನಿಂದಲೇ ಮಾಡಬಹುದು. ಈ ಚಿತ್ರದಲ್ಲಿ ಜೇಡಿಮಣ್ಣಿನ ಗೊಂಬೆಗಳು ವೈವಿಧ್ಯಮಯ ಆಕಾರಗಳನ್ನು ಪಡೆಯುತ್ತವೆ. ಜೇಡಿಮಣ್ಣಿನ ಆಕೃತಿಗಳಿಗೆ ಅನಿಮೇಶನ್ ಮಾಡಿದ ಉದಾಹರಣೆಗಳೆಂದರೆ, ದಿ ಗುಂಬಿ ಷೋ (US, 1957–1967) ಮೋರ್‌ಫ್ ಕಿರುಗಥೆಗಳು (UK, 1977–2000), ವಲ್ಲೇಸ್ ಅಂಡ್ ಗ್ರೋಮಿಟ್ ಕಿರುಗಥೆಗಳು (UK, 1989ರಂತೆ), ಜಾನ್ ಸ್ವಾಂಕ್‌ಮೇಜರ್‌ರವರ ಡೈಮೆನ್‌ಷನ್ಸ್ ಆಫ್ ಡೈಲಾಗ್ (ಜೆಕೋಸ್ಲೋವಾಕಿಯಾ, 1982), ದಿ ಟ್ಯ್ರಾಪ್ ಡೋರ್ (UK, 1984). ಇದೇ ತಂತ್ರದ ಚಲನಚಿತ್ರಗಳೆಂದರೆ, Wallace and Gromit: Curse of the Were-Rabbit, ಚಿಕನ್ ರನ್ ಮತ್ತು ದಿ ಅಡ್ವೆಂಚರ್ಸ್ ಆಫ್ ಮಾರ್ಕ್ ಟ್ವೈನ್
- ಕಟೌಟ್ ಅನಿಮೇಶನ್ ಎನ್ನುವುದು ಸ್ಟಾಪ್ ಮೋಶನ್ ಅನಿಮೇಶನ್ ನಿರ್ಮಾಣ ತಂತ್ರದ ಒಂದು ವಿಧ. ಇದರಲ್ಲಿ ಪೇಪರ್ ಅಥವಾ ಬಟ್ಟೆಯಿಂದ ಮಾಡಿದ ವಸ್ತುಗಳಲ್ಲಿ 2 ಆಯಾಮದ ಆಕೃತಿಗಳನ್ನು ರಚಿಸಲಾಗುತ್ತದೆ. ಅವುಗಳಿಗೆ ಅನಿಮೇಶನ್ ಸ್ವರೂಪ ನೀಡಲಾಗುವುದು. ದೊಡ್ಡ ಗಾತ್ರದ ಭಿತ್ತಿ ಚಿತ್ರಗಳ ಬಳಕೆ ಈ ಪದ್ದತಿಯಲ್ಲಿ ಜನಪ್ರಿಯವಾಗಿದೆ. ಟೆರ್ರಿ ಗಿಲಿಯಂ ಅವರ ಮೊಂತಿ ಪೈಥಾನ್ಸ್ ಫ್ಲೈಯಿಂಗ್ ಸರ್ಕಸ್ (UK, 1969-1974) ಚಿತ್ರದ ಅನಿಮೇಶನ್ ಸನ್ನಿವೇಶಗಳು; ಫೆಂಟಾಸ್ಟಿಕ್ ಪ್ಲಾನೆಟ್ (ಫ್ರಾನ್ಸ್/ಜೆಕೋಸ್ಲೋವಾಕಿಯಾ, 1973) ; ಟೇಲ್ ಆಫ್ ದಿ ಟೇಲ್ಸ್ (ರಷಿಯಾ, 1979), ಸೌತ್ ಪಾರ್ಕ್ (US, 1997) ಎಂಬ TV ಕಾರ್ಯಕ್ರಮ ಸರಣಿಯ ಪ್ರಾಯೋಗಿಕ ಭಾಗಗಳು (ಕೆಲವೊಮ್ಮೆ ಉಳಿದ ಭಾಗಗಳಲ್ಲೂ)ಇದಕ್ಕೆ ಉದಾಹರಣೆಗಳಾಗಿವೆ.
- ಸಿಲೂಎಟ್ (ಛಾಯಾರೇಖಾಕೃತಿ) ಅನಿಮೇಶನ್ ಎನ್ನುವುದು ಕಟೌಟ್ ಅನಿಮೇಶನ್‌ನ ವಿಭಿನ್ನ ರೂಪ. ಇದರಲ್ಲಿ ಪಾತ್ರಗಳ ಮೇಲೆ ಹಿಂಭಾಗದಿಂದ ಬೆಳಕನ್ನು ಹಾಯಿಸುತ್ತಾರೆ. ಇದರಿಂದ ಇಲ್ಲಿನ ಪಾತ್ರಗಳು ಕೇವಲ ಛಾಯಾರೇಖಾಕೃತಿಗಳಂತೆ ಕಾಣುತ್ತವೆ. ಇಲ್ಲಿ ನೆಳಲು ಬೆಳಕಿನ ಚಾಕಚಕ್ಯತೆ ಪ್ರಮುಖವಾಗುತ್ತದೆ.ಆಕೃತಿಗಳ ನೆರಳನ್ನು ಬಳಸಿ ಅನಿಮೇಶನ್ ಮಾಡಲಾಗುತ್ತದೆ. ದಿ ಅಡ್ವೆಂಚರ್ಸ್ ಆಫ್ ಪ್ರಿನ್ಸ್ ಅಚ್‌ಮದ್ (ವೀಮರ್ ರಿಪಬ್ಲಿಕ್, 1926) ಮತ್ತು ಪ್ರಿನ್ಸೆಸ್ ಎಟ್ ಪ್ರಿನ್ಸೆಸ್ಸಸ್ (ಫ್ರಾನ್ಸ್, 2000) ಚಿತ್ರಗಳು ಇದಕ್ಕೆ ಉದಾಹರಣೆಗಳಾಗಿವೆ.
