ಅಂತರಜಾಲ ಸಿನೆಮಾ ದತ್ತಸಂಚಯ
ಐ ಎಮ್ ಡಿ ಬಿ (ಇಂಟರ್ನೆಟ್ ಮೂವಿ ಡೇಟಾಬೇಸ್) (ಅಂತರಜಾಲ ಸಿನೆಮಾ ದತ್ತಸಂಚಯ).ಇದು ಬಹಳ ಜನಪ್ರಿಯವಾಗಿರುವ ಅಂತಾರಾಷ್ಟ್ರೀಯ ಚಲನಚಿತ್ರ, ದೂರದರ್ಶನ ಕಾರ್ಯಕ್ರಮಗಳು, ವೀಡಿಯೋ ಆಟಗಳು ಹಾಗೂ ಪ್ರಖ್ಯಾತ (ಚಿತ್ರೋದ್ಯಮದ) ವ್ಯಕ್ತಿಗಳ ಹಾಗೂ ಪಾತ್ರಗಳ ಮಾಹಿತಿಯನ್ನೊಳಗೊಂಡ ಅಂತರ್ಜಾಲ ದತ್ತಾಂಶ ಸಂಗ್ರಹ ಜಾಲತಾಣ. ಇದು ೧೭ ಅಕ್ಟೊಬರ್ ೧೯೯೦ ರಂದು ಪ್ರಾರಂಭಗೊಂಡಿತು.
![]() | |
ಜಾಲದ ವಿಳಾಸ | imdb.com |
---|---|
ವಾಣಿಜ್ಯ ತಾಣ? | Yes |
ತಾಣದ ಪ್ರಕಾರ | Online database for movies, television, and video games |
ನೊಂದಾವಣಿ | Registration is optional for members to participate in discussions, comments, ratings, and voting. |
ಲಭ್ಯವಿರುವ ಭಾಷೆ | English |
ಒಡೆಯ | Amazon.com |
ಸೃಷ್ಟಿಸಿದ್ದು | Col Needham (CEO) |
ಪ್ರಾರಂಭಿಸಿದ್ದು | ಅಕ್ಟೋಬರ್ 17, 1990 |
ಅಲೆಕ್ಸ ಸ್ಥಾನ | ![]() |
ಸಧ್ಯದ ಸ್ಥಿತಿ | Active |
ಈ ಜಾಲತಾಣದಲ್ಲಿ ಯಾವುದೇ ಚಲನಚಿತ್ರದ ಬಗ್ಗೆ (ಪ್ರಮುಖವಾಗಿ ಆಂಗ್ಲ ಭಾಷೆಯ) ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ. ಉದಾಹರಣೆಗೆ ಚಲನಚಿತ್ರಗಳ ವಿಮರ್ಶೆ, ಕಥಾ ಸಾರಾಂಶ ಹಾಗೂ ಅಂಕ (ರೇಟಿಂಗ್) ಕೊಡಲಾಗಿರುತ್ತದೆ. ಅಲ್ಲದೇ ಇದರಲ್ಲಿ ಅತ್ಯುತ್ತಮ ೨೫೦ ಚಲನಚಿತ್ರಗಳ ಪಟ್ಟಿಯೂ ಇದೆ.
ಈ ಜಾಲತಾಣದಲ್ಲಿ ಹಲವಾರು ಹಿಂದಿ ಹಾಗೂ ಇತರೆ ಭಾರತೀಯ ಭಾಷೆಗಳ (ಕನ್ನಡವನ್ನು ಒಳಗೊಂಡು) ಚಲನಚಿತ್ರಗಳ ಮಾಹಿತಿಯೂ ಇದೆ. ಬಳಕೆದಾರರು ಸುಮಾರು ಆರು ಸಾವಿರ ದೂರದರ್ಶಣದಲ್ಲಿ ಬರು ವ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು.ಚಲನಚಿತ್ರ ಪ್ರಿಯರಿಗೆ ಇದೊಂದು ಉತ್ತಮ ಮಾಹಿತಿಪೂರ್ಣ ಅಂತರ್ಜಾಲ ತಾಣ.
ಆಧಾರ
ಉಲ್ಲೇಖಗಳು
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.