- ಮಾಡೆಲ್ (ಮಾದರಿ ಮೂಲದ ಆಕೃತಿ) ಅನಿಮೇಶನ್ ಎನ್ನುವುದು ಸ್ಟಾಪ್ ಮೋಶನ್ ತಂತ್ರವನ್ನು ಸೂಚಿಸುತ್ತದೆ. ಅನಿಮೇಶನ್ ಪಾತ್ರಗಳನ್ನು ವಾಸ್ತವದೊಂದಿಗೆ ತಾನೂ ಅದರ ಭಾಗವಾಗಿ ಸಂವಹನ ಏರ್ಪಡಿಸುವಂತೆ ಮಾಡಲು ಇದನ್ನು ಸೃಷ್ಟಿಸಲಾಗಿದೆ.ಚಿತ್ರಗಳು ಸ್ಥಿರವಾಗಿದ್ದರೂ ಅವುಗಳ ಚಲನೆ ಭಾವಗಳನ್ನು ವ್ಯಕ್ತಗೊಳಿಸುತ್ತದೆ. ಸ್ಥಿರ ಚಿತ್ರಗಳ ಪಾತ್ರಗಳನ್ನು ನೈಜತೆಗೆ ಹತ್ತಿರವಾಗಿರುವಂತೆ ದೃಶ್ಯ ಸಂಯೋಜನದ ತಂತ್ರ ಬಳಸಲಾಗುತ್ತದೆ.), ಮ್ಯಾಟ್ಟೆ ಪರಿಣಾಮಗಳು, ಮತ್ತು ತುಣುಕು ದೃಶ್ಯಗಳನ್ನು ಹಲವು ವೇಳೆ ಮಾದರಿಗಳನ್ನಾಗಿಯೂ ಉಪಯೋಗಿಸುವ ಕ್ರಮವೂ ಇದರಲ್ಲಿ ಅಡಕವಾಗಿದೆ. ಜಾಸನ್ ಅಂಡ್ ಆರ್ಗೋನಾಟ್ಸ್ (1961) ಚಿತ್ರದ ಸನ್ನಿವೇಶಗಳಲ್ಲಿ ಕಾಣುವಂತೆ ರೇ ಹ್ಯಾರಿಹುಸೇನ್‌ನ ನಿರ್ಮಿತಿಗಳು, ಮತ್ತು ಕಿಂಗ್ ಕಾಂಗ್ (1933 ಫಿಲ್ಮ್) ಚಿತ್ರದಲ್ಲಿರುವಂತೆ ವಿಲ್ಲೀಸ್ ಓ ಬ್ರಿಯೆನ್‌ನ ಕಾರ್ಯಗಳು ಇದಕ್ಕೆ ಉದಾಹರಣೆಯಾಗಿವೆ.
- ಗೋ ಮೋಶನ್ ತಂತ್ರ ಆಧುನಿಕ ಅನಿಮೇಶನ್‌ನ ಮತ್ತೊಂದು ರೂಪವಾಗಿದೆ. ಫಿಲ್ಮ್‌ನ ಫ್ರೇಮ್‌ಗಳ ನಡುವೆ ಮೋಶನ್ ಬ್ಲರ್ (=ಚಲನೆಯನ್ನು ಮಸುಕಾಗಿಸಲು) ಸೃಷ್ಟಿಸಲು ಇದು ವಿಭಿನ್ನ ತಂತ್ರಗಳನ್ನು ಬಳಸುತ್ತದೆ.ಪರದೆ ಮೇಲಣ ಎರಡು ಆಕೃತಿಗಳ ಮಧ್ಯೆ ಉಂಟಾಗುವ ಮಸಕನ್ನು ನಿಯಂತ್ರಿಸುತ್ತದೆ. ಈ ತಂತ್ರ ಟ್ರೆಡಿಷನಲ್ ಸ್ಟಾಪ್ ಮೋಶನ್ ನಿರ್ಮಾಣದಲ್ಲಿ ಬಳಕೆಯಲ್ಲಿರಲಿಲ್ಲ. ಇಂಡಸ್ಟ್ರಿಯಲ್ ಲೈಟ್ & ಮ್ಯಾಜಿಕ್ ಎಂಬ ಸಂಸ್ಥೆ ಮತ್ತು ಚಿತ್ರ ನಿರ್ದೇಶಕ ಫಿಲ್ ಟಿಪ್ಪೆಟ್ ಜೊತೆಗೂಡಿ ಈ ತಂತ್ರ ಆವಿಷ್ಕರಿಸಿದರು. ದಿ ಎಂಪೈರ್ ಸ್ಟ್ರೈಕ್ಸ್ ಬ್ಯಾಕ್ (1980) ಎಂಬ ಚಿತ್ರಕ್ಕೆ ವಿಶೇಷ ಪರಿಣಾಮಗಳಿರುವ ದೃಶ್ಯಗಳನ್ನು ಸೃಷ್ಟಿಸಲು ಅವರು ಈ ತಂತ್ರವನ್ನು ಕಂಡುಹಿಡಿದರು.
- ಆಬ್ಜೆಕ್ಟ್ ಅನಿಮೇಶನ್ ವಿಶೇಷವಾಗಿ ರೂಪಿಸಿರುವ ವಸ್ತುಗಳಿಗೆ ವಿರುದ್ಧವಾಗಿ, ಸ್ಟಾಪ್ ಮೋಶನ್ ಅನಿಮೇಶನ್ ನಿರ್ಮಾಣದಲ್ಲಿ ನಿಯಂತ್ರಿಸಬಹುದಾದ ನಿರ್ಜೀವ ವಸ್ತುಗಳ ಬಳಕೆಯನ್ನು ಸೂಚಿಸುತ್ತದೆ.
ಅಂದರೆ ನಿರ್ಜೀವ ವಸ್ತುಗಳ ಚಲನೆ ಸಂದರ್ಭಗಳನ್ನು ಕಣ್ಣಿಗೆ ಕಟ್ಟುವಂತೆ ಮಾಡುತ್ತದೆ. ಬ್ರಿಕ್‌ಫಿಲ್ಮ್ ಆಬ್ಜೆಕ್ ಅನಿಮೇಶನ್‌ಗೆ ಒಂದು ಉದಾಹರಣೆ. ಇದು ಲೆಗೋ ರೀತಿಯ ಪ್ಲಾಸ್ಟಿಕ್ ಬೊಂಬೆಗಳ ನಿರ್ಮಾಣ ಬಳಕೆಯನ್ನು ಸಂಯೋಜಿಸುತ್ತದೆ.ಪ್ಲಾಸ್ಟಿಕ ಹಾಗು ಕಟ್ಟಡ ಬಳಕೆಯ ಇಟ್ಟಿಗೆಯಂತಹ ವಸ್ತುಗಳು ಇದರಲ್ಲಿ ರಂಗ ಸಜ್ಜಿಕೆಯನ್ನು ತಯಾರಿಸಬಹುದಾಗಿದೆ.
- ಗ್ಯ್ರಾಫಿಕ್ ಅನಿಮೇಶನ್ ರೇಖಾಚಿತ್ರಗಳ ಅನಿಮೇಶನ್ ಪದ್ಧತಿಯಲ್ಲಿ ನೇರವಾಗಿ ಚಿತ್ರಗಳನ್ನ್ನು ಪಡೆಯಲು (ಫೊಟೊ,ಸುದ್ದಿ ಪತ್ರಿಕೆಗಳ ತುಣುಕು)ಗಳನ್ನು ಉಪಯೋಗಿಸಲಾಗುತ್ತದೆ.ಇದರ ಮೂಲಕ ಸನ್ನಿವೇಶಗಳನ್ನು ಚೌಕಟ್ಟುಗಳಲ್ಲಿ ಹಿಡಿದಿಡಲಾಗುತ್ತದೆ. ದೃಶ್ಯದಲ್ಲಿ ಚಲನೆ ಸೃಷ್ಟಿಸಲು ,ಸ್ಥಿರ ಚಿತ್ರಣ (ಸ್ಟಾಪ್ ಮೋಶನ್) ಕ್ಯಾಮೆರಾ ಚಲಿಸಿದಾಗ ಗ್ಯ್ರಾಫಿಕ್ ಸ್ಥಿರತೆಯನ್ನು ಕಾಯ್ದುಕೊಳ್ಳುತ್ತದೆ.
- ಪಿಕ್ಸಿಲೇಶನ್ ಜೀವಂತ ಪಾತ್ರಗಳನ್ನು ಸ್ಟಾಪ್ ಮೋಶನ್ ತಂತ್ರದಲ್ಲಿ ಬಳಸುವುದನ್ನು ಸೂಚಿಸುತ್ತದೆ. ಇದರಿಂದ ಅದೃಶ್ಯ ಮತ್ತು ದಿಢೀರ ದರ್ಶನದ ಪರಿಣಾಮ ಹಾಗು ಅಸಂಖ್ಯಾತ ವಾಸ್ತವಿಕ ಅಂಶಗಳನ್ನು ಸೃಷ್ಟಿಸಬಹುದು. ಅಲ್ಲದೆ ಶೂನ್ಯದಿಂದ ಉದ್ಭವಿಸುವ ಮತ್ತು ಇತರೆ ಚಿತ್ರಗಳನ್ನು ಸೃಷ್ಟಿಸುವ ಅವಕಾಶಗಳನ್ನು ಇದು ನೀಡುತ್ತದೆ. ಪಿಕ್ಸಿಲೇಶನ್ ನಿರ್ಮಾಣಕ್ಕೆ ಉದಾಹರಣೆಗಳೆಂದರೆ, ದಿ ಸೀಕ್ರೆಟ್ ಅಡ್ವೆಂಚರ್ಸ್ ಆಫ್ ಟಾಮ್ ಥಂಬ್ ಮತ್ತು ಯಾಂಗ್ರಿ ಕಿಡ್ ಕಿರುಗಥೆಗಳು.
ಕಂಪ್ಯೂಟರ್ ಅನಿಮೇಷನ್
.gif)
ಕಂಪ್ಯೂಟರ್ ಅನಿಮೇಶನ್ ವಿಭಿನ್ನ ಬಗೆಯ ತಂತ್ರಗಳನ್ನು ಒಳಗೊಂಡಿರುತ್ತದೆ. ಎಲ್ಲ ತಂತ್ರಗಳಲ್ಲಿರುವ ಏಕರೂಪದ ಅಂಶವೆಂದರೆ, ಅನಿಮೇಶನ್ ಇಲ್ಲಿ ಡಿಜಿಟಲ್ ರೂಪದಲ್ಲಿ ನಿರ್ಮಾ ಣವಾಗುತ್ತದೆ ಎನ್ನುವುದು.
2D ಅನಿಮೇಶನ್
2D ಅನಿಮೇಶನ್‌ನಲ್ಲಿ ಆಕೃತಿಗಳನ್ನು ಕಂಪ್ಯೂಟರ್‌ನಲ್ಲಿ 2D ಬಿಟ್‌ಮ್ಯಾಪ್ ಗ್ಯ್ರಾಫಿಕ್ಸ್ ಅಥವಾ 2D ವೆಕ್ಟರ‍್ ಗ್ಯ್ರಾಫಿಕ್ಸ್ ತಂತ್ರಜ್ಞಾನದ ಸಹಾಯದಿಂದ ಪರಿಷ್ಕರಿಸಿ ಸಿದ್ದಪಡಿಸುತ್ತಾರೆ. ಟ್ರೆಡಿಶನಲ್ ಅನಿಮೇಶನಲ್ಲಿ ಸ್ವಯಂ ಕಂಪ್ಯೂಟರೀಕೃತ ರೂಪಗಳನ್ನು ಎಂದರೆ ಟ್ವೀನಿಂಗ್, ಮಾರ್ಫಿಂಗ್, ಆನಿಯನ್ ಸ್ಕಿನ್ನಿಂಗ್ ಮತ್ತು ಪ್ರಕ್ಷಿಪ್ತ ರೋಟೋಸ್ಕೋಪಿಂಗ್‌ನಂತಹ ತಂತ್ರಗಳು ಬಳಕೆಯಾಗುತ್ತವೆ. ಉದಾಹರಣಗೆ: ಫೋಸ್ಟರ್ಸ್ ಹೋಮ್ ಫಾರ್ ಇಮೇಜಿನರಿ ಫ್ರೆಂಡ್ಸ್ , ಸ್ಪಾಂಗೆಬಾಬ್ ಸ್ಕ್ವೇರ್‌ಪ್ಯಾಂಟ್ಸ್(ನಿರ್ದಿಷ್ಟ ಸರಣಿಗಳು ಮಾತ್ರ) , ಡ್ಯಾನ್ನಿ ಫ್ಯಾಂಟಮ್ (ನಿರ್ದಿಷ್ಟ ಸಂಧರ್ಭಗಳು ಮಾತ್ರ), ದಿ ಫೇರ್‌ಲಿ ಆಡ್‌ಪೇರೆಂಟ್ಸ್ (ನಿರ್ದಿಷ್ಟ ಸರಣಿಗಳು ಮಾತ್ರ), El Tigre: The Adventures of Manny Rivera
- ಅನಲಾಗ್ ಕಂಪ್ಯೂಟರ್ ಅನಿಮೇಶನ್
- ಫ್ಯ್ಲಾಶ್ ಅನಿಮೇಶನ್
- ಪವರ‍್ಪಾಯಿಂಟ್ ಅನಿಮೇಶನ್
3D ಅನಿಮೇಶನ್
3D ಅನಿಮೇಶನ್‌ನಲ್ಲಿ ಡಿಜಿಟಲ್ ಆಕೃತಿಗಳನ್ನು ಮಾದರಿಗಳಂತೆ ಅನಿಮೇಟರ್ ಪರಿವರ್ತಿಸುತ್ತಾನೆ. ಜಾಲರಿ ಅಥವಾ ಬಲೆಯನ್ನು ನಿಯಂತ್ರಿಸಲು ಬಳಸುವ ಡಿಜಿಟಲ್ ಮೂಲರೂಪದ ತೆಳು ರಚನೆಗಳನ್ನು ಇಲ್ಲಿ ಒದಗಿಸಲಾಗಿರುತ್ತದೆ. ಈ ಪ್ರಕ್ರಿಯೆಯನ್ನು ರಿಗ್ಗಿಂಗ್(ಕಣ್ಕಟ್ಟು) ಎಂದು ಕರೆಯುತ್ತಾರೆ. ಇನ್ನೂ ಹಲವು ವಿಭಿನ್ನ ತಂತ್ರಗಳನ್ನು ಇಲ್ಲಿ ಅಳವಡಿಸಲಾಗುತ್ತದೆ. ಉದಾಹರಣೆಗೆ, ಗಣಿತದ ಸಮೀಕರಣಗಳು(ಉದಾ, ಕಾಂತತ್ವ, ಪ್ರಾಯೋಗಿಕ ಅನುಕರಣೆಗಳು), ಕೃತಕವಾದ ತುಪ್ಪಳ ಅಥವಾ ಕೂದಲು, ಬೆಂಕಿ ಮತ್ತು ನೀರಿನ ಪರಿಣಾಮಗಳು ಹಾಗೂ ಚಲನೆಯನ್ನು ನಿಯಂತ್ರಿಸುವ ಈ ಎಲ್ಲ ತಂತ್ರಗಳು 3D ಡೈನಾಮಿಕ್ಸ್ ವರ್ಗದಲ್ಲಿ ಬರುತ್ತವೆ. ಹಲವು 3D ಅನಿಮೇಶನ್‌ಗಳು ತುಂಬ ನೈಜವಾಗಿದ್ದು ನಂಬಲರ್ಹವಾಗಿರುತ್ತವೆ. ಇತ್ತೀಚಿನ ಚಲನಚಿತ್ರಗಳಲ್ಲಿ ವಿಷುಯಲ್ ಎಫೆಕ್ಟ್ಸ್ ಅಥವ ದೃಶ್ಯ ವೈಭವವಗಳಾಗಿ ಬಳಕೆಯಾಗುತ್ತಿವೆ. ಉದಾಹರಣೆಗಳು: ಟಾಯ್ ಸ್ಟೋರಿ , ಶ್ರೆಕ್ , ಪೊಕೊಯೋ
ಪರಿಭಾಷೆಗಳು
- ಮೋಶನ್ ಕ್ಯಾಪ್ಚರ್
- ಸೆಲ್-ಶೇಡೆಡೆ ಅನಿಮೇಶನ್
- ಡೀಪ್ ಕ್ಯಾನ್‌ವಾಸ್
- ಮಾರ್ಫ್ ಟಾರ್ಗೆಟ್ ಅನಿಮೇಶನ್
- ನಾನ್-ಪೋಟೋರಿಯಲಿಸ್ಟಿಕ್ ರೆಂಡರಿಂಗ್
- ಸ್ಕೆಲಿಟಲ್ ಅನಿಮೇಶನ್
- ಮೋಶನ್ ಕ್ಯಾಪ್ಚರ್
- ಕ್ರೌಡ್ ಸಿಮ್ಯುಲೇಶನ್
2D ಅನಿಮೇಶನ್ ತಂತ್ರಗಳು ಚಿತ್ರಗಳ ಪರಿವರ್ತನೆಯ ಕಡೆ ಹೆಚ್ಚು ಗಮನ ಕೇಂದ್ರೀಕರಿಸಿದರೆ, 3D ಅನಿಮೇಶನ್ ತಂತ್ರಗಳು ಸಾಮಾನ್ಯವಾಗಿ ವಾಸ್ತವ ಜಗತ್ತನ್ನು ನಿರ್ಮಿಸಿ ಅದರಲ್ಲಿ ಪಾತ್ರಗಳು ಮತ್ತು ವಸ್ತುಗಳು ಚಲನೆ ಮತ್ತು ಪರಸ್ಪರ ಸಂವಹನ ನಡೆಸುವಂತೆ ಮಾಡುತ್ತವೆ. 3D ಅನಿಮೇಶನ್‌ನಲ್ಲಿ ಚಿತ್ರಗಳು ನೋಡುಗನಿಗೆ ನೈಜವಾಗಿ ಕಾಣುವಂತೆ ಸೃಷ್ಟಿಸಬಹುದು.
ಇತರೆ ಅನಿಮೇಶನ್ ತಂತ್ರಗಳು
- ಡ್ರಾನ್ ಆನ್ ಫಿಲ್ಮ್ ಅನಿಮೇಶನ್ : ಈ ತಂತ್ರದಲ್ಲಿ ದೃಶ್ಯಗಳನ್ನು ದಾಖಲಿಸಿ ಫಿಲ್ಮ್‌ಸ್ಟಾಕ್‌ನಲ್ಲಿ ಬರೆದು ಚಲನಚಿತ್ರ ನಿರ್ಮಿಸುತ್ತಾರೆ. ಉದಾಹರಣೆಗೆ, ನಾರ್ಮನ್ ಮ್ಯಾಕ್‌ಲಾರೆನ್, ಲೆನ್ ಲೈ ಮತ್ತು ಸ್ಯ್ಟಾನ್ ಬ್ರೇಕೇಜ್ ಇವರ ನಿರ್ಮಾಣದ ಚಿತ್ರಗಳು.
- ಪೈಂಟ್-ಆನ್ -ಗ್ಲಾಸ್ ಅನಿಮೇಶನ್ : ಗಾಜಿನ ಮೇಲೆ ಬಿಡಿಸುವ, ಬಹುಕಾಲ ಮಿರುಗುವ ಅಥವಾ ಹಸಿಯಾಗಿರುವ ತೈಲವರ್ಣ ಚಿತ್ರಗಳ ಪರಿವರ್ತನೆ ಮೂಲಕ ಅನಿಮೇಶನ್ ಚಿತ್ರಗಳ ನಿರ್ಮಿಸಲು ಈ ತಂತ್ರ ಬಳಕೆಯಾಗುತ್ತದೆ.
- ಗುಂಡು ಸೂಜಿ ಬಳಕೆ ಮಾದರಿಯ ಅನಿಮೇಶನನಲ್ಲಿ ಚಿತ್ರಗಳನ್ನು ಪಿನ್ ಗಳ ಸಹಾಯದಿಂದ ಪರದೆಯ ಮೇಲೆ ಸೃಷ್ಟಿಸಲಾಗುತ್ತದೆ ಇದರ ಚಲನೆಯನ್ನು ರಿಮೋಟ್ ಮೂಲಕ ನಿಯಂತ್ರಿಸಲಾಗುತ್ತದೆ. ಪರದೆಯ ಬದಿಯಿಂದ ಬೆಳಕು ಹಾಯಿಸಿದಾಗ ಪಿನ್‌ಗಳು ನೆರಳನ್ನು ಸೃಷ್ಟಿಸಿ ಚಲನೆಯ ಅನುಭವವನ್ನು ಉಂಟುಮಾಡುತ್ತವೆ. ಟ್ರೆಡಿಷನಲ್ ಸೆಲ್ ಅನಿಮೇಶನ್‌ನಲ್ಲಿ ಸೃಷ್ಟಿಸಲು ಕಷ್ಟಸಾಧ್ಯವಾದ ಅನಿಮೇಶನ್ ಪರಿಣಾಮಗಳ ಸರಣಿಯನ್ನು ಬಳಸಬಹುದು. ರೇಖಾ ನಕ್ಷೆಗಳಲ್ಲಿ ಸಾಂಪ್ರದಾಯಕ ಶೈಲಿಯನ್ನು ಬಳಸಿ ಜಟಿಲ ಚಿತ್ರಗಳ ರಚನೆಯನ್ನು ಸಾಧ್ಯಗೊಳಿಸಲಾಗುತ್ತದೆ.
- ಸ್ಯಾಂಡ್ ಅನಿಮೇಶನ್ : ಈ ತಂತ್ರಗಾರಿಕೆಯಲ್ಲಿ ಗಾಜಿನ ಮೇಲೆ ಸಮಪ್ರಮಾಣದಲ್ಲಿ ಬೆಳಕು ಹಾಯಿಸಲಾಗುತ್ತದೆ. ಗಾಜಿನ ಆಕೃತಿಯ ಸುತ್ತ ಮರಳಿನ ಕಣಗಳ ಚಲನೆ ಗೋಚರವಾಗುವಂತೆ ಮಾಡಲಾಗುತ್ತದೆ . ಹೀಗೆ ಅನಿಮೇಶನ್ ಚಿತ್ರದ ಪ್ರತಿ ಚೌಕಟ್ಟುಗಳನ್ನು ಸೃಷ್ಟಿಸಲಾಗುತ್ತದೆ. ಇದರಿಂದ ಬೆಳಕಿನ ವೈದೃಶ್ಯ ಏರ್ಪಡುತ್ತದೆ. ಈ ಚಿತ್ರವನ್ನು ಅನಿಮೇಟ್ ಮಾಡಿದಾಗ ಆಕರ್ಷಕ ಪರಿಣಾಮಗಳು ಸೃಷ್ಟಿಯಾಗುತ್ತವೆ.
- ಫ್ಲಿಪ್ ಬುಕ್ : ಫ್ಲಿಪ್ ಬುಕ್ (ಇದಕ್ಕೆ ಬ್ರಿಟಿಷ್ ಇಂಗ್ಷಿಷ್‌ನಲ್ಲಿ ಫ್ಲಿಕ್ ಬುಕ್ ಎಂಬ ಹೆಸರೂ ಇದೆ.)ಸರಣಿ ಚಿತ್ರಗಳ ಹೊಂದಿರುವ ಪುಸ್ತಕ. ಪುಟಗಳು ಒಂದಾದ ನಂತರ ಒಂದು ವೇಗವಾಗಿ ತೆರೆದಂತೆ ಅವು ಅನಿಮೇಟ್‌ಆದಂತೆ ಭಾಸವಾಗುತ್ತದೆ. ಅಥವ ಚಲಿಸಿದಂತಹ ಅನುಭವ ನೀಡುತ್ತವೆ.
ಇವನ್ನು ಸಾಮಾನ್ಯವಾಗಿ ಮಕ್ಕಳಿಗಾಗಿ ಸಚಿತ್ರ ಪುಸ್ತಕಗಳಾಗಿ ಬಳಸುತ್ತಾರೆ. ಇವುಗಳನ್ನು ವಯಸ್ಕರೂ ಗಮನಿಸಬಹುದು. ಇಲ್ಲಿ ಚಿತ್ರಗಳಿಗೆ ಬದಲಾಗಿ ಪೋಟೋ ಅಥವಾ ಛಾಯಾಚಿತ್ರಗಳಿರುತ್ತವೆ. ಫ್ಲಿಪ್ ಬುಕ್‌ಗಳು ಪ್ರತ್ಯೇಕ ಪುಸ್ತಕಗಳಲ್ಲ, ಒಂದು ಸಾಮಾನ್ಯ ಪುಸ್ತಕ ಅಥವಾ ನಿಯತಕಾಲಿಕದಲ್ಲೂ ಇದನ್ನೊಂದು ವಿಶೇಷವೆಂಬಂತೆ ಪುಟದ ಮೂಲೆಗಳಲ್ಲಿ ಬಳಸಬಹುದು. ಡಿಜಿಟಲ್ ವಿಡಿಯೋಗಳನ್ನು ಅಭಿರುಚಿಗೆ ತಕ್ಕಂತೆ ಫ್ಲಿಪ್ ಬುಕ್‌ಗಳಾಗಿ ಪರಿವರ್ತಿಸಲು ಹಲವು ಸಾಫ್ಟ್‌ವೇರ್ ಮತ್ತು ವೆಬ್‌ಸೈಟ್‌ಗಳು ಲಭ್ಯವಿವೆ.
ಇತರೆ ತಂತ್ರಗಳು ಮತ್ತು ಅಳವಡಿಕೆಗಳು
- ಕ್ಯಾರೆಕ್ಟರ್ ಅನಿಮೇಶನ್
- ಚುಕಿಮೇಶನ್
- ಮಲ್ಟಿ-ಸ್ಕೆಚಿಂಗ್(ವಿವಿಧ ಕೆತ್ತನೆ ಬರಹ)
- ಸ್ಪೆಷಲ್ ಎಫೆಕ್ಟ್ಸ್ ಅನಿಮೇಶನ್ ವಿಶಿಷ್ಟ ಪರಿಣಾಮ ಬೀರುವ ಅನಿಮೇಶನ್
- ಅನಿಮ್ಯಾಟ್ರಾನಿಕ್ಸ್
- ಸ್ಟಾಪ್ ಮೋಷನ್ ಸ್ಥಿರ ಚಲನೆಯ ಚಿತ್ರ
ಇದನ್ನೂ ನೋಡಿರಿ
- ಅನಿಮೇಶನ್‌ನ 12 ಮೂಲಭೂತ ತತ್ವಗಳು
- ಪ್ರಬುದ್ದ ಅನಿಮೇಶನ್
- ಅನಿಮೇಶನ್ ಸಾಫ್ಟ್‌ವೇರ್ ಅನಿಮೇಶನ್ ತಂತ್ರಜ್ಗಾನ
- ಅನೀಮ್
- ಕಲೆ
- ಟ್ರೇಡಿಜಿಟಲ್ ಕಲೆ
- ಅವಾರ್ (ಅನಿಮೇಶನ್ ವೇರಿಯೇಬಲ್(ವ್ಯತ್ಯಾಸಗಳು ಅನಿಮೇಶನ್))
- ಕಂಪ್ಯೂಟರ್ ನಿರ್ಮಿತ ದೃಶ್ಯಾವಳಿ
- ಚಲನಚಿತ್ರ ಪ್ರಕಾರಗಳ ಪಟ್ಟಿ
- ಫ್ಯ್ಲಾಷ್ ಅನಿಮೇಶನ್ (ಚಿತ್ರಗಳು ಮತ್ತು ಟೈಮ್‌ಲೈನ್ ಸರಣಿಗಳುಗಳ ಜೊತೆ)
- ಅನಿಮೇಶನ್‌ನ ಇತಿಹಾಸ
- ಅಂತಾರಾಷ್ಟ್ರೀಯ ಅನಿಮೇಶನ್ ಟೂರ್ನಿ
- ಅನಿಮೇಶನ್ ಸ್ಟುಡಿಯೋಗಳ ಪಟ್ಟಿ
- ಅನಿಮೇಟೆಡ್ ಫೀಚರ್-ಲೆಂಥ್ ಫಿಲ್ಮ್‌ಗಳ ಪಟ್ಟಿ
- DVDಗಳಲ್ಲಿ ದೊರೆಯುವ ಅನಿಮೇಶನ್ ಕಿರುಚಿತ್ರಗಳ ಪಟ್ಟಿ
- ಅನಿಮೇಶನ್ ಕಿರುಗಥೆಗಳ ಪಟ್ಟಿ
- ಅನಿಮೇಶನ್ ದೂರದರ್ಶನ ಸರಿಣಿಗಳ ಪಟ್ಟಿ
- ಕಂಪ್ಯೂಟರ್ ಅನಿಮೇಶನ್ ಫಿಲ್ಮ್‌ಗಳ ಪಟ್ಟಿ
- ಚಲನಚಿತ್ರ ವಸ್ತುಗಳ ಪಟ್ಟಿ
- ಸ್ಟಾಪ್-ಮೋಷನ್ ಚಿತ್ರಗಳ ಪಟ್ಟಿ
- ಮೋಷನ್ ಗ್ರಾಫಿಕ್ ಡಿಸೈನ್
- ಸ್ಲೈಡ್‌ಷೋ ಅನಿಮೇಶನ್
- ಕಡ್ಡಿ ಚಿತ್ರಗಳು
- ವಯರ್ ಫ್ರೇಮ್ ಆಕೃತಿ
- ಮೋಷನ್ ಕ್ಯಾಪ್ಚರ್
- ಆಕೃತಿ ಹಾಳೆಗಳು
ಆಕರಗಳು
- CHTHO ಪ್ರೊಡ್ಯೂಸಸ್ ಡಾಕುಮೆಂಟರಿ ಆನ್ ವರ್ಲ್ಡ್ಸ್ ಓಲ್ಡೆಸ್ಟ್ ಅನಿಮೇಶನ್ . ಟೆಹ್ರಾನ್ ಟೈಮ್ಸ್ . 04-03-2008.
- ದಿ ವಿಷಯಲ್ ಲಿಂಗ್ವಿಸ್ಟ್: ಬರ್ನ್ಟ್ ಸಿಟಿ
ಅನಿಮೇಶನ್VL - Ronan, Colin A (1985). The Shorter Science and Civilisation in China: Volume 2. Cambridge University Press. ISBN 0-521-31536-0. Unknown parameter
|coauthors=
ignored (|author=
suggested) (help) - Dulac, Nicolas (2004). "Heads or Tails: The Emergence of a New Cultural Series, from the Phenakisticope to the Cinematograph". Invisible Culture: A Journal for Visual Culture. The University of Rochester. Retrieved 2006-05-13. Unknown parameter
|coauthors=
ignored (|author=
suggested) (help) - ಹಿಸ್ಟರಿ ಆಫ್ ಮೀಡಿಯಾ , ಮಿನ್ನೆಸೋಟ ವಿಶ್ವವಿದ್ಯಾಲಯ, ಮೇ 13 2006ರಂದು ಪ್ರವೇಶಿಸಲಾಗಿದೆ.
- "Zoetrope". Laura Hayes and John Howard Wileman Exhibit of Optical Toys. The North Carolina School of Science and Mathematics. 2005. Retrieved 2006-05-13.
- ಡೈಲಿಮೋಷನ್ - ಫ್ಯಾಂಟಸ್ಮಾಗೋರಿ - ಯೂನೆ ವಿಡಿಯೋ ಸಿನೆಮಾ
- ಬಾಲ್, R., ಬೆಕ್, J., ಡಿಮಾಟ್ R., ಡೆನೆರೋಫ್, H., ಜೆರ್‌ಸ್ಟೀನ್, D., ಗ್ಲ್ಯಾಡ್‌ಸ್ಟೋನ್, F., ನಾಟ್, T., ಲೀಲ್, A., ಮೇಸ್ತ್ರಿ, G., ಮ್ಯಾಲೋರಿ, M., ಮೇಯರ್‌ಸನ್, M., ಮ್ಯಾಕ್‌ಕ್ಯ್ರಾಕೆನ್, H., ಮ್ಯಾಕ್‌ಗ್ವೈರ್, D., ನಾಜೆಲ್, J., ಪ್ಯಾಟರ್ನ್, F., ಪಾಯಿಂಟರ್, R., ವೆಬ್, P., ರಾಬಿನ್‌ಸನ್, C., ರ್ಯಾನ್, W., ಸ್ಕಾಟ್, K., ಸಿಂಡರ್, A. & ವೆಬ್, G. (2004) ಅನಿಮೇಶನ್ ಕಲೆ: ಪೆನ್ಸಿಲ್‌ನಿಂದ ಪಿಕ್ಸೆಲ್‌ವರೆಗೆ, ಕಾರ್ಟೂನ್ ಇತಿಹಾಸ, ಅನೀಮ್ & CGI . ಫುಲ್‌ಹ್ಯಾಮ್ ಲಂಡನ್ .: ಫ್ಲೇಮ್ ಥ್ರೀ ಪಬ್ಲಿಷಿಂಗ್. ISBN 1-84451-140-5
- ಕ್ಯ್ರಾಫ್ಟನ್, ಡೊನಾಲ್ಡ್ (1982). ಬಿಫೋರ‍್ ಮಿಕ್ಕಿ . ಕೇಂಬ್ರಿಡ್ಜ್, ಮಸ್ಸಾಚುಸೆಟ್ಸ್.: ದಿ MIT ಪ್ರೆಸ್. ISBN 0-262-03083-7
- ಸೋಲೋಮನ್, ಚಾರ್ಲ್ಸ್ (1989). ಎನ್‌ಚಾಂಟೆಡ್ ಡ್ರಾಯಿಂಗ್ಸ್: ದಿ ಹಿಸ್ಟರಿ ಆಫ್ ಅನಿಮೇಶನ್ . ನ್ಯೂಯಾರ್ಕ್.: ರ್ಯಾಂಡಮ್ ಹೌಸ್, ಇಂಕ್. ISBN 0-394-54684-9
ಹೆಚ್ಚಿನ ಓದಿಗಾಗಿ
- ಆಂಡರ‍್ಸನ್, ಜೋಸೆಫ್ ಮತ್ತು ಬಾರ್ಬರಾ, "ದಿ ಮಿಥ್ ಆಫ್ ಪರ್‌ಸಿಸ್ಟೆನ್ಸ್ ಆಫ್ ವಿಷನ್ ರೀವಿಸಿಟೆಡ್", ಜರ್ನಲ್ ಆಫ್ ಫಿಲ್ಮ್ ಅಂಡ್ ವಿಡಿಯೋ , ಸಂಪುಟ. 45, ಸಂಖ್ಯೆ. 1 (ಸ್ಪ್ರಿಂಗ್ 1993): 3-12
- ಕಲ್‌ಹೇನ್, ಶ್ಯಾಮಸ್, ಅನಿಮೇಶನ್ ಸ್ಕ್ರಿಪ್ಟ್ ಟು ಸ್ಕ್ರೀನ್
- ಲೇಬೋರ್ನ್, ಕಿಟ್, ದಿ ಅನಿಮೇಶನ್ ಬುಕ್
- ಲೆಡೋಕ್ಸ್, ಟ್ರಿಶ್ , ರ್ಯಾನ್ನೀ, ಡೌಗ್, & ಪ್ಯಾಟರ್ನ್, ಫ್ರೆಡ್ (Ed.), ಕಂಪ್ಲೀಟ್ ಅನೀಮ್ ಗೈಡ್: ಜಾಪನೀಸ್ ಅನಿಮೇಶನ್ ಫಿಲ್ಮ್ ಡೈರೆಕ್ಟರಿ ಅಂಡ್ ರಿಸೋರ್ಸ್ ಗೈಡ್ , ಟೈಗರ‍್ ಮೌಂಟೇನ್ ಪ್ರೆಸ್ 1997
- ಲೋಯೆ, ರಿಚರ್ಡ್ & ಸ್ಕ್ನೋಟ್ಜ್, ವೋಲ್ಫ್‌ಗ್ಯಾಂಗ್ (Eds) ಲರ್ನಿಂಗ್ ವಿಥ್ ಅನಿಮೇಶನ್. ರಿಸರ್ಚ್ ಇಂಪ್ಲಿಕೇಷನ್ ಫಾರ್ ಡಿಸೈನ್ ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್, 2008
- ಮ್ಯಾಸ್ಸನ್, ಟೆರೆನ್ಸ್, CG101: ಅ ಕಂಪ್ಯೂಟರ‍್ ಗ್ರಾಫಿಕ್ಸ್ ಇಂಡಸ್ಟ್ರಿ ರೆಫರೆನ್ಸ್ ಅನನ್ಯ ಮತ್ತು ಆರಂಭಿಕ ಅನಿಮೇಶನ್ ನಿರ್ಮಾಣದ ವೈಯಕ್ತಿಕ ಇತಿಹಾಸ, ಜೊತೆಗೆ ಎಲ್ಲ ಮಟ್ಟದ ಓದುಗ ವರ್ಗಕ್ಕೆ ಉದ್ಯಮದ ವಿಸ್ತೃತ ಅಡಿಪಾಯ. ISBN 0-9778710-0-2
- ಥಾಮಸ್, ಫ್ಯ್ರಾಂಕ್ ಮತ್ತು ಜಾನ್‌ಸ್ಟನ್, ಒಲ್ಲೀ, Disney Animation: The Illusion of Life , ಅಬ್ಬೀವಿಲ್ಲೆ 1981
- ವಾಲ್ಟರ್ಸ್, ಫೇಬರ್ ಮತ್ತು ಹೆಲೆನ್ (Ed.), ಅನಿಮೇಶನ್ ಅನ್‌ಲಿಮಿಟೆಡ್: ಇನ್ನೊವೇಟಿವ್ ಶಾರ್ಟ್ ಫಿಲ್ಮ್ಸ್ ಸಿನ್ಸ್ 1940 , ಹಾರ್ಪರ್‌ಕೋಲಿನ್ಸ್ ಪಬ್ಲಿಷರ್ಸ್, 2004
- ವಿಲಯಮ್ಸ್, ರಿಚರ್ಡ್, ದಿ ಅನಿಮೇಟರ್ಸ್ ಸರ್ವೈವಲ್ ಕಿಟ್ ISBN 0-5712-0228-4
- ಬಾಬ್ ಗೋಡ್‌ಫ್ರೆ ಮತ್ತು ಅನ್ನ ಜಾಕ್ಸನ್, 'ದಿ ಡು-ಇಟ್-ಯುವರ್‌ಸೆಲ್ಫ್ ಫಿಲ್ಮ್ ಅನಿಮೇಶನ್ ಬುಕ್' BBC ಪಬ್ಲಿಕೇಷನ್ಸ್ 1974 ISBN 0-563-10829-0 ಇದು ಈಗ ಮಾರಾಟಕ್ಕೆ ಲಭ್ಯವಿಲ್ಲ ಆದರೆ ಅಮೆಜಾನ್ Uk ಯಂತಹ ಕಡೆಗಳಲ್ಲಿ ಲಭ್ಯವಿದೆ.
ಹೊರಗಿನ ಕೊಂಡಿಗಳು
![]() |
animation ಉಚಿತ ಶಬ್ದಕೋಶ ವಿಕ್ಷನರಿ ನಲ್ಲಿ ನೋಡಿ . |
![]() |
ವಿಕಿನ್ಯೂಸ್ ತಾಣದಲ್ಲಿ ಸಂಬಂಧಪಟ್ಟ ಸುದ್ದಿ ಇದೆ: Annie Awards for animation Sunday; Wikinews will be there |
![]() |
ವಿಕಿಮೀಡಿಯ ಕಣಜದಲ್ಲಿ Animation ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ . |
- ಅನಿಮೇಶನ್ ಓಪನ್ ಡೈರೆಕ್ಟರಿ ಪ್ರಾಜೆಕ್ಟ್
- Experimental Animation Techniques
- ಅನಿಮೇಶನ್‌ನ ಕಾಲಸೂಚಿ
- ಹೌ ಆನ್ ಅನಿಮೇಟೆಡ್ ಕಾರ್ಟೂನ್ ಈಸ್ ಮೇಡ್
- "ಅನಿಮ್ಯಾಂಡೋ", ಅ 12-ನಿಮಿಷಗಳ ಚಿತ್ರವಾಗಿದ್ದು, ಇದು 10 ವಿವಿಧ ಅನಿಮೇಶನ್ ತಂತ್ರಗಳನ್ನು ಪ್ರದರ್ಶಿಸುತ್ತದೆ.(ಈ ತಂತ್ರಗಳನ್ನು ಹೇಗೆ ಬಳಸಬೇಕೆಂಬ ಬಗ್ಗೆಯೂ ವಿವರಣೆ ಇದೆ).